AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 17 April: ಈ ರಾಶಿಯವರಿಗೆ ಹತ್ತಿರದವರಿಗಿಂತ ದೂರದವರ ಮೇಲೆ ಆಸಕ್ತಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ, ಗುರುವಾರದಂದು ದಾಯಾದಿ ಕಲಹ, ಸಂಗಾತಿಯ ಜೊತೆ ಪ್ರಯಾಣ, ಪ್ರೇಮಕ್ಕಾಗಿ ಯಾಚನೆ ಇವೆಲ್ಲ ಈ ದಿನ ಇದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 17 April: ಈ ರಾಶಿಯವರಿಗೆ ಹತ್ತಿರದವರಿಗಿಂತ ದೂರದವರ ಮೇಲೆ ಆಸಕ್ತಿ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 17, 2025 | 1:06 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವರಿಯಾನ್, ಕರಣ : ಬಾಲವ, ಸೂರ್ಯೋದಯ – 06:18 am, ಸೂರ್ಯಾಸ್ತ – 06:45 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:06 – 15:39, ಯಮಘಂಡ ಕಾಲ 06:19 – 07:52, ಗುಳಿಕ ಕಾಲ 09:26 – 10:59

ಮೇಷ ರಾಶಿ: ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಅದನ್ನು ಕೊಡಿ. ಅವರೂ ನೀವು ಸಂತೋಷದಿಂದ ಇರಬಹುದು. ಬೆಚ್ಚಗಿನ ವಾತಾವರಣವು ದೇಹಕ್ಕೂ ಮನಸ್ಸಿಗೂ ಇಂದು ಹಿತವಾಗಲಿದೆ. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಒಳ್ಳೆಯ ವ್ಯಕ್ತಿಗಳ ಪರಿಚಯದಿಂದ ಲಾಭ ಸಿಗಬಹುದು. ಗೃಹದಲ್ಲಿ ಸಂಭ್ರಮ. ಸ್ತ್ರೀಯರ ಮೂಲಕ ಸಹಾಯ ಲಭಿಸುತ್ತದೆ. ಕುಟುಂಬದಲ್ಲಿ ಹೆಚ್ಚು ನೆಮ್ಮದಿ ಅನುಭವಿಸುತ್ತೀರಿ. ಶ್ರದ್ಧಾ, ನಂಬಿಕೆಯಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತವೆ. ವಾಹನ ಚಾಲನೆಯಿಂದ ಆಯಾಸವಾದೀತು. ಸಂಬಂಧವಿಲ್ಲದ ವಿಚಾರದ ಬಗ್ಗೆಯೂ ಇಂದು ಹೆಚ್ಚು ಮಾತನಾಡುವಿರಿ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ನಿಮ್ಮೆದುದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು. ನಿಮ್ಮನ್ನು ಕೆಲಸಕ್ಕೋಸ್ಕರ ಪ್ರಶಂಸಿಸಬಹುದು.

ವೃಷಭ ರಾಶಿ: ನಿಮ್ಮ ಆಲೋಚನಗಳನ್ನು ಸ್ನೇಹಿತರ ಮೇಲೆ ಹೇಳುವಿರಿ. ಬಂಧುಗಳು‌ ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವರು. ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ಉಳಿಸಿಕೊಳ್ಳಿ. ಜೊತೆಗೆ ನೀವು ಸಮಯದ ಮೌಲ್ಯ ತಿಳಿಯಬೇಕು. ಸೋಮಾರಿತನದಿಂದ ಯಾವುದೇ ಅವಕಾಶ ತಪ್ಪುವಂತೆ ಮಾಡಿಕೊಳ್ಳಬೇಡಿ. ನಿಮ್ಮ ಶ್ರಮಕ್ಕೆ ಖಂಡಿತ ನೀವು ಫಲಿತಾಂಶ ಪಡೆಯುತ್ತೀರಿ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರದಲ್ಲಿ ಗೊಂದಲವಿರುವುದು. ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ಉಪಕಾರದ ಕೃತಜ್ಞತೆ ಇರಲಿ. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಬಹುದು. ದುರ್ಬಲರ ಮೇಲೆ ನೀವು ಸಿಟ್ಟಾಗುವಿರಿ. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಮಿಥುನ ರಾಶಿ: ನಿಮಗಿಂದು ಒತ್ತಾಯದ ಮೇರೆಗೆ ಸಭೆ, ಸಮಾರಂಭಗಳಲ್ಲಿ ಮಾತನಾಡುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸ್ವ ಆಸಕ್ತಿಯಿಂದ ತೊಡಗಿಕೊಳ್ಳುವರು. ಆಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾತುವಿಹಾರಕ್ಕೆಂದು ಹೋಗುವಿರಿ. ಸಾಮಾಜಿಕವಾಗಿ ನಿಮಗೆ ಗೌರವ ಸಿಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಪ್ರಾಯಾಣಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಿತ್ರರಿಂದ ಸಂತೋಷದ ಸುದ್ದಿ ಕೇಳಬಹುದು.ವಸದಾ ದೂರವುದನ್ನು ಬಿಟ್ಟು ಮರೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಹಲವರ ಮಾತಿನಿಂದ ನಿಮ್ಮ ನಿರ್ಧಾರವು‌ ಗೊಂದಲವಾಗಿಯೇ ಉಳಿಯುವುದು. ನೀವು ಹೊಗಳಿಕೆ ನಾಚಿಕೊಳ್ಳುವಿರಿ. ಏನಾದರೊಂದು ಕಾರ್ಯವನ್ನು ನೀವು ಮಾಡುತ್ತಲೇ ಇರುವುದು ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಪ್ರಯಾಣವು ಅನಿವಾರ್ಯವಾದರೂ ಅದರಿಂದ ಶುಭ ಸುದ್ದಿಯು ನಿಮಗೆ ಇರುವುದು.

ಕರ್ಕಾಟಕ ರಾಶಿ: ನಿಮ್ಮನ್ನು ಕಾಪಾಡಲು ನೀವೆ ಮುಂದಾಗುವುದು ಸೂಕ್ತ. ಅನ್ಯರ ನಿರೀಕ್ಷೆ ಸಲ್ಲದು. ನೀವು ವಿದ್ಯಾಭ್ಯಾಸಕ್ಕೆಂದು ಉತ್ತಮ‌ವಾದ ಸ್ಥಾನ ಹುಡುಕುತ್ತಿದ್ದರೆ ಸಿಗಲಿದೆ. ಜನಜಾಗೃತಿಯ ಕಾರ್ಯಕ್ರಮಗಳಿಗೆ ಹೋಗಲಿದ್ದೀರಿ. ಸೋಮಾರಿತನದಿಂದ ಕೆಲವೊಂದು ಕೆಲಸಗಳು ಸ್ಥಗಿತಗೊಳ್ಳಬಹುದು. ಸೋಮಾರಿತನದಿಂದ ನಿಮ್ಮ ಸಮಯ ವ್ಯರ್ಥವಾಗಬಾರದು. ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ವಹಿಸುವ ಅವಶ್ಯಕತೆ ಇದೆ. ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಸ್ಥಿರಾಸ್ತಿಯ ವಿಚಾರಕ್ಕಾಗಿ ಕುಟುಂಬದ ಹಿರಿಯರ ಜೊತೆ ಮಾತುಕತೆ ನಡೆಸುವಿರಿ. ನಿಮ್ಮಮೇಲೇ‌ ನಿಮಗೆ ಅಪನಂಬಿಕೆ ಉಂಟಾಗಬಹುದು. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧಾನ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸ ಕಾರ್ಯವನ್ನು ಹಾಳುಮಾಡಬಹುದು.

ಸಿಂಹ ರಾಶಿ: ನಿಮಗೆ ಆಗದವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಪ್ರಯತ್ನ ಮಾಡುವಿರಿ. ಆಭರಣವನ್ನು ತಡಗೆದುಕೊಳ್ಳುವ ಮನಸ್ಸು ಮಾಡುವಿರಿ. ಮನಸ್ಸಿನಲ್ಲಿ ಸ್ವಲ್ಪ ಅಸೌಖ್ಯ ಅನುಭವಿಸುವ ಸಾಧ್ಯತೆ ಇದೆ. ಈ ದಿನ ನಿಮಗೆ ಬದಲಾವಣೆಗಳ ಸಮಯ, ಹೊಸ ಜನರ ಪರಿಚಯದಿಂದ ಹೊಸ ವಿಚಾರಗಳು ಬರುತ್ತವೆ. ಈ ವೇಳೆ ಕುಟುಂಬದಲ್ಲಿ ಗೊಂದಲಗಳನ್ನು ದೂರ ಇಡಲು ಯತ್ನಿಸಿ. ದುರಭ್ಯಾಸದಿಂದ ಎಲ್ಲ ಬಳಿಯಿಂದ ನಿಂದನೆ. ನೌಕರರಿಗೆ ಉದ್ಯೋಗದಲ್ಲಿ ಇರಬೇಕಾದ ಪ್ರಾಮಾಣಿಕತೆ ಕಡಿಮೆಯಾಗುವುದು. ಸತ್ಯವನ್ನು ಹೇಳುವ ತೀರ್ಮಾನವನ್ನು ಮಾಡುವಿರಿ. ಅನಾರೋಗ್ಯದಿಂದ ಕುಗ್ಗುವಿರಿ. ಬಾಲ್ಯದ ಘಟನೆಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ದಾನ ಮಾಡುವ ಮನಸ್ಸಾಗುವುದು. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು.

ಕನ್ಯಾ ರಾಶಿ: ವಿದ್ಯಾಭ್ಯಾಸಕ್ಕೆ ಸೂಕ್ತ ಸ್ಥಳದ ಆಯ್ಕೆ ಮಾಡುವಿರಿ. ಮಿತಿ ಮೀರಿದ ಕಾರ್ಯಗಳಿಂದ ದೇಹ ಮನಸ್ಸಿಗೆ ಹೆಚ್ಚು ಆಯಾಸವಾಗುವುದು. ದಾಯಾದಿ ಕಲಹವು ಇಂದು ನ್ಯಾಯಾಲಯಕ್ಕೆ ಹೋಗಲಿದೆ‌. ಉತ್ಸಾಹ, ತಾಳ್ಮೆ ನಿಮಗೆ ಈ ದಿನ ಹೊಸ ಶಕ್ತಿ ನೀಡಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವ ಸಾಧ್ಯತೆ ಇದೆ. ಆರ್ಥಿಕ ಲಾಭ ಸಂಭವಿಸಬಹುದು. ಖರೀದಿ ಅಥವಾ ಅಲಂಕಾರಿಕ ವಸ್ತು ಖರೀದಿಸುವ ಸಾಧ್ಯತೆ ಇದೆ. ಸಣ್ಣ ಉದ್ಯಮಿಗಳಿಗೆ ಲಾಭವಿದೆ. ಕಾರ್ಯದ‌ ದಕ್ಷತೆಗೆ ಮೆಚ್ಚಗೆ ಸಿಗಬಹುದು. ವಾಹನವನ್ನು ಖರೀದಿಸುವ ಮನಸ್ಸಾಗುವುದು. ಸಮಸ್ಯೆಗೆ ವೇಗದಲ್ಲಿ ಸ್ಪಂದಿಸಿ ಎಡವಟ್ಟು ಮಾಡಿಕೊಳ್ಳುವಿರಿ. ‌ಸಾವಧಾನದಿಂದ‌ ಚಿಂತಿಸುವ ಅವಶ್ಯಕತೆ ಇರಲಿದೆ. ಎಲ್ಲದಕ್ಕೂ ತಂದೆ ತಾಯಿಗಳನ್ನು ದೂರುತ್ತ ಇರುವುದು ಬೇಡ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು.

ತುಲಾ ರಾಶಿ: ಯಾರ ಬಳಿಯು ನಕಲಿ ತನವನ್ನು ತೋರಿಸುವುದು ಬೇಡ. ನಿಮ್ಮ ವಿಚಾರದಲ್ಲಿ ಅದು ಆಗದು. ಹಿತತ್ರುಗಳು ನಿಮ್ಮ ಸಂಪತ್ತನ್ನು ಬಳಿಸಿಕೊಳ್ಳಬಹುದು. ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲಮಾಡಬೇಕಾದ ಸ್ಥಿತಿಯು ಬರಬಹುದು. ಆಸ್ತಿ ಸಂಬಂಧಿ ಸಮಸ್ಯೆ ಎದುರಾಗಬಹುದು. ಮೋಸ ಹೋಗಬಹುದಾದ ಸಾಧ್ಯತೆ ಹೆಚ್ಚಿದೆ, ಆದ್ದರಿಂದ ಅಪರಿಚಿತರಿಂದ ದೂರವಿರಿ. ಹೊಸ ಕಾರ್ಯ ಆರಂಭಿಸಲು ಇದು ಯೋಗ್ಯ ಕಾಲವಲ್ಲ. ಆತ್ಮಸ್ಥೆರ್ಯ ಕಳೆದುಕೊಂಡರೆ ಶಕ್ತಿಯ ಹಿನ್ನಡೆ ಆಗಬಹುದು. ನಿಮ್ಮ ಬಂಧುಗಳಿಗೆ ನಿಮ್ಮ‌ ಮೇಲೆ‌ ಪ್ರೀತಿ ಹೆಚ್ಚಾದೀತು. ನಿಮ್ಮ ಕೆಲಸಕ್ಕೆ ತಂದೆಯಿಂದ ಆಕ್ಷೇಪ ಬರಬಹುದು. ಎಲ್ಲವನ್ನೂ ತಿಳಿದಿದ್ದೇನೆ ಎಂಬ ಮನೋಭಾವು ಎದ್ದು ತೋರುವುದು. ಹೂಡಿಕೆಯಲ್ಲಿ ವಿಶ್ವಾಸವು ಹೆಚ್ಚಾಗಲಿದೆ. ಸಾಲ ಕೊಟ್ಟವರು ನಿಮ್ಮನ್ನು ಕೇಳುವುದು ಹಿಂಸೆಯಾದೀತು. ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು.

ವೃಶ್ಚಿಕ ರಾಶಿ: ದೊಡ್ಡವರಿಂದ ಪ್ರಶಂಸೆ ಸಿಗಲಿದೆ. ನಿಮ್ಮ ಬುದ್ಧಿ, ಮನಸ್ಸುಗಳು ನಿಮ್ಮ ಹಿಡಿತದಲ್ಲಿ ಇರಲಿ. ಯಾವ ಸಂದರ್ಭದಲ್ಲಿ ಕೈಮೀರಿ ಹೋಗಿವ ಸನ್ನಿವೇಶವನ್ನು ತಂದುಕೊಳ್ಳಬೇಡಿ. ಪರರ ನಿಂದನೆಯಿಂದ ಕಳಂಕಬರುವುದು. ಕಲಾವಿದರಿಗೆ ಗಲಿಬಿಲಿಯ ಸನ್ನಿವೇಶವು ಬರಲಿದೆ. ಕೋಪ ನಿಯಂತ್ರಣದಲ್ಲಿ ಇಡಬೇಕು. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯ. ಅಜಾಗರೂಕತೆ ನಿಮ್ಮ ಗುರಿಯಿಂದ ದೂರವಿರಿಸಬಹುದು. ಅತಿಯಾದ ಆಲೋಚನೆ ತಪ್ಪಿಸಿ ದೃಢ ನಿರ್ಧಾರ ತೆಗೆದುಕೊಳ್ಳಿ. ಹಿರಿಯರ ಸಲಹೆ ನಿಮಗೆ ಒಳಿತಾಗಿಸಬಹುದು. ನಿಮ್ಮ ಕಾರ್ಯದಲ್ಲಿ ಅನುಭವದ ಕೊರತೆ ಕಾಣಿಸಲಿದ್ದು, ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾದೀತು. ಹಿತಶತ್ರುಗಳ ವಂಚನೆಯಾಗಿರುವುದು ಸಮಯ ಸರಿದಂತೆ ಗೊತ್ತಾಗುತ್ತದೆ. ಸಂಬಂಧದಲ್ಲಿ ಸಕಾರಾತ್ಮಕ ಮಾತುಗಳು ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ.

ಧನು ರಾಶಿ: ಒಬ್ಬರಿಂದ ಆಗದಿರುವುದು ಕಾರ್ಯ ಅನೇಕರಿಂದ ಸಾಧ್ಯ. ಸ್ವಾರ್ಥ ಬಿಟ್ಟು ಆಚೆ ಬರುವುದು ಉತ್ತಮ. ಎಂದೋ ಆದ ತಪ್ಪನ್ನು ಇಂದು ಪುನಃ ಹೇಳಿ ಬೇಸರ ಮಾಡಬಹುದು. ಸ್ತ್ರೀಯರಿಗೆ ವಿವಾಹವು ಬಹಳ ವಿಳಂಬವೆಂದು ಅನ್ನಿಸಬಹುದು. ಮನಸ್ಸಿನಲ್ಲಿ ಗೊಂದಲ ಉಂಟಾಗಿ ತೀರ್ಮಾನ ಕಷ್ಟ. ಮನೆಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಮಯ ಬೇಕಾಗುತ್ತದೆ. ತುರ್ತಿಲ್ಲದ ಕೆಲವೊಂದು ಕಾರ್ಯಗಳನ್ನು ಮುಂದೂಡಬೇಕಾಗಬಹುದು. ಮನೆಯಲ್ಲಿನ ಸಮಸ್ಯೆಗಳು ಹೆಚ್ಚಾದಂತೆ ತೋರುವುದು. ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ಮಾಡುವವರಿಗೆ ಶುಭದಿನ ಇಂದು. ಆತ್ಮಪ್ರಶಂಸೆಗೆ ಸರಿಯಾಗಿ ಕಾರಣವಿರಲಿ. ನಿಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸ ಕಡಿಮೆ ಆಗಲಿದೆ. ಹಿತಶತ್ರುಗಳ ಚಾಡಿ ಮಾತಿನಿಂದ ಒಳ್ಳೆಯ ಅವಕಾಶಗಳು ಕೈ ತಪ್ಪಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡುವಿರಿ.‌ ಗ್ರಾಹಕರಲ್ಲಿ ಸಂತುಷ್ಟಿ ಇರುವುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು.

ಮಕರ ರಾಶಿ: ಆಡಂಬರವನ್ನು ಮಾಡಿಕೊಂಡು ಸುತ್ತಾಡಿ ಸಂಕಟಕ್ಕೆ ಸಿಲುಕುವಿರಿ. ಕಾನೂನಾತ್ಮಕ ವಿಚಾರದಲ್ಲಿ ಮುಳುಗಲಿದ್ದೀರಿ. ಹಳೆಯ ಘಟನೆಗಳು ನಿಮಗೆ ನೆನಪಾಗುವುದು. ನಿಮ್ನ ಸಕಾರಾತ್ಮಕತೆಯನ್ನು ಹೆಚ್ಚು ಬಳಸಿಕೊಳ್ಳುವರು. ಸಾಮಾಜಿಕವಾಗಿ ನಿಮ್ಮ ಸ್ಥಾನ ಹೆಚ್ಚಾಗಬಹುದು. ಶುಭ ಸುದ್ದಿಗಳು ಕೇಳಿ ಬರುತ್ತವೆ. ಕುಟುಂಬದಲ್ಲಿ ಇಂದು ಸಂತಸದ ಸಮಯ. ನಿರ್ಣಯ ತೆಗೆದುಕೊಳ್ಳುವ ಮೊದಲು ಎಲ್ಲರ ಅಂಶಗಳನ್ನೂ ಪರಿಗಣಿಸಿ. ಹಣದ ಚಿಂತೆ ನಿಮ್ಮನ್ನು ಇಂದು ಕಾಡಲಿದೆ. ನಿಮ್ಮ ಕೆಲಸದಿಂದ ಮನೆಯ ಹಿರಿಯರು ಕೋಪಗೊಳ್ಳುವರು. ತಾಳ್ಮೆ ಹಾಗೂ ಏಕಾಗ್ರತೆಯಿಂದ ದಿನವನ್ನು ಮುನ್ನಡೆಸುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ನಿಮ್ಮ‌ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ.

ಕುಂಭ ರಾಶಿ: ಮಕ್ಕಳಿಂದ ಮಾನಸಿಕ ತೊಂದರೆ. ಪರಿಹಾರ ಕಂಡುಕೊಳ್ಳಲಾಗದ ಸ್ಥಿತಿ. ನಿಮ್ಮ ಪಾಲುದಾರಿಕೆಯಲ್ಲಿ ವೈಮನಸ್ಯ ತಲೆ ಹಾಕಬಹುದು. ಮೊದಲೇ ಸರಿ‌ಮಾಡಿಕೊಂಡರೆ ಒಳ್ಳೆಯದು. ದೂರದಲ್ಲಿ ವಾಸಿಸುವ ನೀವು ಇಂದು ಮನೆಗೆ ಹೋಗುವುದು ಪೋಷಕರಿಗೆ ಖುಷಿಯಾಗುವುದು. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಬೇಕಾದ ದಿನ. ಕೆಲಸದ ಸ್ಥಳದಲ್ಲಿ ತೊಂದರೆ ಎದುರಾಗಬಹುದು. ಮನೆಗೆ ದೂರದ ಬಂಧುಗಳು ಭೇಟಿ ನೀಡಬಹುದು, ಈ ವೇಳೆ ಖರ್ಚು ಕೂಡ ಅಧಿಕವಾಗಬಹುದು. ಹಣದ ವ್ಯವಹಾರಗಳಲ್ಲಿ ಇತರರ ಸಲಹೆ ತೆಗೆದುಕೊಳ್ಳಿ. ಸಂಗಾತಿಯ ಮಾತಿನಿಂದ ಉದ್ವೇಗಕ್ಕೆ ಒಳಗಾಗುವಿರಿ. ಮನೋರಂಜನೆಯ ಅವಧಿಯಲ್ಲಿ ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಅಪಘಾತಗಳು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು.

ಮೀನ ರಾಶಿ: ವಾಹನ ಸಂಚಾರದಲ್ಲಿ ವ್ಯತ್ಯಾಸ. ನೀವು ಹೋಗಬೇಕಾದ ಸ್ಥಳಕ್ಕೆ ವಿಳಂಬವಾಗಿ ಪ್ರವೇಶ ಮಾಡುವಿರಿ. ಇಂದು ನೀವು ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನಕ್ಕೆ ಮೆಚ್ಚುಗೆ ಸಿಗಲಿದೆ. ಹಣವನ್ನು ಉಳಿಸಲು ಯತ್ನದಲ್ಲಿ ಸೋಲಾಗುವುದು. ಬಹುಕಾಲದಿಂದ ಬಾಕಿಯಾಗಿದ್ದ ಕೆಲಸಗಳು ಪೂರ್ತಿಯಾಗುವ ಸಾಧ್ಯತೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬದಲ್ಲಿ ಹರ್ಷಮಯ ವಾತಾವರಣ ಉಂಟಾಗುತ್ತದೆ. ಒಂದು ಶುಭ ಸಂದೇಶ ನಿಮಗೆ ತಲುಪಬಹುದು. ಹಣಕಾಸು ಮಟ್ಟದಲ್ಲಿ ಏಳಿಗೆ ಕಾಣುತ್ತೀರಿ. ಇಂದು ನಿಮ್ಮ ಉಳಿತಾಯದ ಹಣವು ಯಾವುದೋ ಕಾರಣಾಂತರಗಳಿಂದ ಖಾಲಿಯಾಗಬಹುದು. ಆದಾಯ ವೃದ್ಧಿಗೊಳಿಸಲು ಕಾನೂನಿಗೆ ವಿರುದ್ಧವಾದ ಕಾರ್ಯಗಳ‌ ಕಡೆ ಗಮನವಿರುವುದು. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಿಸಬಹುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)

ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ