ತಂಗಿಯನ್ನು ನಂಬಿಸಿ ಮೋಸ ಮಾಡಿದ್ದಕ್ಕೆ ಮೈದುನನ ಖಾಸಗಿ ಭಾಗ ಕತ್ತರಿಸಿದ ಮಹಿಳೆ

ತಂಗಿಯನ್ನು ಮದುವೆ(Marriage)ಯಾಗುವುದಾಗಿ ನಂಬಿಸಿ ಆಕೆಯ ಜತೆ ಸಂಬಂಧ ಬೆಳೆಸಿ ಬಳಿಕ ಕೈಕೊಟ್ಟಿದ್ದಕ್ಕೆ ಮಹಿಳೆಯೊಬ್ಬಳು ಮೈದುನನ ಖಾಸಗಿ ಭಾಗವನ್ನು ಕತ್ತರಿಸಿರುವ ಘಟನೆ ಪ್ರಯಾಗ್​​ರಾಜ್​​ನಲ್ಲಿ ನಡೆದಿದೆ. ಈ ಘಟನೆ ಬಳಿಕ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಕುಟುಂಬದೊಳಗಿನ ಸೇಡು ಮತ್ತು ಭಾವನಾತ್ಮಕ ಪ್ರಕ್ಷುಬ್ಧತೆಯಿಂದ ಈ ಆಘಾತಕಾರಿ ಕೃತ್ಯ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ.

ತಂಗಿಯನ್ನು ನಂಬಿಸಿ ಮೋಸ ಮಾಡಿದ್ದಕ್ಕೆ ಮೈದುನನ ಖಾಸಗಿ ಭಾಗ ಕತ್ತರಿಸಿದ ಮಹಿಳೆ
ಕ್ರೈಂ

Updated on: Oct 21, 2025 | 7:38 AM

ಪ್ರಯಾಗ್​ರಾಜ್, ಅಕ್ಟೋಬರ್ 21: ತಂಗಿಯನ್ನು ಮದುವೆ(Marriage)ಯಾಗುವುದಾಗಿ ನಂಬಿಸಿ ಆಕೆಯ ಜತೆ ಸಂಬಂಧ ಬೆಳೆಸಿ ಬಳಿಕ ಕೈಕೊಟ್ಟಿದ್ದಕ್ಕೆ ಮಹಿಳೆಯೊಬ್ಬಳು ಮೈದುನನ ಖಾಸಗಿ ಭಾಗವನ್ನು ಕತ್ತರಿಸಿರುವ ಘಟನೆ ಪ್ರಯಾಗ್​​ರಾಜ್​​ನಲ್ಲಿ ನಡೆದಿದೆ. ಈ ಘಟನೆ ಬಳಿಕ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಕುಟುಂಬದೊಳಗಿನ ಸೇಡು ಮತ್ತು ಭಾವನಾತ್ಮಕ ಪ್ರಕ್ಷುಬ್ಧತೆಯಿಂದ ಈ ಆಘಾತಕಾರಿ ಕೃತ್ಯ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ.

ಅಕ್ಟೋಬರ್ 16ರ ರಾತ್ರಿ ಮೌಯಿಮಾದ ಮಲ್ಖಾನ್‌ಪುರ ಗ್ರಾಮದ ರಾಮ್ ಅಸರೆ ಅವರ ಪುತ್ರ 20 ವರ್ಷದ ಉಮೇಶ್ ತನ್ನ ಕೋಣೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ. ಅವನ ಕಿರುಚಾಟದಿಂದ ಎಚ್ಚರಗೊಂಡ ಅವನ ಕುಟುಂಬ ಸದಸ್ಯರು ಧಾವಿಸಿ ಬಂದಾಗ ಅವನು ನೋವಿನಿಂದ ನರಳುತ್ತಿದ್ದ, ತೀವ್ರವಾದ ಇರಿತದ ಗಾಯಗಳಾಗಿದ್ದು ಮತ್ತು ಅವನ ಖಾಸಗಿ ಭಾಗಗಳು ಕತ್ತರಿಸಿದ್ದು ಕಂಡುಬಂದಿತ್ತು.

ಕುಟುಂಬವು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು, ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ನಂತರ ನಡೆದ ತನಿಖೆಯು ಉದ್ವಿಗ್ನ ಮತ್ತು ಗೊಂದಲಮಯವಾಗಿತ್ತು ಏಕೆಂದರೆ ಆರಂಭದಲ್ಲಿ ಅಂತಹ ಕೃತ್ಯವನ್ನು ಯಾರು ಮಾಡಿದ್ದಾರೆ ಅಥವಾ ಏಕೆ ಮಾಡಿದ್ದಾರೆಂದು ಯಾರಿಗೂ ಅರ್ಥವಾಗಲಿಲ್ಲ.

ಮತ್ತಷ್ಟು ಓದಿ: ಮದುವೆಗೆ ವಯಸ್ಸು ಮುಖ್ಯನಾ? ಮ್ಯಾರೇಜ್ ಆಗೋಕೆ ಪರ್ಫೆಕ್ಟ್‌ ಏಜ್‌ ಯಾವುದು? ಇಲ್ಲಿದೆ ಮಾಹಿತಿ

ಪೊಲೀಸರು ಆಳವಾಗಿ ತನಿಖೆ ನಡೆಸುತ್ತಿದ್ದಂತೆ, ಸತ್ಯ ಹೊರಬಂದಿತ್ತು. ಉಮೇಶ್‌ನ ಅಣ್ಣ ಉದಯ್, ಮಂಜುಳನ್ನು ಮದುವೆಯಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ, ಉಮೇಶ್ ಮಂಜುಳ ​​ತಂಗಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದ. ಇಬ್ಬರೂ ಆತ್ಮೀಯರಾಗಿದ್ದರು ಮತ್ತು ಪರಸ್ಪರ ಮದುವೆಯಾಗುವುದಾಗಿಯೂ ಹೇಳಿದ್ದರು.

ಕುಟುಂಬದ ವಿರೋಧವಿತ್ತು. ಅಂತಿಮವಾಗಿ, ಉಮೇಶ್ ಆ ಸಂಬಂಧದಿಂದ ಹಿಂದೆ ಸರಿದಿದ್ದ, ವರದಿಯ ಪ್ರಕಾರ, ಇನ್ನೊಬ್ಬಳನ್ನು ಇಷ್ಟ ಪಡುತ್ತಿದ್ದ, ಇದು ಮಂಜುಳನ ತಂಗಿಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಕುಟುಂಬ ಸದಸ್ಯರ ಪ್ರಕಾರ ಆಕೆ ಖಿನ್ನೆತೆಗೆ ಒಳಗಾಗಿದ್ದಳು. ಒಂಟಿಯಾಗಿರಲು ಶುರು ಮಾಡಿದ್ದಳು. ಇದನ್ನು ಕಂಡ ಮಂಜುಳಾಗೆ ಕೋಪ ಬಂದಿತ್ತು. ತನ್ನ ಮೈದುನನಿಂದಲೇ ಇಷ್ಟೆಲ್ಲಾ ಆಗಿದ್ದು ಎಂದು ಹೇಳಿ ಆತನ ಮೇಲೆ ಹಲ್ಲೆ ನಡೆಸಿ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ