Pulwama Attack 5th Anniversary: ಭಾರತದ ಇತಿಹಾಸದಲ್ಲಿ ಪುಲ್ವಾಮ ದಾಳಿಯ ಕಹಿ ನೆನಪು, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ
Pulwama Attack: ಫೆಬ್ರವರಿ 14 ರಂದು ಪ್ರಪಂಚದಾದಂತ್ಯ ಪ್ರೇಮಿಗಳ ದಿನದ ಸಂಭ್ರಮದ ಒಂದೆಡೆಯಾದರೆ, ಈ ದಿನ ಭಾರತಕ್ಕೆ ಪಾಲಿಗೆ ಕರಾಳ ದಿನ. ನಮ್ಮ ವೀರ ಯೋಧರು ತಾಯಿ ನೆಲೆಕ್ಕಾಗಿ ಪ್ರಾಣ ಅರ್ಪಿಸಿದ ದಿನ. ಐದು ವರ್ಷದ ಹಿಂದೆ ಪುಲ್ವಾಮಾದಲ್ಲಿ ನಡೆದ ಘಟನೆಯಿಂದ 40 ಯೋಧರನ್ನು ಬಲಿ ಪಡೆದುಕೊಂಡಿತು. ಹೀಗಾಗಿ ಫೆಬ್ರವರಿ 14 ರಂದು ಈ ದಿನವನ್ನು ಭಾರತವು ಬ್ಲ್ಯಾಕ್ ಡೇಯನ್ನಾಗಿ ಆಚರಿಸುತ್ತಿದೆ.
ಇಂದು ದೇಶಕ್ಕೆ ಕರಾಳ ದಿನವಾಗಿದ್ದು, 5 ವರ್ಷಗಳ ಹಿಂದೆ ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಿಂದಾಗಿ 40 ಕ್ಕೂ ಯೋಧರು ಕೊನೆಯುಸಿರೆಳೆದಿದ್ದರು. ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಭಾರತೀಯ ಸೇನೆಯ ವಾಹನದಲ್ಲಿ ತೆರಳುತ್ತಿದ್ದ ಯೋಧರು ಬಲಿಯಾಗಿದ್ದರು. ಈ ಸಕಹಿ ಸುದ್ದಿಯೊಂದು ಹೊರಬೀಳುತ್ತಿದ್ದಂತೆ ಇಡೀ ದೇಶವೇ ಮೌನಕ್ಕೆ ಜಾರಿತ್ತು. ಪ್ರಾಣತೆತ್ತ ಯೋಧರ ಕುಟುಂಬಗಳು ಆಸರೆಯಿಲ್ಲದೇ ಕಂಗಾಲಾಗಿತ್ತು.
ಅಂದು ಫೆಬ್ರವರಿ 14ರ ಮದ್ಯಾಹ್ನ 3 ಗಂಟೆ ಸಮಯವಾಗಿತ್ತಷ್ಟೇ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಶ್ರೀನಗರಕ್ಕೆ 2500 ಕ್ಕೂ ಹೆಚ್ಚು ಭಾರತೀಯ ಭದ್ರತಾ ಸಿಬ್ಬಂದಿಗಳಿದ್ದ 78 ಸೇನಾ ವಾಹನಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಗುತ್ತಿತ್ತು. ಅದೇ ವೇಳೆಯಲ್ಲಿ 350 ಕೆಜಿ ಸ್ಫೋಟಕಗಳಿದ್ದ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯೊಂದು ಸೇನಾ ವಾಹನಕ್ಕೆ ಬಂದು ಢಿಕ್ಕಿ ಹೊಡೆದಿತ್ತು.
ಢಿಕ್ಕಿ ಹೊಡೆದ ಪರಿಣಾಮ ಜಮ್ಮು ಮತ್ತು ಕಾಶ್ಮೀರದಲ್ಲಿ 40 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್ ಗಳು ಹೊತ್ತು ಉರಿದಿತ್ತು. ಈ ದಾಳಿಯಿಂದಾಗಿ 40 ಯೋಧರು ಕೊನೆಯುಸಿರೆಳೆದು ಕೊಂಡಿದ್ದು, ಕೆಲ ಸೈನಿಕರಿಗೆ ಗಂಭೀರ ಗಾಯಗಳಾಗಿತ್ತು. ಪುಲ್ವಾಮ ದಾಳಿಯ ಬಳಿಕ ಜೈಶ್-ಇ-ಮೊಹಮ್ಮದ್ ಸಂಘಟನೆ ವೀಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಈ ದಾಳಿಯ ಪರಿಣಾಮವಾಗಿ ಭಾರತಕ್ಕೆ ಪಾಕ್ ಗೆ ಪ್ರತ್ಯುತ್ತರವನ್ನು ನೀಡಿತ್ತು. ಹನ್ನೆರಡು ದಿನಗಳ ಬಳಿಕ ಭಾರತೀಯ ವಾಯುಪಡೆಯ ಜೆಟ್‌ಗಳು ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. ಭಾರತವು ನಡೆಸಿದ ಈ ದಾಳಿಯಲ್ಲಿ 250 ಪಾಕ್ ಉಗ್ರರು ಬಲಿಪಡೆದು ಪ್ರತ್ಯುತ್ತರವನ್ನು ನೀಡಿತ್ತು.
ಟ್ವೀಟ್ ನಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ
ಫೆಬ್ರವರಿ 14, 2024 ರ, ಈ ಕರಾಳದಿನದಂದು ಪಿಎಂ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಟ್ವೀಟ್ ನಲ್ಲಿ “ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ವೀರರಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮ್ಮ ದೇಶಕ್ಕಾಗಿ ಅವರ ಸೇವೆ ಮತ್ತು ತ್ಯಾಗ ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ.” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂದರ್ಶನ
ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಸಂದೇಶಗಳು
* ಪುಲ್ವಾಮ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ.
* ಈ ದಿನವನ್ನ ನಾವು ಯಾವತ್ತೂ ಮರೆಯುವುದಿಲ್ಲ. ನಮ್ಮ ಸೈನಿಕರ ತ್ಯಾಗ ಬಲಿದಾನ ಎಲ್ಲದಕ್ಕಿಂತ ದೊಡ್ಡದು. ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ ನಮ್ಮ ವೀರ ಯೋಧರಿಗೆ ಕೋಟಿ ಕೋಟಿ ನಮನಗಳು.
* ಪುಲ್ವಾಮಾದಲ್ಲಿ ದೇಶಕ್ಕಾಗಿ ಹುತಾತ್ಮರಾದ ಕರ್ತವ್ಯ ನಿರತ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ 40 ಜನ ಹುತಾತ್ಮ ಯೋಧರಿಗೆ ಪ್ರಣಾಮಗಳು. ನಿಮ್ಮ ತ್ಯಾಗ, ಬಲಿದಾನಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ