2005ರಲ್ಲಿ ನಡೆದ ಬಹುಜನ ಸಮಾಜ ಪಕ್ಷದ (BSP) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ (Umesh Pal)ಮತ್ತು ಆತನ ಪೊಲೀಸ್ ಕಾವಲುಗಾರನ ಹತ್ಯೆಯಲ್ಲಿ ಭಾಗಿಯಾದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು (UP Police) ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆನ್ನು.ಪ್ರಯಾಗ್‌ರಾಜ್‌ನ ಧೂಮಂಗಂಜ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅರ್ಬಾಜ್ ಎಂದು ಗುರುತಿಸಲಾದ ಆರೋಪಿಯ ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಧೂಮಂಗಂಜ್‌ನ ನೆಹರು ಪಾರ್ಕ್ ಬಳಿ ಸ್ಥಳದಿಂದ ಮೋಟಾರ್‌ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದುಷ್ಕರ್ಮಿಗಳು ಬಂದು ಧೂಮಂಗಂಜ್ ಪ್ರದೇಶದಲ್ಲಿ ವಕೀಲ ಉಮೇಶ್ ಪಾಲ್ (48) ಮತ್ತು ಅವರ ಇಬ್ಬರು ಗನ್ನರ್ ಮೇಲೆ ದಾಳಿ ಮಾಡಿದ ಕಾರನ್ನು ಅರ್ಬಾಜ್ ಓಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರು ಅದೇ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು. ಉಮೇಶ್ ಕಾರಿನಿಂದ ಹೊರಬರುತ್ತಿದ್ದಾಗ ಈ ಘಟನೆ ನಡೆದಿದೆ.
ದಾಳಿಯಲ್ಲಿ ಉಮೇಶ್ ಮತ್ತು ಗನ್ನರ್‌ಗಳಲ್ಲಿ ಒಬ್ಬರಾದ ಸಂದೀಪ್ ನಿಶಾದ್ ಮೃತಪಟ್ಟರೆ, ಎರಡನೇ ಗನ್ನರ್ ರಾಘವೇಂದ್ರ ಸಿಂಗ್ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು.
दि0 24/2/23 को गवाह उमेश पाल की नृशंस हत्या का आरोपी अरबाज़ @prayagraj_pol से प्रयागराज में हुई मुठभेड़ में घायल होने के उपरांत अस्पताल में मृत घोषित हुआ है।#UPPolice माफियाओं एवं अपराधियों के प्रति ज़ीरो टॉलरेंस की नीति के तहत सख़्त कार्यवाही करेगी।
Prashant Kr. ADG LO UP
1/2 pic.twitter.com/kBgaVVOIxq— UP POLICE (@Uppolice) February 27, 2023
ಉಮೇಶ್ ಅವರು ಪತ್ನಿ ಜಯ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಜೈಲಿನಲ್ಲಿರುವ ಮಾಜಿ ಸಂಸದ ಅತೀಕ್ ಅಹ್ಮದ್, ಅವರ ಪತ್ನಿ ಸಹಿಸ್ತಾ ಪರ್ವೀನ್, ಅವರ ಇಬ್ಬರು ಪುತ್ರರು, ಅವರ ಕಿರಿಯ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಮತ್ತು ಇತರರ ವಿರುದ್ಧ ಜಯಾ ದೂರಿನ ಆಧಾರದ ಮೇಲೆ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2005ರ ಜನವರಿ 25ರಂದು ನಡೆದಿದ್ದ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆಗೆ ಪತಿ ಉಮೇಶ್ ಪ್ರತ್ಯಕ್ಷದರ್ಶಿಯಾಗಿದ್ದರು ಎಂದು ಜಯಾ ಹೇಳಿದ್ದಾರೆ. 2006ರಲ್ಲಿ ಅಹ್ಮದ್ ಮತ್ತು ಆತನ ಸಹಚರರು ಉಮೇಶ್‌ನನ್ನು ಅಪಹರಿಸಿ ನ್ಯಾಯಾಲಯದಲ್ಲಿ ಅವರ ಪರವಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದರು ಎಂದು ಜಯಾ ಆರೋಪಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:31 pm, Mon, 27 February 23