AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 11th March: ಚಿನ್ನ, ಬೆಳ್ಳಿ ಬೆಲೆ ಮತ್ತೆ ಭರ್ಜರಿ ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2024: ಮದುವೆ ಸೀಸನ್ ಇರುವ ಭಾರತದಲ್ಲಿ ಈಗ ಚಿನ್ನದ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಪೀಕಲಾಟ ತಂದಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಶೇ. 6ರಷ್ಟು ಏರಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,270 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 75.70 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 60,750 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,500 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 11th March: ಚಿನ್ನ, ಬೆಳ್ಳಿ ಬೆಲೆ ಮತ್ತೆ ಭರ್ಜರಿ ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ
TV9 Web
| Edited By: |

Updated on: Mar 11, 2024 | 5:00 AM

Share

ಬೆಂಗಳೂರು, ಮಾರ್ಚ್ 11: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and silver Rates) ಅಸ್ವಾಭಾವಿಕ ಏರಿಕೆಯ ಓಟ ಮುಂದುವರಿದಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆ ಶೇ. 6ರಷ್ಟು ಹೆಚ್ಚಳವಾಗಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿತ ಮಾಡುವ ಸಂಭಾವ್ಯತೆಗೆ ಸಿಕ್ಕಿರುವ ಸ್ಪಂದನೆ ಇದು. ನಿರೀಕ್ಷೆಗಿಂತಲೂ ಬೆಲೆ ಹೆಚ್ಚಳವಾಗಿದೆ. ಹತ್ತು ದಿನದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 320 ರೂಗೂ ಹೆಚ್ಚಾಗಿರುವುದು ಗಮನಾರ್ಹ. ಮದುವೆ ಸೀಸನ್ ಇರುವ ಭಾರತದಲ್ಲಿ ಈಗ ಜನರಿಗೆ ಈ ಬೆಲೆ ಏರಿಕೆ ಬಿಸಿ ತಾಕಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,270 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,570 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 60,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 11ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,270 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 757 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,270 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 750 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 60,750 ರೂ
  • ಚೆನ್ನೈ: 61,500 ರೂ
  • ಮುಂಬೈ: 60,750 ರೂ
  • ದೆಹಲಿ: 60,900 ರೂ
  • ಕೋಲ್ಕತಾ: 60,750 ರೂ
  • ಕೇರಳ: 60,750 ರೂ
  • ಅಹ್ಮದಾಬಾದ್: 60,800 ರೂ
  • ಜೈಪುರ್: 60,900 ರೂ
  • ಲಕ್ನೋ: 60,900 ರೂ
  • ಭುವನೇಶ್ವರ್: 60,750 ರೂ

ಇದನ್ನೂ ಓದಿ: ಮಾ. 1ರ ವಾರದಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ 625 ಬಿಲಿಯನ್ ಡಾಲರ್​ಗೆ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,250 ರಿಂಗಿಟ್ (57,417 ರುಪಾಯಿ)
  • ದುಬೈ: 2,445 ಡಿರಾಮ್ (55,086 ರುಪಾಯಿ)
  • ಅಮೆರಿಕ: 665 ಡಾಲರ್ (55,029 ರುಪಾಯಿ)
  • ಸಿಂಗಾಪುರ: 904 ಸಿಂಗಾಪುರ್ ಡಾಲರ್ (56,188 ರುಪಾಯಿ)
  • ಕತಾರ್: 2,500 ಕತಾರಿ ರಿಯಾಲ್ (56,724 ರೂ)
  • ಸೌದಿ ಅರೇಬಿಯಾ: 2,510 ಸೌದಿ ರಿಯಾಲ್ (55,378 ರುಪಾಯಿ)
  • ಓಮನ್: 264.50 ಒಮಾನಿ ರಿಯಾಲ್ (56,858 ರುಪಾಯಿ)
  • ಕುವೇತ್: 206 ಕುವೇತಿ ದಿನಾರ್ (55,514 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,500 ರೂ
  • ಚೆನ್ನೈ: 7,920 ರೂ
  • ಮುಂಬೈ: 7,570 ರೂ
  • ದೆಹಲಿ: 7,570 ರೂ
  • ಕೋಲ್ಕತಾ: 7,570 ರೂ
  • ಕೇರಳ: 7,920 ರೂ
  • ಅಹ್ಮದಾಬಾದ್: 7,570 ರೂ
  • ಜೈಪುರ್: 7,570 ರೂ
  • ಲಕ್ನೋ: 7,570 ರೂ
  • ಭುವನೇಶ್ವರ್: 7,920 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ