Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಶೀಘ್ರ ಬಿಡುಗಡೆ : ಕೇಂದ್ರ ಸರ್ಕಾರ

ರಷ್ಯಾದಲ್ಲಿ ಕೆಲಸ ನೀಡುವುದಾಗಿ ವಂಚಿಸಿ, ಅಲ್ಲಿ ಸೈನ್ಯಕ್ಕೆ ಮೋಸದಿಂದ ಸೇರಿಸಿಕೊಂಡಿರುವ ಭಾರತೀಯರನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿಸುವುದಾಗಿ ಭಾರತ ಸರ್ಕಾರ ಹೇಳಿದೆ. ಈ ಕುರಿತು ರಷ್ಯಾ ಸರ್ಕಾರದ ಜತೆಗೆ ಮಾತುಕತೆ ನಡೆಸಿದ್ದೇವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ. 

ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಶೀಘ್ರ ಬಿಡುಗಡೆ : ಕೇಂದ್ರ ಸರ್ಕಾರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 08, 2024 | 5:39 PM

ದೆಹಲಿ, ಮಾ.8: ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಶೀಘ್ರ ಬಿಡುಗಡೆ ಮಾಡಲು ಬದ್ಧವಾಗಿದೆ ಎಂದು ಕೇಂದ್ರವು ಇಂದು (ಮಾ.8) ಹೇಳಿದೆ. ಭಾರತೀಯರನ್ನು ವಂಚಿಸಿ ರಷ್ಯಾದ ಸೇನೆಯೊಂದಿಗೆ ಕೆಲಸ ಮಾಡಲು ನೇಮಿಸಲಾಗಿದೆ. ಇದೀಗ ಅಲ್ಲಿರುವ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ನಾವು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಲಾಗಿದೆ.ಸುಳ್ಳು ನೆಪ ಮತ್ತು ಭರವಸೆಗಳನ್ನು ನೀಡಿ ಭಾರತೀಯ ನಾಗರಿಕರನ್ನು ಸೇನೆಗೆ ನೇಮಕ ಮಾಡಿಕೊಂಡಿರುವ ಏಜೆಂಟರು ಮತ್ತು ಕಾನೂನು ವಿರುದ್ಧವಾದ ಅಂಶಗಳು ಕಂಡು ಬಂದಿದ್ದು, ಅವರ ವಿರುದ್ಧ ಬಲವಾದ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ರಷ್ಯಾದ ಸೈನ್ಯದೊಂದಿಗೆ ಸಹಾಯಕ ಉದ್ಯೋಗಗಳಿಗಾಗಿ ಏಜೆಂಟ್‌ಗಳು ನೀಡುವ ಕೊಡುಗೆಗಳಿಂದ ವಂಚಿತರಾಗದಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ.

ಇಂತಹ ಮೊಸಗಳಿಗೆ ಒಳಲಾಗುವುದು ಅಪಾಯ ಮತ್ತು ಜೀವ ತೊಂದರೆ ಎಂದು ಹೇಳಿದೆ. ರಷ್ಯಾದ ಸೈನ್ಯದಲ್ಲಿ ಸಹಾಯಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಪ್ರಜೆಗಳ ಬಿಡುಗಡೆಗೆ ಮತ್ತು ಅವರನ್ನು ಭಾರತಕ್ಕೆ ವಾಪಸ್ಸು ಕರೆಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.

ರಷ್ಯಾ ಮತ್ತು ಉಕ್ರೇನ್ ಸೇರಿದಂತೆ ವಿದೇಶದಲ್ಲಿ ಲಾಭದಾಯಕ ಉದ್ಯೋಗಗಳ ನೀಡುವುದಾಗಿ ಪೊಳ್ಳು ಭರವಸೆಯನ್ನು ನೀಡಿ, ಯುವಜನರನ್ನು ಗುರಿಯಾಗಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದೆ. ಹಾಗೂ ದೇಶಾದ್ಯಂತ ನಡೆಯುತ್ತಿರುವ ಮಾನವ ಕಳ್ಳಸಾಗಣೆ ಜಾಲವನ್ನು ಕೇಂದ್ರೀಯ ಬ್ಯೂರೋ (ಸಿಬಿಐ) ಭೇದಿಸಿದ್ದು, ಈ ಸಮಯದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಉಕ್ರೇನ್​​ ಮತ್ತು ರಷ್ಯಾದಲ್ಲಿ ಯುದ್ಧ ನಡೆಯುತ್ತಿದೆ, ಇದನ್ನೇ ಲಾಭ ಮಾಡಿಕೊಂಡು ಏಜೆಂಟ್​​​ಗಳು ಈ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ.

ದೆಹಲಿ, ತಿರುವನಂತಪುರಂ, ಮುಂಬೈ, ಅಂಬಾಲಾ, ಚಂಡೀಗಢ, ಮಧುರೈ ಮತ್ತು ಚೆನ್ನೈನ 13 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ಏಜೆಂಟ್​​​ಗಳು ವಿದೇಶಕ್ಕೆ ಮಾನವ ಕಳ್ಳಸಾಗಣೆಯನ್ನು ಮಾಡಿರುವ 35 ಪ್ರಕರಣಗಳು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರಿಗೆ ಒದ್ದ ದೆಹಲಿ ಪೊಲೀಸ್; ಅಧಿಕಾರಿ ಅಮಾನತು

ರಷ್ಯಾ ಪರ ಹೋರಾಡಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ

ಇನ್ನು ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಇಬ್ಬರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ ಅವರು ಸಾವನ್ನಪ್ಪಿರುವ ಬಗ್ಗೆ ಮಾರ್ಚ್ 6 ರಂದು ಎಕ್ಸ್​​​ನಲ್ಲಿ ತಿಳಿಸಿದೆ.

ಹೈದರಾಬಾದ್‌ನ 30 ವರ್ಷದ ವ್ಯಕ್ತಿ ಕಳೆದ ವರ್ಷದ ಕೊನೆಯಲ್ಲಿ ರಷ್ಯಾಕ್ಕೆ ಪ್ರಯಾಣ ಬೆಳೆಸಿದ್ದು, ಕಳೆದ ತಿಂಗಳು ಯುದ್ಧ ನಡೆಯುತ್ತಿದ್ದ ವಲಯದಲ್ಲಿ ಇಬ್ಬರು ಭಾರತೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಕ್ಕೂ ಮೊದಲು, ಗುಜರಾತ್‌ನ ಸೂರತ್‌ನ ನಿವಾಸಿ 23 ವರ್ಷದ ಹೇಮಲ್ ಅಶ್ವಿನ್‌ಭಾಯ್ ಮಂಗುಕಿಯಾ ಅವರು ರಷ್ಯಾ ಆಕ್ರಮಿತ ಉಕ್ರೇನ್‌ನ ಒಂದು ಭಾಗವಾದ ಡೊನೆಟ್ಸ್ಕ್‌ನಲ್ಲಿ ರಷ್ಯಾದ ಸೈನ್ಯದೊಂದಿಗೆ ಭದ್ರತಾ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ಉಕ್ರೇನಿಯನ್ ನಡೆಸಿದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Fri, 8 March 24

ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಪ್ರತಿಭಟನೆ ಹೆಸರಲ್ಲಿ ಕುಟುಂಬವೊಂದರ ವೈಭವೀಕರಣ ನಡೆಯಬಾರದು: ಯತ್ನಾಳ್
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್​ನ ಔಟ್ ಮಾಡಿದ ಬೌಲರ್​ನ ಅಭಿನಂದಿಸಿದ ವಿರಾಟ್ ಕೊಹ್ಲಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ