ಯೂರೋಪಿಯನ್ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದಿಂದ ಸಹಿ; ಇದು ಎಲ್ಲರಿಗೂ ಗೆಲುವು ತರುವಂಥದ್ದು ಎಂದ ಪ್ರಧಾನಿ ಮೋದಿ

Narendra Modi on FTA with EFTA countries: ನಾಲ್ಕು ದೇಶಗಳ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ ಗುಂಪಿನ ಜೊತೆ ಭಾರತ ಮುಕ್ತ ವ್ಯಾಪಾರ ಒಪ್ಪಂದವೊಂದಕ್ಕೆ ಸಹಿಹಾಕಿದೆ. ಈ ಒಪ್ಪಂದವು ಎಲ್ಲಾ ಸಂಬಂಧಿತ ದೇಶಗಳಿಗೂ ಗೆಲುವಿನ ಸ್ಥಿತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ನಾರ್ವೇ, ಸ್ವಿಟ್ಜರ್​ಲ್ಯಾಂಡ್, ಐಸ್​ಲ್ಯಾಂಡ್ ಮತ್ತು ಲೈಶ್ಟೆನ್​ಸ್ಟೀನ್ ದೇಶಗಳು ಇಎಫ್​ಟಿಎ ಗುಂಪಿನಲ್ಲಿವೆ. ಭಾರತದ ಜೊತೆ ಉತ್ತಮ ವ್ಯಾಪಾರ ಸಂಬಂಧ ಹೊಂದಿದ ದೇಶಗಳಾಗಿವೆ ಇವು.

ಯೂರೋಪಿಯನ್ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದಿಂದ ಸಹಿ; ಇದು ಎಲ್ಲರಿಗೂ ಗೆಲುವು ತರುವಂಥದ್ದು ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 10, 2024 | 3:26 PM

ನವದೆಹಲಿ, ಮಾರ್ಚ್ 10: ನಾಲ್ಕು ದೇಶಗಳ ಯೂರೋಪಿಯನ್ ಮುಕ್ತ ವ್ಯಾಪಾರ ಸಂಘಟನೆಯೊಂದಿಗೆ (EFTA- European Free Trade Association) ಭಾರತ ಫ್ರೀ ಟ್ರೇಡ್ ಒಪ್ಪಂದಕ್ಕೆ (FTA) ಸಹಿ ಹಾಕಿದ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಈ ಒಪ್ಪಂದವು ಎಲ್ಲರಿಗೂ ಒಳಿತು ತರುವಂಥದ್ದು ಎಂದು ಅವರು ಹೇಳಿದ್ದಾರೆ. ಹಲವು ಅಂಶಗಳಲ್ಲಿ ರಚನಾತ್ಮಕ ಭಿನ್ನತೆ ಇದ್ದರೂ ಎಲ್ಲಾ ದೇಶಗಳಿಗೂ ಒಳಿತಾಗಬಲ್ಲ ವಾತಾವರಣವನ್ನು ನಮ್ಮ ಆರ್ಥಿಕತೆಗಳು ಹೊಂದಿವೆ. ನಮ್ಮ ಮುಕ್ತ, ನ್ಯಾಯಯುತ ಮತ್ತು ಸಮಾನ ವ್ಯಾಪಾರಕ್ಕೆ ನಮಗಿರುವ ಬದ್ಧತೆಯನ್ನು ಈ ವ್ಯಾಪಾರ ಒಪ್ಪಂದವು ದ್ಯೋತಕವಾಗಿದೆ ಎಂದೂ ಪ್ರಧಾನಿಗಳು ವರ್ಣಿಸಿದ್ದಾರೆ.

ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್​ನಲ್ಲಿ ಸ್ವಿಟ್ಜರ್​ಲ್ಯಾಂಡ್, ನಾರ್ವೇ, ಐಸ್​ಲ್ಯಾಂಡ್ ಮತ್ತು ಲೇಶ್ಟೆನ್​ಸ್ಟೀನ್ ಈ ನಾಲ್ಕು ದೇಶಗಳಿವೆ. ಭಾರತವಲ್ಲದೇ ವಿಶ್ವದ ಇತರ 40 ದೇಶಗಳೊಂದಿಗೆ ಈ ಐರೋಪ್ಯ ಗುಂಪು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. 2008ರಿಂದಲೂ ಭಾರತದ ಜೊತೆ ಎಫ್​ಟಿಎ ಮಾಡಿಕೊಳ್ಳುವ ಅದರ ಪ್ರಯತ್ನ ಈಗ ಫಲಪ್ರದವಾಗಿದೆ. ಭಾರತ ಕಳೆದ 10 ವರ್ಷದಲ್ಲಿ ಫ್ರೀ ಟ್ರೇಡ್ ಒಪ್ಪಂದ ಮಾಡಿಕೊಂಡಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ಮಾರಿಷಸ್, ಯುಎಇ ಮತ್ತು ಆಸ್ಟ್ರೇಲಿಯಾದ ಜೊತೆ ಎಫ್​ಟಿಎ ಮಾಡಿಕೊಂಡಿತ್ತು. ಇದರೊಂದಿಗೆ ಒಟ್ಟಾರೆ 14 ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಭಾರತ ಈವರೆಗೆ ಸಹಿಹಾಕಿದೆ. ಇದಲ್ಲದೇ ಆರು ಆದ್ಯತಾ ಒಪ್ಪಂದಗಳಿಗೂ ಭಾರತ ಸಹಿ ಹಾಕಿದೆ. ಭಾರತ ಒಟ್ಟಾರೆ 94 ದೇಶಗಳೊಂದಿಗೆ ಆದ್ಯತಾ ವ್ಯಾಪಾರ ಸಂಬಂಧಗಳನ್ನು ಹೊಂದಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆದ್ಯತಾ ಸಂಬಂಧ ಇರುವ ದೇಶಗಳ ಸಂಖ್ಯೆ 120ಕ್ಕೂ ಹೆಚ್ಚಾಗಬಹುದು.

ಇದನ್ನೂ ಓದಿ: ನಾಲ್ಕು ಐರೋಪ್ಯ ದೇಶಗಳ ಗುಂಪಿನೊಂದಿಗೆ ಭಾರತದಿಂದ ವ್ಯಾಪಾರ ಒಪ್ಪಂದ; 15 ವರ್ಷಗಳ ಬಳಿಕ ಯಶಸ್ವಿ; 100 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ

ಇಎಫ್​ಟಿಎ ದೇಶಗಳನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ಇವತ್ತು ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್​ನ ದೇಶಗಳು ಡಿಜಿಟಲ್ ಟ್ರೇಡ್, ಬ್ಯಾಂಕಿಂಗ್, ಹಣಕಾಸು ಸೇವೆ, ಸಾರಿಗೆ, ಕೈಗಾರಿಕ ಯಂತ್ರೋಪಕರಣ, ಬಯೋಟೆಕ್ನಾಲಜಿ, ಔಷಧ, ರಾಸಾಯನಿಕ, ಆಹಾರ ಸಂಸ್ಕರಣೆ, ಸ್ವಚ್ಛ ಇಂಧನ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗೆ ಜಾಗತಿಕ ಮನ್ನಣೆ ಪಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಗುಂಪಿನ ಜೊತೆಗಿನ ಎಫ್​ಟಿಎಯ ಮಹತ್ವವನ್ನು ಜಾಹೀರುಗೊಳಿಸಿದ್ದಾರೆ.

ನರೇಂದ್ರ ಮೋದಿ ಹೇಳಿಕೆ

ಕಳೆದ 10 ವರ್ಷದಲ್ಲಿ ಭಾರತದ ಆರ್ಥಿಕತೆ ಸಾಕಷ್ಟು ಜಿಗಿತ ಕಂಡಿದೆ. ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಿಂದ ಈಗ 5ನೇ ಸ್ಥಾನಕ್ಕೆ ಹೋಗಿದೆ. ತಮ್ಮ ಮುಂದಿನ ಗುರಿ ಮೂರನೇ ಸ್ಥಾನಕ್ಕೆ ಹೋಗುವುದು ಎಂದ ಅವರು, ಇಎಫ್​ಟಿಎ ದೇಶಗಳೊಂದಿಗಿನ ಈ ಒಪ್ಪಂದವು ಎಲ್ಲರಿಗೂ ಸಂಪದ್ಭರಿತ ಭವಿಷ್ಯದತ್ತ ಪ್ರಯಾಣದಲ್ಲಿ ಹೊಸ ಅಧ್ಯಾಯದ ಮುನ್ನುಡಿಯಾಗಿದೆ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ