Dharmendra Pradhan: ಬುಡಕಟ್ಟು ಭಾಷೆಗಳು ಸೇರಿದಂತೆ ಅನುಸೂಚಿತವಲ್ಲದ ಭಾಷೆಗಳ 52 ಕಿರು ಪಠ್ಯಪುಸ್ತಕ ಬಿಡುಗಡೆ
ಭಾರತದಲ್ಲಿ ಮಾತನಾಡುವ ಆದರೆ ಅಧಿಕೃತ ಮಾನ್ಯತೆ ಲಭಿಸದ ಎಲ್ಲ ಭಾಷೆಗಳನ್ನು ಅನುಸೂಚಿತವಲ್ಲದ ಭಾಷೆಗಳು ಎಂದು ಕರೆಯಲಾಗುತ್ತದೆ. ಅನುಸೂಚಿತವಲ್ಲದ ಭಾಷೆಗಳ 52 ಪಠ್ಯ ಪುಸ್ತಕಗಳು ಮಕ್ಕಳು ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಹೊಂದಲು ನೆರವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ನವದೆಹಲಿ, ಮಾರ್ಚ್ 10: ಬುಡಕಟ್ಟು ಭಾಷೆಗಳು ಸೇರಿದಂತೆ ಭಾರತದ ಅನುಸೂಚಿತವಲ್ಲದ ಭಾಷೆಗಳ 52 ಕಿರು ಪಠ್ಯಪುಸ್ತಕಗಳನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಬಿಡುಗಡೆಗೊಳಿಸಿದರು. ಈ ಪಠ್ಯಪುಸ್ತಕಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರಿಯ ಸಂಸ್ಥೆ (CIIL) ಸಿದ್ಧಪಡಿಸಿವೆ.
ಭಾರತದಲ್ಲಿ ಮಾತನಾಡುವ ಆದರೆ ಅಧಿಕೃತ ಮಾನ್ಯತೆ ಲಭಿಸದ ಎಲ್ಲ ಭಾಷೆಗಳನ್ನು ಅನುಸೂಚಿತವಲ್ಲದ ಭಾಷೆಗಳು ಎಂದು ಕರೆಯಲಾಗುತ್ತದೆ. ಅನುಸೂಚಿತವಲ್ಲದ ಭಾಷೆಗಳ 52 ಪಠ್ಯ ಪುಸ್ತಕಗಳು ಮಕ್ಕಳು ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಹೊಂದಲು ನೆರವಾಗಲಿದೆ. ಈ ಪಠ್ಯ ಪುಸ್ತಕಗಳು ಭಾರತೀಯ ಭಾಷೆಗಳಲ್ಲಿನ ಕಲಿಕೆಯನ್ನು ಉತ್ತೇಜಿಸಲಿದ್ದು, ಮಕ್ಕಳಲ್ಲಿ ಸ್ಪೂರ್ತಿ ತುಂಬಿ ಬದಲಾವಣೆಗೆ ಕಾರಣವಾಗಲಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: TV9 WITT Global Summit: ರಾಮ, ಅರ್ಜುನ, ಕೃಷ್ಣನ ಪಾತ್ರಗಳಿಗೆ ಮೋದಿಯನ್ನು ಹೋಲಿಸಿದ ಸಚಿವ ಧರ್ಮೇಂದ್ರ ಪ್ರಧಾನ್
ಜೊತೆಗೆ ಎನ್ಇಪಿ 2020ರ ದೃಷ್ಟಿಕೋನವನ್ನು ಸಾಕಾರಗೊಳಿಸಲಿದೆ. ಇನ್ನು ಪ್ರೈಮರ್ಸ್ ಪುಸ್ತಕಗಳು ಎಳೆ ಮನಸ್ಸುಗಳಲ್ಲಿ ಕುತೂಹಲವನ್ನು ಬಿತ್ತಿ ಆಳವಾದ ಅಧ್ಯಯನಕ್ಕೆ ಕಾರಣವಾಗಲಿದೆ, ಜೊತೆಗೆ ಮಕ್ಕಳು ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲಿದ್ದಾರೆ. ಆ ಮೂಲಕ ಶೈಕ್ಷಣಿಕವಾಹೊ ಮತ್ತು ಸಾಮಾಜಿಕವಾಗಿ ಯಶಸ್ಸು ಕಾಣಲಿದ್ದಾರೆ ಎಂದರು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಮತ್ತು ಗುಣಮಟ್ಟದ ಶಿಕ್ಷಣವನ್ನು ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಸಚಿವರು ವಿವಿಧ ಯೋಜನೆಗಳನ್ನು ಘೋಷಿಸಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಶಿಕ್ಷಕರಿಗೆ ರಾಷ್ಟ್ರೀಯ ವೃತ್ತಿಪರ ಮಾನದಂಡ, ಮಾರ್ಗದರ್ಶನಕ್ಕಾಗಿ ಮಿಷನ್ ಮತ್ತು ರಾಷ್ಟ್ರೀಯ ವಿದ್ಯಾ ಸಮೀಕ್ಷಾ ಕೇಂದ್ರ, 200 ಟಿವಿ ಡಿಟಿಎಚ್ ಚಾನೆಲ್‌ಗಳೊಂದಿಗೆ ಘೋಷಿಸಿದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 am, Sun, 10 March 24