ನವದೆಹಲಿ, ಡಿಸೆಂಬರ್ 14: ಲೋಕಸಭೆ ಭದ್ರಾತಾ ಲೋಪ ಘಟನೆ ವಿಷಾದನೀಯ ಮತ್ತು ಖಂಡನೀಯ. ಸಂಸದ ಪ್ರತಾಪ್ ಸಿಂಹ ಅವರು ಯಾವ ಹಿನ್ನಲೆಯಲ್ಲಿ ಪಾಸ್ ಕೊಟ್ಟರು ಎಲ್ಲವೂ ತನಿಖೆ ಆಗಲಿದೆ. ಮೈಸೂರಿನವರು ಎನ್ನುವ ಕಾರಣಕ್ಕೆ ಪಾಸ್ ಕೊಟ್ಟೆ ಎಂದು ನನ್ನ ಬಳಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರನ್ನು ಯಾವ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ಕ್ಷೇತ್ರದ ಜನರು ಬಂದಾಗ ಪಾಸ್ ಕೊಡುವುದು ಸಹಜ. ಪಾಸ್ ಕೊಟ್ಟ ವಿಚಾರವೂ ತನಿಖೆಗೆ ಒಳಪಡಲಿದೆ. ಮೂರು ಸಲ ಪಾಸ್ ಪಡೆದಿರುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪ್ರತಾಪ್ ಸಿಂಹ ಅಮಾನತಿಗೆ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಮಹುವಾ ಮೊಯಿತ್ರಾ ಪ್ರಕರಣಕ್ಕೆ ಹೋಲಿಸಬೇಡಿ. ಇದು ಬೇರೆ ರೀತಿಯ ಪ್ರಕರಣ. ಜನಪ್ರತಿನಿಧಿಯಾಗಿ ಅವರು ಒಳ್ಳೆ ಉದ್ದೇಶದಿಂದ ಪಾಸ್ ಕೊಟ್ಟಿರುತ್ತಾರೆ. ಬೇರೆ ಉದ್ದೇಶಕ್ಕೆ ಬಳಕೆಯಾಗಿದೆ. ಎರಡನ್ನೂ ಹೋಲಿಸುವುದು ತಪ್ಪು. ಮಹುವಾ ಮೊಯಿತ್ರಾ ಪರವಾಗಿ ಬೇರೆಯವರು ಲಾಗಿಂನ್ ಮಾಡಿ ಪ್ರಶ್ನೆ ಕೇಳುತ್ತಾರೆ. ಇದನ್ನು ತನಿಖೆ ಮಾಡಿ ಅವರನ್ನು ಅಮಾನತು ಮಾಡಿದೆ ಎಂದರು.
ಇದನ್ನೂ ಓದಿ: ಸಂಸತ್ನ ಒಳಗೆ ನುಗ್ಗಿದ ಯುವಕರ ಉದ್ದೇಶವೇನಿತ್ತು? ಪೊಲೀಸ್ ವಿಚಾರಣೆ ವೇಳೆ ಅವರು ಹೇಳಿದ್ದು ಹೀಗೆ
ಘಟನೆಯ ಬಳಿಕ ಲೋಕಸಭೆ ಸ್ಪೀಕರ್ ಸಭಾ ನಾಯಕರ ಸಭೆ ನಡೆಸಿದರು. ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಘಟನೆಯಿಂದ ಪಾಠ ಕಲಿತು ಮುಂದೆ ತೆಗೆದುಕೊಳ್ಳುವ ಕ್ರಮ ಬಗ್ಗೆ ಸಮಾಲೋಚನೆ ಮಾಡಲಾಯಿತು. ಎಲ್ಲರ ಸಲಹೆ ಪಡೆದು ಸಂಸತ್ ಸುರಕ್ಷೆ ಮಾಡುವುದು ನಮ್ಮ ಉದ್ದೇಶ ಎಂದಿದ್ದಾರೆ.
1971 ರಿಂದ ದಾಖಲೆಗಳ ಪ್ರಕಾರ ಇಂತಹ ಘಟನೆಯಲ್ಲಿ ಸ್ಪೀಕರ್ ಕೈಗೊಂಡಿರುವ ಕ್ರಮಗಳಂತೆ ಈ ಬಾರಿಯೂ ಕ್ರಮ ತೆಗೆದುಕೊಳ್ಳಲಾಗಿದೆ. ಆಯುಧ ಸೇರಿದಂತೆ ಇತ್ಯಾದಿ ವಸ್ತು ಪಡೆದು ಗ್ಯಾಲರಿಗೆ ಬಂದಿರುವುದಿದೆ. ಇಂತಹ ಘಟನೆಯಲ್ಲಿ ಅಂದಿನ ಸ್ಪೀಕರ್ ತೆಗೆದುಕೊಂಡ ಪರಂಪರೆಯನ್ನು ಪರಿಶೀಲಿಸಿ ಅಂತಯೇ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಗೃಹ ಸಚಿವಲಾಯಕ್ಕೆ ಪತ್ರ ಬರೆದು ಉನ್ನತ ತನಿಖೆಗೆ ಸ್ಪೀಕರ್ ಆದೇಶಿಸಿದ್ದಾರೆ ಎಂದರು.
ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ: ಪ್ರತಿಭಟಿಸಿದ ಪ್ರತಿಪಕ್ಷಗಳ 13 ಸಂಸದರು ಲೋಕಸಭೆಯಿಂದ ಅಮಾನತು
ಸದನದ ಮುಖ್ಯಸ್ಥರು ಸ್ಪೀಕರ್ ಅವರ ನಿರ್ಣಯ ಅಂತಿಮ. ಭದ್ರತೆಯನ್ನು ಅವರೇ ಅಂತಿಮ ಮಾಡುತ್ತಾರೆ
ಸರ್ಕಾರದ ಪಾತ್ರ ಇಲ್ಲಿ ಇರುವುದಿಲ್ಲ. ತನಿಖೆಗೆ ನೀಡಿದ ಬಳಿಕ ಸದನ ಶುರುವಾಯಿತು. ಈ ವೇಳೆ ವಿರೋಧ ಪಕ್ಷಗಳ ಗಲಾಟೆ ಆರಂಭಿಸಿದರು. ಮತ್ತೆ ಸಭೆ ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿತು. ಆದರೆ ಇಂದು ಮತ್ತೆ ವಿಪಕ್ಷಗಳು ಗಲಾಟೆ ಆರಂಭಿಸಿದರು. ತಪ್ಪಿಸ್ಥರರಿಗೆ ಶಿಕ್ಷೆ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ. ದೇಶದ ಭದ್ರತೆಯ ವಿಚಾರದಲ್ಲಿ ಸ್ಪೀಕರ್ ಆದೇಶದಂತೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.