ದೇಶದ ಮೊದಲ ನೀರೊಳಗಿನ ಮೆಟ್ರೋಗೆ ಚಾಲನೆ ನೀಡಿದ ಪ್ರಧಾನಿ ಮೋದಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 06, 2024 | 11:30 AM

India's first underwater metro: ದೇಶದ ಮೊದಲ ನೀರೊಳಗಿನ ಮೆಟ್ರೋಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ. ಮೋದಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸುವ ಈ ಮೆಟ್ರೋದ ಉದ್ಘಾಟನೆ ಮಾಡಿದ್ದಾರೆ.

ದೇಶದ ಮೊದಲ ನೀರೊಳಗಿನ ಮೆಟ್ರೋಗೆ ಚಾಲನೆ ನೀಡಿದ ಪ್ರಧಾನಿ ಮೋದಿ
Follow us on

ಕೋಲ್ಕತ್ತಾ, ಮಾ.6: ಪ್ರಧಾನಿ ನರೇಂದ್ರ ಮೋದಿ (Narendra Modi)  ಅವರು ಇಂದು ಪಶ್ಚಿಮ ಬಂಗಾಳ(West Bengal)ದ ರಾಜಧಾನಿ ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋಗೆ ಚಾಲನೆ ನೀಡಿದ್ದಾರೆ. ಇನ್ನು ಈ ಮೆಟ್ರೋವನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸುವ ಮೂಲಕ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾ.5ರಿಂದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 10 ದಿನಗಳ ಭೇಟಿಯನ್ನು ನೀಡಲಿದ್ದಾರೆ. ನಿನ್ನೆ ಮೊದಲ ಭೇಟಿಯನ್ನು ತೆಲಂಗಾಣಕ್ಕೆ ಭೇಟಿ ನೀಡಿದರು. ಇದೀಗ ಇದರ ಮುಂದುವರಿದ ಭಾಗವಾಗಿ ಕೋಲ್ಕತ್ತಾಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ₹ 15,400 ಕೋಟಿ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ ಯೋಜನೆಗಳಾವುವು?

1. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆಗೆ ಚಾಲನೆ ನೀಡಿದ್ದಾರೆ. ಇದು ಪೂರ್ವ-ಪಶ್ಚಿಮ ಮೆಟ್ರೋದ 4.8-ಕಿಮೀ ವಿಸ್ತರಣೆಯನ್ನು ಹೊಂದಿದ್ದು, ಇದನ್ನು ₹ 4,965 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಹೌರಾದಲ್ಲಿ ಭಾರತದ ದೊಡ್ಡ ಮೆಟ್ರೋ ನಿಲ್ದಾಣವನ್ನು ಹೊಂದಿರುತ್ತದೆ. ನೆಲಮಟ್ಟದಿಂದ 30 ಮೀಟರ್ ಕೆಳಗೆ. ಇರುತ್ತದೆ. ಐಟಿ ಹಬ್ ಸಾಲ್ಟ್ ಲೇಕ್ ಸೆಕ್ಟರ್ ವಿ ನಂತಹ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲು ಈ ಕಾರಿಡಾರ್ ಸಹಾಯ ಮಾಡುತ್ತದೆ.

2. ಕೇಂದ್ರ ರೈಲ್ವೆಯ ಪ್ರಕಾರ, ಇಂದು ಭಾರತದ ಮೊದಲ ನೀರೊಳಗಿನ ಮೆಟ್ರೋ ಸೇವೆ ಪ್ರಾರಂಭವಾಗಿದೆ, ಪ್ರಯಾಣಿಕರು ಯಾವಾಗನಿಂದ ಪ್ರಯಾಣಿಸಬಹುದು ಎಂಬ ದಿನಾಂಕವನ್ನು ಇನ್ನು ತಿಳಿಸಿಲ್ಲ.

3. ಪ್ರಧಾನಿ ಮೋದಿ ಅವರು ಇದರ ಜತೆಗೆ ಇತರ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇನ್ನು ನಗರದ ಚಲನಶೀಲತೆ ಹಾಗೂ ಸಾವರ್ಜನಿಕರಿಗೆ ಸುಲಭ ಸಂಪರ್ಕ ಸಾಧಿಸಲು ಪ್ರಮುಖ ರೈಲು ಮಾರ್ಗಗಳ ಯೋಜನೆಗಳನ್ನು ನೀಡಿದ್ದಾರೆ. ಕವಿ ಸುಭಾಷ್-ಹೇಮಂತ ಮುಖೋಪಾಧ್ಯಾಯ ಮತ್ತು ತಾರಾತಲಾ-ಮಜೆರ್ಹತ್ ಮೆಟ್ರೋ ವಿಭಾಗಗಳು ಸೇರಿವೆ.

ಇದನ್ನೂ ಓದಿ: ಬೆಂಗಳೂರು ತುಮಕೂರು ಮೆಟ್ರೋ: ಕಾರ್ಯಸಾಧ್ಯತೆ ಅಧ್ಯಯನಕ್ಕೆ ಬಿಡ್ ಆಹ್ವಾನಿಸಿದ ಬಿಎಂಆರ್​ಸಿಎಲ್

4. ರೂಬಿ ಹಾಲ್ ಕ್ಲಿನಿಕ್‌ನಿಂದ ರಾಮವಾಡಿ ವರೆಗೆ ಪುಣೆ ಮೆಟ್ರೋಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಕೊಚ್ಚಿ ಮೆಟ್ರೋ ರೈಲು ಹಂತ I ವಿಸ್ತರಣೆ ಯೋಜನೆ (ಹಂತ IB) SN ಜಂಕ್ಷನ್ ಮೆಟ್ರೋ ನಿಲ್ದಾಣದಿಂದ ತ್ರಿಪುನಿಥುರಾ ಮೆಟ್ರೋ ನಿಲ್ದಾಣದವರೆಗೆ, ಹಾಗೂ ತಾಜ್ ಈಸ್ಟ್ ಗೇಟ್‌ನಿಂದ ಮಂಕಮೇಶ್ವರದವರೆಗೆ ಆಗ್ರಾ ಮೆಟ್ರೋದ ವಿಸ್ತರಣೆ ಮಾಡಲಾಗಿದೆ. ಮತ್ತು ದೆಹಲಿ-ಮೀರತ್ RRTS ಕಾರಿಡಾರ್‌ನ ದುಹೈ-ಮೋದಿನಗರ (ಉತ್ತರ)ವರೆಗೆ ವಿಸ್ತರಣೆ ಮಾಡಲಾಗಿದೆ.

5. ಮಧ್ಯಾಹ್ನದ ನಂತರ, ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿರುವ ಉತ್ತರ 24 ಪರಗಣ ಜಿಲ್ಲೆಯ ಬರಾಸತ್‌ನಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 10:48 am, Wed, 6 March 24