ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಅವರ ಸಂದರ್ಶನ ಮಾಡಿದ್ದಾರೆ. ರಾಷ್ಟ್ರಪತಿಯನ್ನು ಕೇಂದ್ರ ಸಚಿವೆಯೊಬ್ಬರು ಸಂದರ್ಶನ ಮಾಡಿದ್ದು ಇದೇ ಮೊದಲು. ರಾಷ್ಟ್ರಪತಿ ಮುರ್ಮು ಅವರು ಒಡಿಶಾದ ರಾಯ್ರಂಗಪುರದಿಂದ ರಾಷ್ಟ್ರಪತಿ ಭವನಕ್ಕೆ ಬರುವಾಗಿನ ಅವರ ಹಾದಿ ಹೇಗಿತ್ತು, ಎಷ್ಟು ಕಷ್ಟಗಳು, ಸವಾಲುಗಳನ್ನು ಎದುರಿಸಿದ್ದಾರೆ ಎಂಬುದನ್ನು ಸ್ಮೃತಿ ಇರಾನಿಯವರ ಬಳಿ ಹಂಚಿಕೊಂಡಿದ್ದಾರೆ.
ಇದು ಇಂದು ಬೆಳಗ್ಗೆ 8 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಯಿತು ಡಿಡಿ-1ರಲ್ಲಿ ಸಂಜೆ 4 ಗಂಟೆಗೆ ಪ್ರಸಾರವಾಗುತ್ತದೆ. ಪ್ರಪ್ರಥಮ ಬಾರಿಗೆ ನೀವು ರಾಷ್ಟ್ರಪತಿಯ ಜೀವನ ಪಯಣದ ಅಸಾಧಾರಣ ಮಜಲುಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಸ್ಮೃತಿ ಇರಾನಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ದ್ರೌಪದಿ ಮುರ್ಮು ಅವರ ಜೀವನ ಮಹಿಳಾ ಶಕ್ತಿಯ ಪ್ರತೀಕ, ಸಣ್ಣ ಹಳ್ಳಿಯಿಂದ ಬಂದು ದೇಶದ ಅತ್ಯುನ್ನತ ಸ್ಥಾನಕ್ಕೆ ಏರಿದ ಅವರ ಅಸಾಧಾರಣ ಕಥೆ ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ಸ್ಮೃತಿ ಇರಾನಿ ಯೂಟ್ಯೂಬ್ ಲಿಂಕ್ನ್ನು ಕೂಡ ನೀಡಿದ್ದಾರೆ. ನೀವು ಅಲ್ಲಿ ಸಂದರ್ಶನ ವೀಕ್ಷಿಸಬಹುದು.
ಯೂಟ್ಯೂಬ್ ಲಿಂಕ್ ಇಲ್ಲಿದೆ
‘ನಯೀ ಸೋಚ್, ನಯೀ ಕಹಾನಿ ಎ ರೇಡಿಯೋ ಜರ್ನಿ ವಿತ್ ಸ್ಮೃತಿ ಇರಾನಿ’ ಎಂಬ ಶೀರ್ಷಿಕೆಯಲ್ಲಿ ಪ್ರಸಾರಗೊಂಡಿದೆ.
ಸಂದರ್ಶನದಲ್ಲಿ ಮುರ್ಮು ಅವರು ತಮ್ಮ ಶೈಕ್ಷಣಿಕ, ವೃತ್ತಿಪರ ಮತ್ತು ರಾಜಕೀಯ ಪ್ರಯಾಣದ ಬಗ್ಗೆ ಬೆಳಕು ಚೆಲ್ಲಿದರು ಮತ್ತು ರಾಷ್ಟ್ರಪತಿಯಾಗಿ ಸಾರ್ವಜನಿಕರೊಂದಿಗೆ ಸಂವಾದದ ಅನುಭವಗಳನ್ನು ಹಂಚಿಕೊಂಡರು. ಅವರು ದೆಹಲಿ ಮೆಟ್ರೋದಲ್ಲಿ ತಮ್ಮ ಇತ್ತೀಚಿನ ಪ್ರಯಾಣದ ಬಗ್ಗೆ ಮಾತನಾಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:51 am, Wed, 14 February 24