ದೇಶದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣವಾದ ಬೆನ್ನಲ್ಲೇ ರೆಮ್ಡೆಸಿವಿರ್ ಇಂಜೆಕ್ಷನ್ ಬೇಡಿಕೆ ಹೆಚ್ಚುತ್ತಿದೆ. ಆದರೆ ಕೆಲವರಿಗೆ ಈ ಇಂಜಕ್ಷನ್ ಬೆಲೆ ಕೈಗೆಟುಕದಷ್ಟಿದೆ. ಹಾಗಾಗಿ ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ರೆಮ್ಡೆಸಿವಿರ್ನ ಇಂಜೆಕ್ಷನ್ ಬೆಲೆ ಇದೀಗ ಕಡಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ನಂತರ ರೆಮ್ಡೆಸಿವಿರ್ ಉತ್ಪಾದನಾ ಕಂಪನಿಗಳು ಬೆಲೆ ಇಳಿಸಲು ನಿರ್ಧಾರ ಮಾಡಿವೆ. ಇಲ್ಲಿವೆ ನೋಡಿ ವಿವಿಧ ಕಂಪನಿಗಳು, ಬ್ರ್ಯಾಂಡ್ ಹೆಸರು ಮತ್ತು ಇಳಿಕೆಯಾದ ಬೆಲೆ (100 ಎಂಜಿಯ ಬೆಲೆ).
ಕಾಡ್ಲಿಯಾ ಹೆಲ್ತ್ಕೇರ್ ಲಿಮಿಟೆಡ್ನ ರೆಮ್ಡ್ಯಾಕ್ (REMDAC) ಬೆಲೆ ಮೊದಲು 2800 ರೂ.ಇದ್ದಿದ್ದು, ಈಗ 899ರೂ.ಗೆ ಇಳಿಕೆಯಾಗಿದೆ. ಹಾಗೇ, ಬಯೋಕಾನ್ ಬಯಾಲಜಿಸ್ ಇಂಡಿಯಾದ ರೆಮ್ವಿನ್ಗೆ (RemWin) 2450 ರೂ. ನಿಗದಿಪಡಿಸಲಾಗಿದೆ. ಇದರ ಬೆಲೆ ಮೊದಲು 3950 ರೂ.ಇತ್ತು.
ಡಾ.ರೆಡ್ಡಿ ಪ್ರಯೋಗಾಲಯ ಲಿಮಿಟೆಡ್ ಕೂಡ ರೆಡಿಕ್ಸ್ (REDYX)ಬೆಲೆಯನ್ನು 2700 ರೂ.ಗೆ ಇಳಿಸಿದೆ. ಈ ಬ್ರ್ಯಾಂಡ್ ಇಂಜೆಕ್ಷನ್ ಬೆಲೆ ಮೊದಲು 5400 ರೂ.ಇತ್ತು. ಇನ್ನು ಕಿಲ್ಪಾ ಲಿಮಿಟೆಡ್ನ ಬ್ರ್ಯಾಂಡ್ ಆಗಿರುವ CIPREMI ಬೆಲೆ ಮೊದಲು 4000 ರೂ.ಇದ್ದಿದ್ದು, ಈಗ 3000 ರೂ.ಗೆ ಇಳಿಕೆಯಾಗಿದೆ. ಮೈಲಾನ್ ಪಾರ್ಮಾಸಿಟಿಕಲ್ಸ್ ಪ್ರೈವೇಟ್ ಲಿಮಿಟೆಡ್ನ DESREM ಮೊದಲು 4800 ರೂ. ಇದ್ದಿದ್ದು, ಈಗ 3400 ರೂ.ಗೆ ಇಳಿಕೆಯಾಗಿದೆ.
ಇನ್ನು ಜ್ಯೂಬ್ಲಿಯೆಂಟ್ ಜನರಿಕ್ ಲಿಮಿಟೆಡ್ನ JUBI-R ಇಂಜೆಕ್ಷನ್ ಬೆಲೆ ಇದೀಗ 3400 ರೂ. ಆಗಿದೆ. ಮೊದಲು 4700 ರೂಪಾಯಿ ಇತ್ತು. ಹಾಗೇ, ಹೆಟೆರೋ ಹೆಲ್ತ್ಕೇರ್ ಲಿಮಿಟೆಡ್ನ ಕೊವಿಫಾರ್(COVIFOR) ಬೆಲೆ ಮೊದಲು 5400 ರೂ. ಇದ್ದಿದ್ದ, ಈಗ 3400ರೂಪಾಯಿಗೆ ಇಳಿಕೆಯಾಗಿದೆ.
ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸ್ಫೋಟ; ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ಭುವನ್ ಪೊನ್ನಣ್ಣ ನಿಜವಾದ ಬಿಗ್ ಬಾಸ್; ಕೊವಿಡ್ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ
Price of Remdesivir Injection reduced check here to know