ಅಹಮದಾಬಾದ್: ಕೊರೊನಾ ಸೋಂಕಿಗೆ ತುತ್ತಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚಿಕ್ಕಮ್ಮ ನರ್ಮದಾಬೆನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 80 ವರ್ಷದ ಅವರು ಗುಜರಾತ್ನ ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಹಮದಾಬಾದ್ನ ರಾಣಿಪ್ ಪ್ರದೇಶದಲ್ಲಿ ತಮ್ಮ ಮಕ್ಕಳೊಡನೆ ವಾಸವಾಗಿದ್ದ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ನಮ್ಮ ಚಿಕ್ಕಮ್ಮನನ್ನು ಕಳೆದ 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ ಮೋದಿ ತಿಳಿಸಿದ್ದಾರೆ. ನರ್ಮದಾಬೆನ್ ಅವರ ಪತಿ ಜಗಜೀವನ್ದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಸಹೋದರರಾಗಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಗುಜರಾತ್ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ನಿನ್ನೆಯ (ಏಪ್ರಿಲ್ 26) ವರದಿಯಂತೆ 14,430 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈಮೂಲಕ ಗುಜರಾತ್ನಲ್ಲಿ ಒಟ್ಟು 5,10,376 ಕೊರೊನಾ ಪ್ರಕರಣಗಳು ದಾಖಲಾದಂತಾಗಿವೆ. ನಿನ್ನೆ ಒಂದೇ ದಿನ 158 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, 6,486 ಜನರು ಗುಜರಾತ್ನಲ್ಲಿ ಈವರೆಗೆ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆಯ ವರದಿಯಂತೆ ಗುಜರಾತ್ನಲ್ಲಿ 1,21,461 ಸಕ್ರಿಯ ಕೊರೊನಾ ಪ್ರಕರಣಗಳಿವೆ.
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 31,830 ಮಂದಿಗೆ ಕೊರೊನಾ ಸೋಂಕು, 180 ಸಾವು
( Prime Ministe Narendra modis aunt NarmadaBen died by Covid 19 in gujarat hospital)
Published On - 8:08 pm, Tue, 27 April 21