ಪಣಜಿ: ಗೋವಾದ (Goa) ರೆಸಾರ್ಟ್‌ಗೆ ಬಂದಿದ್ದ ಪ್ರವಾಸಿಗರ ಮೇಲೆ ಕತ್ತಿ ಮತ್ತು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಾ.12ರಂದು ಅಂಜುನಾ ಪ್ರದೇಶದ ರೆಸಾರ್ಟ್‌ನಲ್ಲಿ ಸಣ್ಣ ಜಗಳ ಆರಂಭವಾಗಿ ಅಲ್ಲಿದ್ದ ಪ್ರವಾಸಿಗರ ಗುಂಪಿನ ಮೇಲೆ ಕತ್ತಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ಪ್ರವಾಸಿಗರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ಬಗ್ಗೆ ಒಂದು ವಿಡಿಯೊವನ್ನು ಪ್ರವಾಸಿಗರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಅವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇಲ್ಲಿಯವರೆಗೆ, ಸ್ಪಾಜಿಯೊ ಲೀಸರ್ ರೆಸಾರ್ಟ್‌ನಲ್ಲಿ ಗುಂಪಿನ ಮೇಲೆ ದಾಳಿ ಮಾಡಿದ್ದಕ್ಕಾಗಿ ಮೂವರನ್ನು ಬಂಧಿಸಲಾಗಿದೆ.
ಅಂಜುನಾದಲ್ಲಿ ನಡೆದ ಹಿಂಸಾತ್ಮಕ ಘಟನೆ ಆಘಾತಕಾರಿ ಮತ್ತು ಅಸಹನೀಯವಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಇಂತಹ ಸಮಾಜ ವಿರೋಧಿ ಶಕ್ತಿಗಳು ರಾಜ್ಯದ ಜನರ ಶಾಂತಿ ಮತ್ತು ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿದ್ದು, ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ಸಾವಂತ್ ಟ್ವೀಟ್ ಮಾಡಿದ್ದಾರೆ.
#Attack– Police now arrest Royston Dias, Nyron Dias, Kashinath Agarwadekar (all from Anjuna). SP Nidhin Valsan has informed that after the report in the media, section 307 of IPC has been added in the FIR and a departmental action initiated against the Anjuna PS staff#Goa pic.twitter.com/FwLdlelzFc
— In Goa 24×7 (@InGoa24x7) March 13, 2023
ಈ ಘಟನೆಯಲ್ಲಿ ಗಾಯಗೊಂಡ ಒಬ್ಬರಲ್ಲಿ ಜತಿನ್ ಶರ್ಮಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಆಘಾತಕಾರಿ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಂಜುನಾನಲ್ಲಿರುವ ಹೋಟೆಲ್‌ನ ಹೊರಗೆ ರಾಯ್ಸ್ಟನ್ ಡಯಾಸ್, ನೈರಾನ್ ಡಯಾಸ್ ಮತ್ತು ಕಾಶಿನಾಥ್ ಅಗರವಾಡೇಕರ್ ಮತ್ತು ಅವರ ಕುಟುಂಬದ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಗೋವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಹೆಣ್ಣು ಮಕ್ಕಳು ರಾತ್ರಿ ಹೊರಗೆ ಹೋಗಿದ್ದೇಕೆ ಎಂದು ಕೇಳಿದ ಸಿಎಂ ಪ್ರಮೋದ್ ಸಾವಂತ್
ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ದುಷ್ಕರ್ಮಿಗಳ ಗುಂಪೊಂದು ಜತಿನ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಈ ವೀಡಿಯೊದಲ್ಲಿ ತಮ್ಮ ಸಹಾಯಕ್ಕಾಗಿ ಮಳೆಯರು ಕರೆಯುತ್ತಿದ್ದನ್ನು ಕಾಣಬಹುದು. ಹೋಟೆಲ್ ಸಿಬ್ಬಂದಿಯೊಂದಿಗಿನ ಸಮಸ್ಯೆಯನ್ನು ಅವರು ಹೋಟೆಲ್ ವ್ಯವಸ್ಥಾಪಕರಿಗೆ ವರದಿ ಮಾಡಿದ್ದಾರೆ. ಈ ಬಳಿಕ ದೊಡ್ಡ ಜಗಳ ನಡೆದಿದೆ ಎಂದು ಶರ್ಮಾ ಹೇಳಿದ್ದಾರೆ. ಹೊಟೇಲ್ ಸಮಸ್ಯೆಯ ಬಗ್ಗೆ ಮಾತನಾಡಿದಕ್ಕೆ. ಹೊಟೇಲ್ ಸಿಬ್ಬಂದಿ ತನ್ನ ಕೆಲವು ಸ್ನೇಹಿತರನ್ನು ಕರೆದು ಹೋಟೆಲ್ ಹೊರಗೆ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾನೆ.
ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ. ಆದರೆ ಆರೋಪಿಗಳನ್ನು ಪೊಲೀಸರು ಸ್ವಲ್ಪ ಹೊತ್ತಿನಲ್ಲಿ ಬಿಡುಗಡೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಸೇರಿಸಿ 3 ಆರೋಪಿಗಳನ್ನು ಬಂಧಿಸಲಾಗಿದೆ. ಅಂಜುನಾ ಪೊಲೀಸ್ ಠಾಣೆಯ ಕರ್ತವ್ಯಲೋಪ ಎಸಗಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನಿಧಿನ್ ವಲ್ಸನ್ ಹೇಳಿದ್ದಾರೆ.
Published On - 3:04 pm, Mon, 13 March 23