ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ದೆಹಲಿಯ ಏಮ್ಸ್ (AIIMS) ನಲ್ಲಿ ಇಂದು ಬೈಪಾಸ್ ಸರ್ಜರಿಗೆ ಒಳಗಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಅತ್ಯುತ್ತಮವಾಗಿ ಚಿಕಿತ್ಸೆ ನೀಡಿ, ಸರ್ಜರಿ ಮಾಡಿದ ವೈದ್ಯರಿಗೆ ಅಭಿನಂದನೆಗಳು. ಏಮ್ಸ್ ನಿರ್ದೇಶಕರ ಜತೆ ಮಾತನಾಡಿ, ರಾಷ್ಟ್ರಪತಿಯವರ ಆರೋಗ್ಯ ವಿಚಾರಿಸಿದ್ದೇನೆ. ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆಂದು ಟ್ವೀಟ್ ಮಾಡಿದ್ದಾರೆ.
ರಾಮನಾಥ ಕೋವಿಂದ್ ಅವರಿಗೆ 75 ವರ್ಷ ವಯಸ್ಸಾಗಿದ್ದು, ಮುರ್ನಾಲ್ಕು ದಿನಗಳ ಹಿಂದೆ ಎದೆ ನೋವಿನಿಂದ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಆರೋಗ್ಯ ತಪಾಸಣೆ ಮಾಡಿದ ಬಳಿಕ ಅವರನ್ನು ಏಮ್ಸ್ಗೆ ದಾಖಲಿಸಲಾಗಿತ್ತು. ರಾಷ್ಟ್ರಪತಿಯವರ ಆರೋಗ್ಯ ತಪಾಸಣೆ ಮಾಡಿದ ಏಮ್ಸ್ ವೈದ್ಯರ ತಂಡ ಬೈಪಾಸ್ ಸರ್ಜರಿಗೆ ಒಳಗಾಗುವಂತೆ ಸಲಹೆ ನೀಡಿದ್ದರು.
ಇಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸದ್ಯ ರಾಮನಾಥ ಕೋವಿಂದ್ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ತಜ್ಞ ವೈದ್ಯರ ನಿಗಾದಲ್ಲಿ ಇದ್ದಾರೆ ಎನ್ನಲಾಗಿದೆ. ಅವರು ಆಸ್ಪತ್ರೆಗೆ ಸೇರಿದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ: ಸೇನಾ ಆಸ್ಪತ್ರೆಯಿಂದ ಏಮ್ಸ್ಗೆ ದಾಖಲಾದ ರಾಷ್ಟ್ರಪತಿ ರಾಮನಾಥ ಕೋವಿಂದ್; ಬಾಂಗ್ಲಾದೇಶದಿಂದ ಕರೆ ಮಾಡಿದ ಪ್ರಧಾನಿ ಮೋದಿ
ಭೀಕರ ರಸ್ತೆ ಅಪಘಾತ: ನಜ್ಜುಗುಜ್ಜಾದ ಕಾರು, ಖ್ಯಾತ ಗಾಯಕ ಸ್ಥಳದಲ್ಲೇ ಸಾವು
Published On - 7:28 pm, Tue, 30 March 21