AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ, ಗುರುವಾರದಂದು ದಾಯಾದಿ ಕಲಹ, ಸಂಗಾತಿಯ ಜೊತೆ ಪ್ರಯಾಣ, ಪ್ರೇಮಕ್ಕಾಗಿ ಯಾಚನೆ ಇವೆಲ್ಲ ಈ ದಿನ ಇದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 17, 2025 | 1:26 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವರಿಯಾನ್, ಕರಣ : ಬಾಲವ, ಸೂರ್ಯೋದಯ – 06:18 am, ಸೂರ್ಯಾಸ್ತ – 06:45 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:06 – 15:39, ಯಮಘಂಡ ಕಾಲ 06:19 – 07:52, ಗುಳಿಕ ಕಾಲ 09:26 – 10:59

ಮೇಷ ರಾಶಿ: ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಅದನ್ನು ಕೊಡಿ. ಅವರೂ ನೀವು ಸಂತೋಷದಿಂದ ಇರಬಹುದು. ಬೆಚ್ಚಗಿನ ವಾತಾವರಣವು ದೇಹಕ್ಕೂ ಮನಸ್ಸಿಗೂ ಇಂದು ಹಿತವಾಗಲಿದೆ. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಒಳ್ಳೆಯ ವ್ಯಕ್ತಿಗಳ ಪರಿಚಯದಿಂದ ಲಾಭ ಸಿಗಬಹುದು. ಗೃಹದಲ್ಲಿ ಸಂಭ್ರಮ. ಸ್ತ್ರೀಯರ ಮೂಲಕ ಸಹಾಯ ಲಭಿಸುತ್ತದೆ. ಕುಟುಂಬದಲ್ಲಿ ಹೆಚ್ಚು ನೆಮ್ಮದಿ ಅನುಭವಿಸುತ್ತೀರಿ. ಶ್ರದ್ಧಾ, ನಂಬಿಕೆಯಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತವೆ. ವಾಹನ ಚಾಲನೆಯಿಂದ ಆಯಾಸವಾದೀತು. ಸಂಬಂಧವಿಲ್ಲದ ವಿಚಾರದ ಬಗ್ಗೆಯೂ ಇಂದು ಹೆಚ್ಚು ಮಾತನಾಡುವಿರಿ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ನಿಮ್ಮೆದುದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು. ನಿಮ್ಮನ್ನು ಕೆಲಸಕ್ಕೋಸ್ಕರ ಪ್ರಶಂಸಿಸಬಹುದು.

ವೃಷಭ ರಾಶಿ: ನಿಮ್ಮ ಆಲೋಚನಗಳನ್ನು ಸ್ನೇಹಿತರ ಮೇಲೆ ಹೇಳುವಿರಿ. ಬಂಧುಗಳು‌ ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವರು. ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ಉಳಿಸಿಕೊಳ್ಳಿ. ಜೊತೆಗೆ ನೀವು ಸಮಯದ ಮೌಲ್ಯ ತಿಳಿಯಬೇಕು. ಸೋಮಾರಿತನದಿಂದ ಯಾವುದೇ ಅವಕಾಶ ತಪ್ಪುವಂತೆ ಮಾಡಿಕೊಳ್ಳಬೇಡಿ. ನಿಮ್ಮ ಶ್ರಮಕ್ಕೆ ಖಂಡಿತ ನೀವು ಫಲಿತಾಂಶ ಪಡೆಯುತ್ತೀರಿ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರದಲ್ಲಿ ಗೊಂದಲವಿರುವುದು. ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ಉಪಕಾರದ ಕೃತಜ್ಞತೆ ಇರಲಿ. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಬಹುದು. ದುರ್ಬಲರ ಮೇಲೆ ನೀವು ಸಿಟ್ಟಾಗುವಿರಿ. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಮಿಥುನ ರಾಶಿ: ನಿಮಗಿಂದು ಒತ್ತಾಯದ ಮೇರೆಗೆ ಸಭೆ, ಸಮಾರಂಭಗಳಲ್ಲಿ ಮಾತನಾಡುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸ್ವ ಆಸಕ್ತಿಯಿಂದ ತೊಡಗಿಕೊಳ್ಳುವರು. ಆಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾತುವಿಹಾರಕ್ಕೆಂದು ಹೋಗುವಿರಿ. ಸಾಮಾಜಿಕವಾಗಿ ನಿಮಗೆ ಗೌರವ ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಪ್ರಾಯಾಣಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಿತ್ರರಿಂದ ಸಂತೋಷದ ಸುದ್ದಿ ಕೇಳಬಹುದು.ವಸದಾ ದೂರವುದನ್ನು ಬಿಟ್ಟು ಮರೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಹಲವರ ಮಾತಿನಿಂದ ನಿಮ್ಮ ನಿರ್ಧಾರವು‌ ಗೊಂದಲವಾಗಿಯೇ ಉಳಿಯುವುದು. ನೀವು ಹೊಗಳಿಕೆ ನಾಚಿಕೊಳ್ಳುವಿರಿ. ಏನಾದರೊಂದು ಕಾರ್ಯವನ್ನು ನೀವು ಮಾಡುತ್ತಲೇ ಇರುವುದು ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಪ್ರಯಾಣವು ಅನಿವಾರ್ಯವಾದರೂ ಅದರಿಂದ ಶುಭ ಸುದ್ದಿಯು ನಿಮಗೆ ಇರುವುದು.

ಕರ್ಕಾಟಕ ರಾಶಿ: ನಿಮ್ಮನ್ನು ಕಾಪಾಡಲು ನೀವೆ ಮುಂದಾಗುವುದು ಸೂಕ್ತ. ಅನ್ಯರ ನಿರೀಕ್ಷೆ ಸಲ್ಲದು. ನೀವು ವಿದ್ಯಾಭ್ಯಾಸಕ್ಕೆಂದು ಉತ್ತಮ‌ವಾದ ಸ್ಥಾನ ಹುಡುಕುತ್ತಿದ್ದರೆ ಸಿಗಲಿದೆ. ಜನಜಾಗೃತಿಯ ಕಾರ್ಯಕ್ರಮಗಳಿಗೆ ಹೋಗಲಿದ್ದೀರಿ. ಸೋಮಾರಿತನದಿಂದ ಕೆಲವೊಂದು ಕೆಲಸಗಳು ಸ್ಥಗಿತಗೊಳ್ಳಬಹುದು. ಸೋಮಾರಿತನದಿಂದ ನಿಮ್ಮ ಸಮಯ ವ್ಯರ್ಥವಾಗಬಾರದು. ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ವಹಿಸುವ ಅವಶ್ಯಕತೆ ಇದೆ. ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಸ್ಥಿರಾಸ್ತಿಯ ವಿಚಾರಕ್ಕಾಗಿ ಕುಟುಂಬದ ಹಿರಿಯರ ಜೊತೆ ಮಾತುಕತೆ ನಡೆಸುವಿರಿ. ನಿಮ್ಮಮೇಲೇ‌ ನಿಮಗೆ ಅಪನಂಬಿಕೆ ಉಂಟಾಗಬಹುದು. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧಾನ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸ ಕಾರ್ಯವನ್ನು ಹಾಳುಮಾಡಬಹುದು.

ಸಿಂಹ ರಾಶಿ: ನಿಮಗೆ ಆಗದವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಪ್ರಯತ್ನ ಮಾಡುವಿರಿ. ಆಭರಣವನ್ನು ತಡಗೆದುಕೊಳ್ಳುವ ಮನಸ್ಸು ಮಾಡುವಿರಿ. ಮನಸ್ಸಿನಲ್ಲಿ ಸ್ವಲ್ಪ ಅಸೌಖ್ಯ ಅನುಭವಿಸುವ ಸಾಧ್ಯತೆ ಇದೆ. ಈ ದಿನ ನಿಮಗೆ ಬದಲಾವಣೆಗಳ ಸಮಯ, ಹೊಸ ಜನರ ಪರಿಚಯದಿಂದ ಹೊಸ ವಿಚಾರಗಳು ಬರುತ್ತವೆ. ಈ ವೇಳೆ ಕುಟುಂಬದಲ್ಲಿ ಗೊಂದಲಗಳನ್ನು ದೂರ ಇಡಲು ಯತ್ನಿಸಿ. ದುರಭ್ಯಾಸದಿಂದ ಎಲ್ಲ ಬಳಿಯಿಂದ ನಿಂದನೆ. ನೌಕರರಿಗೆ ಉದ್ಯೋಗದಲ್ಲಿ ಇರಬೇಕಾದ ಪ್ರಾಮಾಣಿಕತೆ ಕಡಿಮೆಯಾಗುವುದು. ಸತ್ಯವನ್ನು ಹೇಳುವ ತೀರ್ಮಾನವನ್ನು ಮಾಡುವಿರಿ. ಅನಾರೋಗ್ಯದಿಂದ ಕುಗ್ಗುವಿರಿ. ಬಾಲ್ಯದ ಘಟನೆಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ದಾನ ಮಾಡುವ ಮನಸ್ಸಾಗುವುದು. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು.

ಕನ್ಯಾ ರಾಶಿ: ವಿದ್ಯಾಭ್ಯಾಸಕ್ಕೆ ಸೂಕ್ತ ಸ್ಥಳದ ಆಯ್ಕೆ ಮಾಡುವಿರಿ. ಮಿತಿ ಮೀರಿದ ಕಾರ್ಯಗಳಿಂದ ದೇಹ ಮನಸ್ಸಿಗೆ ಹೆಚ್ಚು ಆಯಾಸವಾಗುವುದು. ದಾಯಾದಿ ಕಲಹವು ಇಂದು ನ್ಯಾಯಾಲಯಕ್ಕೆ ಹೋಗಲಿದೆ‌. ಉತ್ಸಾಹ, ತಾಳ್ಮೆ ನಿಮಗೆ ಈ ದಿನ ಹೊಸ ಶಕ್ತಿ ನೀಡಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಇದೆ. ಆರ್ಥಿಕ ಲಾಭ ಸಂಭವಿಸಬಹುದು. ಖರೀದಿ ಅಥವಾ ಅಲಂಕಾರಿಕ ವಸ್ತು ಖರೀದಿಸುವ ಸಾಧ್ಯತೆ ಇದೆ. ಸಣ್ಣ ಉದ್ಯಮಿಗಳಿಗೆ ಲಾಭವಿದೆ. ಕಾರ್ಯದ‌ ದಕ್ಷತೆಗೆ ಮೆಚ್ಚಗೆ ಸಿಗಬಹುದು. ವಾಹನವನ್ನು ಖರೀದಿಸುವ ಮನಸ್ಸಾಗುವುದು. ಸಮಸ್ಯೆಗೆ ವೇಗದಲ್ಲಿ ಸ್ಪಂದಿಸಿ ಎಡವಟ್ಟು ಮಾಡಿಕೊಳ್ಳುವಿರಿ. ‌ಸಾವಧಾನದಿಂದ‌ ಚಿಂತಿಸುವ ಅವಶ್ಯಕತೆ ಇರಲಿದೆ. ಎಲ್ಲದಕ್ಕೂ ತಂದೆ ತಾಯಿಗಳನ್ನು ದೂರುತ್ತ ಇರುವುದು ಬೇಡ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?