ನಾಲ್ಕು ಐರೋಪ್ಯ ದೇಶಗಳ ಗುಂಪಿನೊಂದಿಗೆ ಭಾರತದಿಂದ ವ್ಯಾಪಾರ ಒಪ್ಪಂದ; 15 ವರ್ಷಗಳ ಬಳಿಕ ಯಶಸ್ವಿ; 100 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ

India and EFTA Free Trade Agreement: ಸ್ವಿಟ್ಜರ್​ಲ್ಯಾಂಡ್ ಸೇರಿದಂತೆ ನಾಲ್ಕು ಯೂರೋಪಿಯನ್ ದೇಶಗಳ ಸಂಘಟನೆಯೊಂದಿಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತಿದೆ. ಸ್ವಿಟ್ಜರ್​ಲ್ಯಾಂಡ್, ಐಸ್​ಲ್ಯಾಂಡ್, ನಾರ್ವೇ ಮತ್ತು ಲೇಶ್ಟೆನ್​ಸ್ಟೀನ್ ಈ ನಾಲ್ಕು ದೇಶಗಳು ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್​ನಲ್ಲಿ ಇವೆ. ಈ ಗುಂಪಿನೊಂದಿಗೆ ಭಾರತದ ಆಮದು ಮತ್ತು ರಫ್ತು ಬಹುತೇಕ ಅನಿರ್ಬಂಧಿತವಾಗಿ ನಡೆಯಲಿದೆ.

ನಾಲ್ಕು ಐರೋಪ್ಯ ದೇಶಗಳ ಗುಂಪಿನೊಂದಿಗೆ ಭಾರತದಿಂದ ವ್ಯಾಪಾರ ಒಪ್ಪಂದ; 15 ವರ್ಷಗಳ ಬಳಿಕ ಯಶಸ್ವಿ; 100 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ
ಮುಕ್ತ ವ್ಯಾಪಾರ ಒಪ್ಪಂದ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 10, 2024 | 11:43 AM

ನವದೆಹಲಿ, ಮಾರ್ಚ್ 10: ನಾಲ್ಕು ಐರೋಪ್ಯ ದೇಶಗಳ ಜೊತೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ. ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್ (EFTA- European Free Trade Association) ಮತ್ತು ಭಾರತದ ಮಧ್ಯೆ ಒಪ್ಪಂದ ಆಗಲಿದೆ. ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವ ಒಪ್ಪಂದ (TEPA- Trand and Economic Partnership Agreement) ಎಂದು ಕರೆಯಲಾಗುವ ಈ ಒಪ್ಪಂದಕ್ಕೆ ಇಎಫ್​ಟಿಎನ ನಾಲ್ಕು ದೇಶಗಳು ಮತ್ತು ಭಾರತ ಇಂದು (ಮಾ. 10) ಭಾನುವಾರ ಸಹಿ ಹಾಕಲಿವೆ. ಕೇಂದ್ರ ಸಂಪುಟ ಮಾರ್ಚ್ 7ರಂದು ಇದಕ್ಕೆ ಸಮ್ಮತಿ ನೀಡಿತ್ತು. ಈ ಒಪ್ಪಂದದಿಂದ ಭಾರತಕ್ಕೆ ಮುಂದಿನ 15 ವರ್ಷದಲ್ಲಿ 100 ಬಿಲಿಯನ್ ಡಾಲರ್ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಹಾಗೆಯೇ, 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗುವ ಸಾಧ್ಯತೆ ಇದೆ.

ಐಸ್​ಲ್ಯಾಂಡ್, ಸ್ವಿಟ್ಜರ್​ಲ್ಯಾಂಡ್, ನಾರ್ವೇ ಮತ್ತು ಲೇಶ್​ಟೆನ್​ಸ್ಟೀನ್ ಈ 4 ದೇಶಗಳು ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್​ನ ಗುಂಪಿನಲ್ಲಿವೆ. ಇದರ ಪ್ರತಿನಿಧಿಗಳಿರುವ ನಿಯೋಗವೊಂದು ಬಂದಿದ್ದು, ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದೆ. ಅದರಂತೆ, ಭಾರತದಿಂದ ಈ ದೇಶಗಳಿಗೆ ಮುಕ್ತವಾಗಿ ಸರಕು ರಫ್ತು ಮಾಡುವ ಅವಕಾಶ ಸಿಗಲಿದೆ.

ಇದನ್ನೂ ಓದಿ: ಬುಡಕಟ್ಟು ಭಾಷೆಗಳು ಸೇರಿದಂತೆ ಅನುಸೂಚಿತವಲ್ಲದ ಭಾಷೆಗಳ 52 ಕಿರು ಪಠ್ಯಪುಸ್ತಕ ಬಿಡುಗಡೆ

ಇಎಫ್​ಟಿಎ ಸಂಘಟನೆಯು ಈಗಾಗಲೇ 40 ದೇಶಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಚೀನಾ, ಕೆನಡಾ, ಚಿಲಿ, ದಕ್ಷಿಣ ಕೊರಿಯಾ ಮೊದಲಾದ ದೇಶಗಳೂ ಸೇರಿವೆ. ಭಾರತದ ಜೊತೆಗೂ ಒಪ್ಪಂದ ಮಾಡಿಕೊಳ್ಳುವ ಪ್ರಯತ್ನವನ್ನು ಇಎಫ್​ಟಿಎ 2008ರಿಂದಲೂ ಮಾಡುತ್ತಿತ್ತು. ಇದೀಗ ಫಲಪ್ರದವಾಗಿದೆ.

ಸದ್ಯ ಈ ನಾಲ್ಕು ಇಎಫ್​ಟಿಎ ದೇಶಗಳೊಂದಿಗೆ ಭಾರತ 14.8 ಬಿಲಿಯನ್ ಡಾಲರ್​ನಷ್ಟು ವ್ಯಾಪಾರ ಕೊರತೆ ಹೊಂದಿದೆ. 2021-22ರಲ್ಲಿ ಭಾರತ ಈ 4 ದೇಶಗಳಿಂದ 25.5 ಬಿಲಿಯನ್ ಡಾಲರ್ ಆಮದು ಮಾಡಿಕೊಂಡಿದೆ. ರಫ್ತಾಗಿದ್ದು ಮಾತ್ರ 1.74 ಬಿಲಿಯನ್ ಡಾಲರ್. ಮರು ವರ್ಷ, ಅಂದರೆ 2022-23ರಲ್ಲಿ ಆಮದು ಪ್ರಮಾಣವು 16.74 ಬಿಲಿಯನ್ ಡಾಲರ್​ಗೆ ಇಳಿದಿತ್ತು. ರಫ್ತು 1.92 ಬಿಲಿಯನ್ ಡಾಲರ್​ಗೆ ಏರಿತ್ತು. 2021-22ಕ್ಕೆ ಹೋಲಿಸಿದರೆ 2022-23ರಲ್ಲಿ ವ್ಯಾಪಾರ ಕೊರತೆ ಬಹಳಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಇ200 ಪ್ಲೇನ್; ಈ ವರ್ಷದೊಳಗೆ ಭಾರತದಲ್ಲಿ ನೋಡುತ್ತೀರಿ ಫ್ಲೈಯಿಂಗ್ ಟ್ಯಾಕ್ಸಿ; ರೈಡಿಂಗ್ ಕೂಡ ದುಬಾರಿ ಇಲ್ಲ

ಮುಕ್ತ ವ್ಯಾಪಾರ ಒಪ್ಪಂದದಿಂದ ಏನು ಲಾಭ?

ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ, ಕೆಲ ನಿರ್ದಿಷ್ಟ ಸರಕುಗಳನ್ನು ಹೊರತುಪಡಿಸಿ ಹೆಚ್ಚಿನ ವಸ್ತುಗಳ ಆಮದು ಮತ್ತು ರಫ್ತಿನಲ್ಲಿ ಸುಂಕದಲ್ಲಿ ವಿನಾಯಿತಿ ಅಥವಾ ರಿಯಾಯಿತಿ ಸಿಗುತ್ತದೆ. ಅಂದರೆ, ಅನಿರ್ಬಂಧಿತವಾಗಿ ಆಮದು ಮತ್ತು ರಫ್ತು ಮಾಡಬಹುದು. ಈಗ ಉತ್ಪಾದನೆ ಕಡೆ ಭಾರತ ಹೆಚ್ಚು ಗಮನ ಹರಿಸುತ್ತಿರುವುದರಿಂದ ಈ ವ್ಯಾಪಾರ ಒಪ್ಪಂದ ಸಕಾಲಿಕವಾಗಿದ್ದು, ಭಾರತಕ್ಕೆ ಅನುಕೂಲವಾಗುವ ನಿರೀಕ್ಷೆ ಇದೆ. ನಾಲ್ಕು ಐರೋಪ್ಯ ದೇಶಗಳ ಮಾರುಕಟ್ಟೆ ಅವಕಾಶ ಮುಕ್ತವಾಗಿ ಸಿಗಲಿದೆ. ರಫ್ತು ಪ್ರಮಾಣ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು, ಈಗ ಭಾರತ ಸಹಿ ಹಾಕುತ್ತಿರುವ ಈ ಒಪ್ಪಂದದ ಪ್ರಕಾರ ಭಾರತಕ್ಕೆ ಈ ನಾಲ್ಕು ದೇಶಗಳಿಂದ ಮುಂದಿನ 15 ವರ್ಷದಲ್ಲಿ 100 ಬಿಲಿಯನ್ ಡಾಲರ್​ನಷ್ಟು ಬಂಡವಾಳ ಹೂಡಿಕೆ ಆಗಬೇಕೆನ್ನುವ ಒಂದು ಅಂಶವೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ