ಉಕ್ರೇನ್​ ಮೇಲೆ ರಷ್ಯಾ ಸಂಭಾವ್ಯ ಪರಮಾಣು ದಾಳಿ ತಡೆದಿದ್ದ ಪ್ರಧಾನಿ ಮೋದಿ: ಸಿಎನ್ಎನ್ ವರದಿ

|

Updated on: Mar 10, 2024 | 10:12 PM

ರಷ್ಯಾ ಅಧ್ಯಕ್ಷ ವಾದ್ಲಿಮಿರ್​​ ಪುಟಿನ್​​ ಕೀವ್​ ನಗರದ ಮೇಲೆ ನ್ಯೂಕ್ಲಿಯರ್​ ದಾಳಿಗೆ ಮುಂದಾಗಿದ್ದರು. ಭಾರತ ಸೇರಿದಂತೆ ಇತರೆ ದೇಶಗಳು ಈ ಸಂಭಾವ್ಯ ಪರಮಾಣು ದಾಳಿಯನ್ನು ತಡೆಯಲು ಸಹಾಯ ಮಾಡಿವೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆಕೊಟ್ಟ ಪುಟಿನ್​ ಉಕ್ರೇನ್​ ಮೇಲಿನ ಪರಮಾಣು ದಾಳಿ ನಿರ್ಧಾರವನ್ನು ಕೈಬಿಟ್ಟಿದ್ದರು ಎಂದು ಸಿಎನ್​ಎನ್​ ಉಲ್ಲೇಖಿಸಿದೆ.

ಉಕ್ರೇನ್​ ಮೇಲೆ ರಷ್ಯಾ ಸಂಭಾವ್ಯ ಪರಮಾಣು ದಾಳಿ ತಡೆದಿದ್ದ ಪ್ರಧಾನಿ ಮೋದಿ: ಸಿಎನ್ಎನ್ ವರದಿ
ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us on

ವಾಷಿಂಗ್ಟನ್, ಮಾರ್ಚ್​​ 10: 2022ರಲ್ಲಿ ರಷ್ಯಾ (Russia) ಮತ್ತು ಉಕ್ರೇನ್ (Ukraine) ಮಧ್ಯೆ ಕದನ ವಿರಾಮ ಏರ್ಪಟ್ಟಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೆ ಯುದ್ಧದ ಕಾರ್ಮೋಡ ಆವರಿಸಿತ್ತು. ಸಾಕಷ್ಟು ಜನರು ಮೃತಪಟ್ಟಿದ್ದರು. ರಷ್ಯಾ ಅಧ್ಯಕ್ಷ ವಾದ್ಲಿಮಿರ್​​ ಪುಟಿನ್​​ ಕೀವ್​ ನಗರದ ಮೇಲೆ ನ್ಯೂಕ್ಲಿಯರ್​ ದಾಳಿಗೆ ಮುಂದಾಗಿದ್ದರು. ಈ ವೇಳೆ ಭಾರತ ಸೇರಿದಂತೆ ಇತರೆ ದೇಶಗಳು ಈ ಸಂಭಾವ್ಯ ಪರಮಾಣು ದಾಳಿಯನ್ನು ತಡೆಯಲು ಸಹಾಯ ಮಾಡಿವೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆಕೊಟ್ಟ ಪುಟಿನ್​ ಉಕ್ರೇನ್​ ಮೇಲಿನ ಪರಮಾಣು ದಾಳಿ ನಿರ್ಧಾರವನ್ನು ಕೈಬಿಟ್ಟಿದ್ದರು ಎಂದು ಸಿಎನ್​ಎನ್​ ಉಲ್ಲೇಖಿಸಿದೆ.

ವರದಿಯ ಪ್ರಕಾರ, ರಷ್ಯಾ ಯುದ್ಧತಂತ್ರದ ಅಥವಾ ಯುದ್ಧಭೂಮಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದೆಂದು ಬಿಡೆನ್ ಆಡಳಿತವು ಕಳವಳ ವ್ಯಕ್ತಪಡಿಸಿದೆ. ಇನ್ನು ಇದಕ್ಕೆ ಪ್ರತಿಕ್ರಿಯೆಯಾಗಿ ಅಂತಹ ದಾಳಿಯಿಂದ ರಷ್ಯಾವನ್ನು ತಡೆಯಲು ಭಾರತ ಸೇರಿದಂತೆ ಇತರೆ ದೇಶಗಳ ಸಹಾಯವನ್ನು ಯುಎಸ್ ಕೋರಿತು.

ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಶೀಘ್ರ ಬಿಡುಗಡೆ : ಕೇಂದ್ರ ಸರ್ಕಾರ

‘ನಾವು ಮಾಡಿದ ಒಂದು ಪ್ರಮುಖ ಕೆಲಸವೇನೆಂದರೆ ಅವರಿಗೆ ನೇರವಾಗಿ ಸಂದೇಶ ರವಾನಿಸುವುದು ಮಾತ್ರವಲ್ಲದೆ, ಅವರು ಹೆಚ್ಚು ಗಮನ ಹರಿಸಬಹುದಾದ ಇತರೆ ದೇಶಗಳನ್ನು ಅದೇ ರೀತಿ ಮಾಡಲು ಬಲವಾಗಿ ಒತ್ತಾಯಿಸಲಾಯಿತು’ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಬಿಕ್ಕಟ್ಟು ನಿವಾರಿಸುವಲ್ಲಿ ಪ್ರಧಾನಿ ಮೋದಿ ಮಹತ್ವದ ಪಾತ್ರ

ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕದನವನ್ನು ತಪ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಮಹತ್ವದ ಪಾತ್ರ ವಹಿಸಿದೆ. ನಾಗರಿಕ ಹತ್ಯೆಗಳನ್ನು ಖಂಡಿಸುವ ಮತ್ತು ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ಪ್ರತಿಪಾದಿಸುವ ಪ್ರಧಾನಿ ಮೋದಿಯವರ ಪ್ರಭಾವ ಮತ್ತು ಸಾರ್ವಜನಿಕ ಹೇಳಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖವಾಗಿವೆ.

ಇದನ್ನೂ ಓದಿ: ಯೂರೋಪಿಯನ್ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದಿಂದ ಸಹಿ; ಇದು ಎಲ್ಲರಿಗೂ ಗೆಲುವು ತರುವಂಥದ್ದು ಎಂದ ಪ್ರಧಾನಿ ಮೋದಿ

ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ, ‘ಇದು ಯುದ್ಧ ಯುಗವಲ್ಲ’. ‘ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿದ್ದರು. ಅದೇ ರೀತಿಯಾಗಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಸಹ ಇದೇ ಮಾತನ್ನು ಪುನರುಚ್ಚರಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:00 pm, Sun, 10 March 24