ಕೊವಿಡ್ ಟೆಸ್ಟ್ ಮಾಡಲು ಬಂದ ಸಿಬ್ಬಂದಿಗೆ ಮೈಸೂರು ಮಹಿಳೆ ಆವಾಜ್

ಕೊವಿಡ್ ಟೆಸ್ಟ್ ಮಾಡಲು ಬಂದ ಸಿಬ್ಬಂದಿಗೆ ಮೈಸೂರು ಮಹಿಳೆ ಆವಾಜ್
ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದ ಮಹಿಳೆ

ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಹಿನ್ನೆಲೆ ಗ್ರಾಮಸ್ಥರ ಆರೋಗ್ಯ ತಪಾಸಣೆಗೆಂದು ಅಧಿಕಾರಿಗಳು ತೆರಳಿದ್ದರು. ಈ ವೇಳೆ ಅಧಿಕಾರಿಗಳೊಂದಿಗೆ ಆದಿವಾಸಿ ಮಹಿಳೆ ವಾಗ್ವಾದಕ್ಕಿಳಿದಿದ್ದರು. ಬೀರತಮ್ಮನಹಳ್ಳಿ ಆದಿವಾಸಿ ಹಾಡಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಡಿ ಇದಾಗಿದೆ.

TV9kannada Web Team

| Edited By: sandhya thejappa

Jun 02, 2021 | 11:50 AM

ಮೈಸೂರು: ಆರೋಗ್ಯ ತಪಾಸಣೆ ಮಾಡಲು ಬಂದ ಸಿಬ್ಬಂದಿಗೆ ಮಹಿಳೆಯೊಬ್ಬರು ಧಮ್ಕಿ ಹಾಕಿರುವ ಘಟನೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಬೀರತಮ್ಮನಹಳ್ಳಿ ಗಿರಿಜನ ಹಾಡಿಯ ಮಹಿಳೆ, ನಾವು ರಾಗಿ ಮುದ್ದೆ ತಿನ್ನೋರು. ನಮಗೆ ರೋಗ ಬರಲ್ಲ. ನೀವು ಟೆಸ್ಟ್ ಮಾಡಿ ರೋಗ ಕಂಡುಹಿಡಿಯುವುದು ಬೇಡ. ನಮಗೆ ರೋಗ ಬಂದರೆ ನಾವೇ ವಾಸಿ ಮಾಡಿಕೊಳ್ಳುತ್ತೇವೆ. ನೀವ್ಯಾರೂ ನಮ್ಮ ಹಾಡಿಗೆ ಕಾಲು ಇಡೋದು ಬೇಡ. ಇಲ್ಲಿಂದ ಮೊದಲು ವಾಪಸ್ ಹೋಗಿ ಎಂದು ಆವಾಜ್ ಹಾಕಿದ್ದಾರೆ.

ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಹಿನ್ನೆಲೆ ಗ್ರಾಮಸ್ಥರ ಆರೋಗ್ಯ ತಪಾಸಣೆಗೆಂದು ಅಧಿಕಾರಿಗಳು ತೆರಳಿದ್ದರು. ಈ ವೇಳೆ ಅಧಿಕಾರಿಗಳೊಂದಿಗೆ ಆದಿವಾಸಿ ಮಹಿಳೆ ವಾಗ್ವಾದಕ್ಕಿಳಿದಿದ್ದರು. ಬೀರತಮ್ಮನಹಳ್ಳಿ ಆದಿವಾಸಿ ಹಾಡಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಡಿ ಇದಾಗಿದೆ. ಈ ಪೈಕಿ ಕೇವಲ 7 ಮಂದಿ ತಪಾಸಣೆಗೆ ಒಳಗಾಗಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದ ದಿಟ್ಟ ನಿರ್ಧಾರ ಉಡುಪಿ: ಮಹಾಮಾರಿ ಕೊರೊನಾ ಸೋಂಕನ್ನು ತಡೆಗಟ್ಟಲು ಜಿಲ್ಲಾಡಳಿತ ಮತ್ತೊಂದು ದಿಟ್ಟ ನಿರ್ಧಾರ ಮಾಡಿದೆ. ಕೊರೊನಾ ಪಾಸಿಟಿವ್ ಕೇಸ್ 50ಕ್ಕೂ ಹೆಚ್ಚಿರುವ ಗ್ರಾಮಗಳನ್ನು ಸಂಪೂರ್ಣ ಲಾಕ್​ಡೌಮ್​ ಮಾಡಲು ನಿರ್ಧರಿಸಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 165 ಗ್ರಾಮಗಳಲ್ಲಿ 33 ಗ್ರಾಮಗಳು ಸಂಪೂರ್ಣ ಲಾಕ್​ಡೌನ್​ ಆಗಲಿದೆ. ಮೆಡಿಕಲ್ ಶಾಪ್, ಕೃಷಿ ಚಟುವಟಿಕೆಗಳಿಗೆ ಮಾತ್ರ ಅವಕಾಶವಿದ್ದು, ಅನುಮತಿ ಪಡೆದ ಮದುವೆಗೆ ಅವಕಾಶ ನೀಡಲಾಗಿದೆ. ಗ್ರಾಮದ ಗಡಿಯಲ್ಲಿ ಬ್ಯಾರೀಗೇಟ್ ಅಳವಡಿಸಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. 33 ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈಗಾಗಲೇ ಜಿಲ್ಲೆಯಲ್ಲಿ 19 ಶೇಕಡಾ ಪಾಸಿಟಿವಿಟಿ ರೇಟ್ ಕಂಡುಬಂದಿದ್ದು, ಶೇ.5 ಕ್ಕೆ ಪಾಸಿಟಿವಿಟಿ ರೇಟ್ ಇಳಿಸುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ.

ಇದನ್ನೂ ಓದಿ

ಚಿಕ್ಕಬಳ್ಳಾಪುರ: ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ 8 ತಿಂಗಳ ಗರ್ಭಿಣಿ ಸಾವು

ಆನಂದಯ್ಯರ ಆಯುರ್ವೇದಿಕ್ ಔಷಧ ನೀಡಲು ಕೋರ್ಟ್ ಅಸ್ತು, ನಾಳೆಯಿಂದ ಕೊವಿಡ್‌ಗೆ ಔಷಧ ವಿತರಣೆ ಶುರು

(Mysore women gherao at Covid health workers who came for door step checkup video goes viral)

Follow us on

Related Stories

Most Read Stories

Click on your DTH Provider to Add TV9 Kannada