AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: Wd,Wd,Wd,Wd,Nb,4,6; ಕೊನೆಯ ಓವರ್​ನಲ್ಲಿ ಎಡವಿದ ಸಂದೀಪ್ ಶರ್ಮಾ

Sandeep Sharma's Costly Over: 2025ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರದರ್ಶನ ನಿರಾಶಾದಾಯಕವಾಗಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ತಂಡವು ನಿರಂತರವಾಗಿ ಸೋಲನ್ನು ಎದುರಿಸುತ್ತಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿ ವೇಗ ಸಂದೀಪ್ ಶರ್ಮಾ ಅವರ ದುಬಾರಿ ಕೊನೆಯ ಓವರ್ ಕೋಚ್ ರಾಹುಲ್ ದ್ರಾವಿಡ್ ಕೋಪಗೊಳ್ಳುವಂತೆ ಮಾಡಿದೆ.

IPL 2025: Wd,Wd,Wd,Wd,Nb,4,6; ಕೊನೆಯ ಓವರ್​ನಲ್ಲಿ ಎಡವಿದ ಸಂದೀಪ್ ಶರ್ಮಾ
Sandeep Sharma
ಪೃಥ್ವಿಶಂಕರ
|

Updated on:Apr 16, 2025 | 11:03 PM

Share

2025 ರ ಐಪಿಎಲ್​ನಲ್ಲಿ (IPL 2025) ಕನ್ನಡಿಗ ರಾಹುಲ್ ದ್ರಾವಿಡ್ ಕೋಚಿಂಗ್​ನಲ್ಲಿ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್ (RR) ತಂಡದ ಇಲ್ಲಿಯವರೆಗಿನ ಪ್ರಯಾಣವು ಏರಿಳಿತಗಳಿಂದ ಕೂಡಿದೆ. ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ತಂಡವು ಗೆಲುವಿಗಿಂತ ಸೋಲುಗಳನ್ನೇ ಹೆಚ್ಚು ಎದುರಿಸಿದೆ. ತಂಡದ ಎಲ್ಲಾ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಒಬ್ಬಲ್ಲ ಒಬ್ಬ ಆಟಗಾರ ತಮ್ಮ ಕಳಪೆ ಪ್ರದರ್ಶನದಿಂದ ಎಲ್ಲರನ್ನು ನಿರಾಶೆಗೊಳಿಸುತ್ತಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ರಾಜಸ್ಥಾನದ ಅನುಭವಿ ಬೌಲರ್ ಸಂದೀಪ್ ಶರ್ಮಾ (Sandeep Sharma) ಒಂದೇ ಓವರ್‌ನಲ್ಲಿ ಸರಣಿ ವೈಡ್‌ಗಳನ್ನು ಬೌಲ್ ಮಾಡಿ ಭಾರಿ ದುಬಾರಿಯಾಗಿದ್ದಾರೆ.

ಏಪ್ರಿಲ್ 16 ಬುಧವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಮಧ್ಯಮ ಓವರ್‌ಗಳಲ್ಲಿ ತ್ವರಿತವಾಗಿ ರನ್ ಬಂದರೂ, ರಾಜಸ್ಥಾನ ಬೌಲರ್‌ಗಳು ತಮ್ಮ ಕರಾರುವಕ್ಕಾದ ದಾಳಿಯಿಂದ ಡೆಲ್ಲಿ ಬ್ಯಾಟರ್​ಗಳಿಗೆ ಮುಕ್ತವಾಗಿ ಆಡಲು ಅವಕಾಶ ನೀಡಿರಲಿಲ್ಲ. ಇದರಲ್ಲಿ ಪ್ರಮುಖ ಪಾತ್ರವಹಿಸಿದ ಸಂದೀಪ್ ಶರ್ಮಾ 3 ಓವರ್‌ಗಳಲ್ಲಿ ಕೇವಲ 14 ರನ್‌ಗಳನ್ನು ನೀಡಿ ಡೆಲ್ಲಿ ಬ್ಯಾಟರ್​ಗಳ ಮೇಲೆ ಒತ್ತಡ ಹೇರಿದ್ದರು. ಆದರೆ ಕೊನೆಯ ಓವರ್​ನಲ್ಲಿ ಲಯ ಕಳೆದುಕೊಂಡ ಸಂದೀಪ್ ಸಾಕಷ್ಟು ದುಬಾರಿಯಾದರು.

1 ಓವರ್​ನಲ್ಲಿ 11 ಎಸೆತಗಳು

ಮೊದಲ 3 ಓವರ್​ಗಳಲ್ಲಿ ಅದ್ಭುತವಾಗಿ ಬೌಲ್ ಮಾಡಿದ್ದ ಸಂದೀಪ್ ಕೊನೆಯ ಓವರ್​ನಲ್ಲಿ ಲಯ ಕಳೆದುಕೊಂಡರು. ಡೆಲ್ಲಿ ಇನ್ನಿಂಗ್ಸ್​ನ 20ನೇ ಓವರ್ ಬೌಲ್ ಮಾಡಲು ಬಂದ ಸಂದೀಪ್ ಈ ಓವರ್ ಅನ್ನು ವೈಡ್ ಬಾಲ್ ಮೂಲಕ ಪ್ರಾರಂಭಿಸಿದರು. ನಂತರ ಮುಂದಿನ ಚೆಂಡಿನಲ್ಲಿ ಯಾವುದೇ ರನ್ ನೀಡಲಾಗಿಲ್ಲ. ಆದರೆ ಮತ್ತೊಮ್ಮೆ ಲಯ ಕಳೆದುಕೊಂಡ ಸಂದೀಪ್ ಮುಂದಿನ 3 ಸತತ ಎಸೆತಗಳನ್ನು ವೈಡ್ ಬೌಲ್ ಮಾಡಿದರು. ನಂತರ ಮುಂದಿನ ಎಸೆತದಲ್ಲಿ ಕೇವಲ ಒಂದು ರನ್ ನೀಡಿದರಾದರೂ ಆ ಎಸೆತ ನೋ ಬಾಲ್ ಆಗಿತ್ತು. ಅಂಪೈರ್ ಈ ಎಸೆತವನ್ನು ನೋ-ಬಾಲ್ ಎಂದು ಘೋಷಿಸಿದ ತಕ್ಷಣ, ರಾಜಸ್ಥಾನ್ ಕೋಚ್ ರಾಹುಲ್ ದ್ರಾವಿಡ್ ಕೂಡ ಅಸಮಾಧಾನಗೊಂಡು ತಮ್ಮ ನಿರಾಶೆ ವ್ಯಕ್ತಪಡಿಸಿದರು.

IPL 2025: ಕಳೆದ ಪಂದ್ಯದ ಹೀರೋ ಇಂದಿನ ಪಂದ್ಯದಲ್ಲಿ ಜೀರೋ; ಅವಸರವೇ ಅಪಾಯ ಕರುಣ್

ಕೊನೆಯ ಎಸೆತದಲ್ಲಿ ಕ್ಯಾಚ್ ಮಿಸ್

ಫ್ರೀ-ಹಿಟ್ ಲಾಭವನ್ನು ಸದುಪಯೋಗಪಡಿಸಿಕೊಂಡ ಡೆಲ್ಲಿ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ ಅದರಲ್ಲಿ ಒಂದು ಬೌಂಡರಿ ಬಾರಿಸಿದರು. ನಂತರ ಮುಂದಿನ ಎಸೆತದಲ್ಲೂ ಸಿಕ್ಸರ್ ಬಾರಿಸಿದರು. ಒಟ್ಟಾರೆಯಾಗಿ, ಸಂದೀಪ್ ಈ ಓವರ್‌ನಲ್ಲಿ 4 ವೈಡ್ ಬಾಲ್‌ ಮತ್ತು ಒಂದು ನೋ-ಬಾಲ್ ಎಸೆದರು. ವಾಸ್ತವವಾಗಿ ಏನಾಯಿತು ಎಂದರೆ 20 ನೇ ಓವರ್ ಆರಂಭವಾಗುವ ಮೊದಲು ದೆಹಲಿಯ ಸ್ಕೋರ್ 169 ರನ್‌ಗಳಾಗಿತ್ತು. ಆದರೆ ಇನ್ನಿಂಗ್ಸ್ ಅಂತ್ಯದ ವೇಳೆಗೆ ಸ್ಕೋರ್ 188 ರನ್‌ಗಳಿಗೆ ತಲುಪಿತು. ಕೊನೆಯ ಓವರ್‌ನಲ್ಲಿ ಸಂದೀಪ್ 19 ರನ್‌ಗಳನ್ನು ನೀಡಿದರು. ಇದು ಸಾಲದಂಬಂತೆ ಕೊನೆಯ ಎಸೆತದಲ್ಲಿ ಸುಲಭವಾದ ಕ್ಯಾಚ್ ಕೂಡ ಕೈತಪ್ಪಿತು. ಒಟ್ಟಾರೆಯಾಗಿ, ಸಂದೀಪ್ 3 ಓವರ್‌ಗಳಲ್ಲಿ ಕೇವಲ 14 ರನ್‌ಗಳನ್ನು ನೀಡಿ 4 ಓವರ್‌ಗಳಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 pm, Wed, 16 April 25

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ