AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಯಂ ಲಾಕ್ ಡೌನ್! ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿದ್ರೂ ಜನ ಬರ್ತಿಲ್ಲ: ಪ್ರವಾಸಿ ಕೇಂದ್ರಗಳು ಬಿಕೋ ಅನ್ನುತ್ತಿವೆ!

Coronavirus in Mysuru: ಜಿಲ್ಲೆಯ ನಂಜುಡೇಶ್ವರನ ದರ್ಶನಕ್ಕೆ ಸ್ಥಳೀಯ ಆಡಳಿತ ಅವಕಾಶ ನೀಡಿಲ್ಲ. ಹಾಗಾಗಿ ಜನ ಅತ್ತ ಸುಳಿಯುತ್ತಿಲ್ಲ. ಇನ್ನು, ಇತ್ತ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿದ್ದರೂ ಸಹ‌ ಜನರು ಬರುತ್ತಿಲ್ಲ. ಇದಲ್ಲದೆ, ವೀಕೆಂಡ್ ಸಮಯದಲ್ಲಿ ಜನಜಂಗುಳಿ ಇರುತ್ತಿದ್ದ ಜಾಗಗಳಲ್ಲಿಯೂ ಜನ ಸೇರುತ್ತಿಲ್ಲ. ಎಲ್ಲಾ ಪ್ರವಾಸಿ ತಾಣಗಳಲ್ಲೂ ಖಾಲಿ ಖಾಲಿ ದೃಶ್ಯಗಳು ಕಾಣುತ್ತಿವೆ.

ಸ್ವಯಂ ಲಾಕ್ ಡೌನ್! ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿದ್ರೂ ಜನ ಬರ್ತಿಲ್ಲ: ಪ್ರವಾಸಿ ಕೇಂದ್ರಗಳು ಬಿಕೋ ಅನ್ನುತ್ತಿವೆ!
ಇತ್ತ ಚಾಮುಂಡೇಶ್ವರಿ ದರ್ಶನಕ್ಕೆ ಬಂದ ಭಕ್ತರೊಬ್ಬರು ಕೈಯೆತ್ತಿ ಮುಗಿದರು.
ಸಾಧು ಶ್ರೀನಾಥ್​
|

Updated on:Apr 17, 2021 | 11:43 AM

Share

ಮೈಸೂರು: ಕೊರೊನಾ ಮಹಾಮಾರಿ ಮತ್ತೊಮ್ಮೆ ತನ್ನ ಆರ್ಭಟ ಮುಂದುವರಿಸಿದೆ. ಅದು ಸಾಂಸ್ಕೃತಿಕ ನಗರಿ ಮೈಸೂರನ್ನೂ ಬಿಟ್ಟಿಲ್ಲ. ವಾಸ್ತವವಾಗಿ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಕಾಟ ತುಸು ಹೆಚ್ಚೇ ಎಂಬಂತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಂಡಿದೆ. ಪ್ರವಾಸೀ ಕೇಂದ್ರಗಳಿಗೆ ಬೀಗ ಹಾಕಿರುವ ಜಿಲ್ಲಾಡಳಿತ, ಯಾವುದೇ ಜನಜಂಗುಳಿಗೂ ಅವಕಾಶ ನೀಡಿಲ್ಲ. ಆದರೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ನೀಡಿದೆ. ಆದರೆ ರಾಜ್ಯದ ಜನತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸ್ವಯಂ ನಿರ್ಬಂಧ ಹೇರಿಕೊಂಡು ಗುಂಪುಗೂಡುವ ಸ್ಥಳಗಳಿಂದ ದೂರವೇ ಉಳಿದಿದ್ದಾರೆ.

ಜಿಲ್ಲೆಯ ನಂಜುಡೇಶ್ವರನ ದರ್ಶನಕ್ಕೆ ಸ್ಥಳೀಯ ಆಡಳಿತ ಅವಕಾಶ ನೀಡಿಲ್ಲ. ಹಾಗಾಗಿ ಜನ ಅತ್ತ ಸುಳಿಯುತ್ತಿಲ್ಲ. ಇನ್ನು, ಇತ್ತ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿದ್ದರೂ ಸಹ‌ ಜನರು ಬರುತ್ತಿಲ್ಲ. ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಇಂದು ಬೆಟ್ಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಇದ್ದಾರೆ. ಜನರು ಸ್ವಯಂ ಲಾಕ್ ಡೌನ್ ಮಾಡಿಕೊಂಡಿದ್ದಾರೆ.

tourist spots go without tourists in Mysore district due to Coronavirus (3)

ಚಾಮುಂಡೇಶ್ವರಿ ಬೆಟ್ಟದಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಜನ ಇದ್ದಾರೆ.

ಇದಲ್ಲದೆ, ವೀಕೆಂಡ್ ಸಮಯದಲ್ಲಿ ಜನಜಂಗುಳಿ ಇರುತ್ತಿದ್ದ ಜಾಗಗಳಲ್ಲಿಯೂ ಜನ ಸೇರುತ್ತಿಲ್ಲ. ಎಲ್ಲಾ ಪ್ರವಾಸಿ ತಾಣಗಳಲ್ಲೂ ಖಾಲಿ ಖಾಲಿ ದೃಶ್ಯಗಳು ಕಾಣುತ್ತಿವೆ.

ಕೊರೋನಾ ಎರಡನೇ ಅಲೆಯ ಭೀಕರತೆ ಹಿನ್ನೆಲೆ ನೆರೆಯ ಮಂಡ್ಯ‌ ಜಿಲ್ಲೆಯ ದೇವಸ್ಥಾನಗಳು ಒಂದು ತಿಂಗಳ ಕಾಲ ಬಂದ್ ಆಗಿವೆ‌. ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ನಿಮಿಷಾಂಭ ಹಾಗೂ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಇತರೆ ದೇವಸ್ಥಾನಗಳು ಮೇ 15 ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

tourist spots go without tourists in Mysore district due to Coronavirus (4)

ಚಾಮುಂಡೇಶ್ವರಿ ದರ್ಶನ ಮಾಡಿದ ಸಚಿವ ವಿ.ಸೋಮಣ್ಣಸಚಿವ ವಿ.ಸೋಮಣ್ಣ ಅವರು ಪತ್ನಿ ಜೊತೆ ತೆರಳಿ ಚಾಮುಂಡಿ ತಾಯಿಯ ದರ್ಶನ ಪಡೆದರು. ಚಾಮುಂಡೇಶ್ವರಿಗೆ ಸಚಿವ ಸೋಮಣ್ಣ ವಿಶೇಷ ಪೂಜೆ ಸಲ್ಲಿಸಿದರು.

tourist spots go without tourists in Mysore district due to Coronavirus (5)

ಸೋಮಣ್ಣ ಮತ್ತು ಪತ್ನಿ ಚಾಮುಂಡಿ ತಾಯಿಯ ದರ್ಶನ ಪಡೆದರು

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿರುವ ಸಚಿವ ಸೋಮಣ್ಣ ಅವರು ನಾಡಿನ ಅಧಿದೇವತೆಯ ದರ್ಶನ ಪಡೆದರು.

tourist spots go without tourists in Mysore district due to Coronavirus (1)

ಸಚಿವ ಸೋಮಣ್ಣ ಚಾಮುಂಡೇಶ್ವರಿ ದೇಗುಲದ ಪ್ರಾಂಗಣದಲ್ಲಿ

Published On - 11:33 am, Sat, 17 April 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?