ಅಮೆರಿಕ ತಲುಪಿದ ಪ್ರಧಾನಿ ಮೋದಿ, ಕ್ವಾಡ್ ಶೃಂಗಸಭೆಯಲ್ಲಿ ಭಾಗಿ

|

Updated on: Sep 21, 2024 | 9:56 AM

ಪ್ರಧಾನಿ ಮೋದಿ ಅವರು ಇಂದು ಅಮೆರಿಕಕ್ಕೆ ತೆರಳಿದ್ದು, ನಾಲ್ಕನೇ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಗೂ ಸೆಪ್ಟೆಂಬರ್ 23ರಂದು ನ್ಯೂಯಾರ್ಕ್​​​​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ತವರೂರು ವಿಲ್ಮಿಂಗ್ಟನ್‌ನಲ್ಲಿ ಕ್ವಾಡ್ ಶೃಂಗಸಭೆ ಸಭೆಯನ್ನು ಆಯೋಜಿಸಲಾಗಿದೆ.

ಅಮೆರಿಕ ತಲುಪಿದ ಪ್ರಧಾನಿ ಮೋದಿ, ಕ್ವಾಡ್ ಶೃಂಗಸಭೆಯಲ್ಲಿ ಭಾಗಿ
ಅಮೆರಿಕ ತಲುಪಿದ ಪ್ರಧಾನಿ ಮೋದಿ
Follow us on

ಪ್ರಧಾನಿ ಮೋದಿ ಅವರು ಇಂದಿನಿಂದ (ಸೆ.21) ಅಮೆರಿಕ ಪ್ರವಾಸದಲ್ಲಿದ್ದಾರೆ. ಇಂದು ಅಮೆರಿಕಕ್ಕೆ ತೆರಳಿದ್ದು, ನಾಲ್ಕನೇ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಗೂ ಸೆಪ್ಟೆಂಬರ್ 23ರಂದು ನ್ಯೂಯಾರ್ಕ್​​​​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ತವರೂರು ವಿಲ್ಮಿಂಗ್ಟನ್‌ನಲ್ಲಿ ಕ್ವಾಡ್ ಶೃಂಗಸಭೆ ಸಭೆಯನ್ನು ಆಯೋಜಿಸಲಾಗಿದೆ. ಕ್ವಾಡ್ ಶೃಂಗಸಭೆಯಲ್ಲಿ ನನ್ನ ಸ್ನೇಹಿತರಾದ ಅಧ್ಯಕ್ಷ ಬೈಡನ್, ಪ್ರಧಾನಿ ಅಲ್ಬನೀಸ್ ಮತ್ತು ಪ್ರಧಾನಿ ಕಿಶಿದಾ ಅವರನ್ನು ನಾನು ಎದುರು ನೋಡುತ್ತಿದ್ದಾನೆ ಎಂದು ಮೋದಿ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವೇದಿಕೆಯು ಶಾಂತಿಯನ್ನು ಉತ್ತೇಜಿಸುವ ಸಮಾನ ಮನಸ್ಕ ರಾಷ್ಟ್ರಗಳ ವೇದಿಕೆಯಾಗಲಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಗತಿ, ಮತ್ತು ಸಮೃದ್ಧಿ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜತೆ ಎರಡೂ ರಾಷ್ಟ್ರಗಳ ಮತ್ತು ಜಾಗತಿಕ ಹಿತಾಸಕ್ತಿಗಳ ಸುಧಾರಣೆಗಾಗಿ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಕ್ವಾಡ್ ಶೃಂಗಸಭೆಯನ್ನು ಚತುರ್ಭುಜ ಭದ್ರತಾ ಸಂವಾದ ಎಂದು ಕರೆಯಲಾಗುತ್ತದೆ. ಭಾರತ, ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಅವರ ಈ ಭೇಟಿಯಲ್ಲಿ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ. ಭಾರತೀಯ ಡಯಾಸ್ಪೊರಾ ಮತ್ತು ಪ್ರಮುಖ ಅಮೆರಿಕನ್ ಉದ್ಯಮಿಗಳ ಜತೆಗೆ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಕ್ವಾಡ್ ಶೃಂಗಸಭೆಯು ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು, ಕಡಲ ಭದ್ರತೆ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ವಿಚಾರಗಳು ಸೇರಿದಂತೆ ಹಲವಾರು ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.

ಇದರ ಇನ್ನು ಮಹತ್ವದ ವಿಚಾರವೆಂದರೆ ಮುಂದಿನ ಕ್ವಾಡ್ ಶೃಂಗಸಭೆಯನ್ನು ಭಾರತದಲ್ಲಿ ನಡೆಸುವ ಬಗ್ಗೆಯೂ ಚಿಂತನೆ ನಡೆಯಲಿದೆ. ಶೃಂಗಸಭೆಯ ಜೊತೆಗೆ, ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಭಾಗವಹಿಸಲಿದ್ದಾರೆ. ಇದು ಹಲವಾರು ಜಾಗತಿಕ ನಾಯಕರನ್ನು ಒಟ್ಟುಗೂಡಿಸುತ್ತದೆ. ಇನ್ನು ಸೆಪ್ಟೆಂಬರ್ 22 ರಂದು ಮೋದಿ ಅವರು, ಅಮೆರಿಕದಲ್ಲಿರುವ ಭಾರತೀಯರನ್ನು ಉದ್ದೇಶಿ ಮಾತನಾಡಲಿದ್ದಾರೆ. ಇದರ ಜತೆಗೆ ತಮ್ಮ ಈ ಪ್ರವಾಸದಲ್ಲಿ ಯುಎಸ್ ಕಂಪನಿಗಳ ಸಿಇಒಗಳೊಂದಿಗೆ ಚರ್ಚಿಸಲಿದ್ದಾರೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು ಮತ್ತು ಜೈವಿಕ ತಂತ್ರಜ್ಞಾನದಂತಹ ಅತ್ಯಾಧುನಿಕ ವಲಯಗಳಲ್ಲಿ ಸಹಯೋಗವನ್ನು ಹೆಚ್ಚಿಸುವ ಗುರಿಯ ಬಗ್ಗೆ ಹೆಚ್ಚು ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪ್ರಧಾನಿ ಮೋದಿ

ಇನ್ನು ಅಮೆರಿಕದಲ್ಲಿ ರಾಜಕೀಯ ಬೆಳವಣಿಗಳು ನಡೆಯುತ್ತಿದೆ. ಇದೇ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಮೋದಿ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ನವೆಂಬರ್ 5 ರಂದು ಯುಎಸ್ ಚುನಾವಣೆಗಳು ನಿಗದಿಯಾಗಿದ್ದು, ಈಗಾಗಲೇ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಭರದಿಂದ ಪ್ರಚಾರ ನಡೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​​ ಮಾಡಿ

Published On - 9:53 am, Sat, 21 September 24