ಫೆ.14ಕ್ಕೆ ಪ್ರಧಾನಿ ಮೋದಿ ಕತಾರ್​​ಗೆ ಭೇಟಿ: 8 ಭಾರತೀಯರ ಬಿಡುಗಡೆಯಲ್ಲಿ ಮೋದಿ ಪಾತ್ರ ಮಹತ್ವದ್ದು

|

Updated on: Feb 12, 2024 | 5:29 PM

Narendra Modi: ಪ್ರಧಾನಿ ಮೋದಿ ಅವರು ಫೆ. 14ರಂದು ಕತಾರ್​​ಗೆ ಭೇಟಿ ನೀಡಲಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಹೇಳಿದ್ದಾರೆ. ಅಲ್ಲಿ ಮೋದಿ ಅವರು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಹಾಗೂ ರಾಜತಾಂತ್ರಿಕ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಇದರ ಜತೆಗೆ ಬೇಹುಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕತಾರ್​​​ ನ್ಯಾಯಲಯವು ಮರಣದಂಡನೆ ಶಿಕ್ಷೆಯನ್ನು ನೀಡಿತ್ತು. ಆದರೆ ಇದನ್ನು ಕಡಿತಗೊಳಿಸಿ ಅವರ ಪ್ರಕರಣವನ್ನು ವಜಾ ಮಾಡಿದೆ. ಇಂದು ಬೆಳಿಗ್ಗೆ 7 ಜನ ಮಾಜಿ ಅಧಿಕಾರಿಗಳು ಭಾರತಕ್ಕೆ ಬಂದಿದ್ದಾರೆ. ಇದು ಮೋದಿ ಮಾತುಕತೆಯಿಂದ ಸಾಧ್ಯವಾಗಿದೆ.

ಫೆ.14ಕ್ಕೆ ಪ್ರಧಾನಿ ಮೋದಿ ಕತಾರ್​​ಗೆ ಭೇಟಿ: 8 ಭಾರತೀಯರ ಬಿಡುಗಡೆಯಲ್ಲಿ ಮೋದಿ ಪಾತ್ರ ಮಹತ್ವದ್ದು
ಸಾಂದರ್ಭಿಕ ಚಿತ್ರ
Follow us on

ದೆಹಲಿ, ಫೆ.12: ಬೇಹುಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ 8 ಮಂದಿ ಭಾರತೀಯ ನೌಕಾಪಡೆ(Indian Navy)ಯ ಮಾಜಿ ಅಧಿಕಾರಿಗಳು ಕತಾರ್​ನಿಂದ ಭಾರತಕ್ಕೆ ಮರಳಿದ್ದಾರೆ. ಇದೀಗ ಪ್ರಧಾನಿ ನರೇಂದ್ರ  ಮೋದಿ (Narendra Modi) ಅವರು ಬುಧವಾರ (ಫೆ.14) ಯುಎಇ ಪ್ರವಾಸ ಮುಗಿದ ಬಳಿಕ ಕತಾರ್‌ನ ದೋಹಾಕ್ಕೆ ತೆರಳಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಇಂದು ತಿಳಿಸಿದ್ದಾರೆ. ಮೋದಿ ಅವರು ಈ ಭೇಟಿ ಉಭಯ ದೇಶಗಳ ಒಟ್ಟಾರೆ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಹಾಗೂ ಅನೇಕ ರಾಜತಾಂತ್ರಿಕ ಮಾತುಕತೆ ನಡೆಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕತಾರ್​​​​ನಲ್ಲಿ ಜೈಲು ಪಾಲಾಗಿದ್ದ 8 ಮಂದಿಯ ಗಲ್ಲುಶಿಕ್ಷೆಯನ್ನು ವಜಾ ಮಾಡಿ ಅವರನ್ನು ಕತಾರ್​​​​ ನ್ಯಾಯಲಯ ಬಿಡುಗಡೆಗೆ ಆದೇಶ ನೀಡಿತ್ತು. ಇದೀಗ ಇಂದು ಕತಾರ್​​​ನಿಂದ ಭಾರತಕ್ಕೆ ಬಂದಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆ ಇಲ್ಲದೆ ಅವರ ಬಿಡುಗಡೆ ಸಾಧ್ಯವಿಲ್ಲ ಎಂದು ಭಾರತಕ್ಕೆ ಮರಳಿದ ಮಾಜಿ ನೌಕಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಈ 8 ಜನರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಮೇಲಿರುವ ಪ್ರಕರಣದ ನಿರ್ವಹಣೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ. ಭಾರತದ 8.4 ಲಕ್ಷಕ್ಕೂ ಹೆಚ್ಚು ಜನ ಕತಾರ್​​ನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಹಾಗೂ ಎರಡು ದೇಶಗಳು ಗಾಢವಾದ ಸ್ನೇಹವನ್ನು ಹೊಂದಿದೆ, ಇದನ್ನು ಮತ್ತಷ್ಟು ಬಲಪಡಿಸಲು ಅಲ್ಲಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕತಾರ್​ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳ ಬಿಡುಗಡೆ

ಕಮಾಂಡರ್ ತಿವಾರಿ ಶೀಘ್ರದಲ್ಲೇ ಭಾರತಕ್ಕೆ

ಇಂದು 8 ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಪೈಕಿ 7 ಜನ ಮಾತ್ರ ಭಾರತಕ್ಕೆ ಬಂದಿದ್ದಾರೆ. ಕಮಾಂಡರ್ ತಿವಾರಿ ಅವರು ದೋಹಾದಲ್ಲಿಯೇ ಉಳಿದುಕೊಂಡಿದ್ದು ಶೀಘ್ರದಲ್ಲೇ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಪಿಟಿಐ ಹೇಳಿದೆ. ಕತಾರ್​​​ನ ಈ ನಿರ್ಧಾರಕ್ಕೆ ಭಾರತ ಪ್ರಶಂಸೆ ವ್ಯಕ್ತಪಡಿಸಿದೆ.

ಪ್ರಧಾನಿ ಮೋದಿ ಮಾತುಕತೆ ಯಶಸ್ವಿ

ಅಕ್ಟೋಬರ್ 26 ರಂದು, ನೌಕಾಪಡೆಯ ಯೋಧರಿಗೆ ಕತಾರ್‌ನ ಪ್ರಥಮ ನಿದರ್ಶನ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಡಿಸೆಂಬರ್ 28 ರಂದು, ಗಲ್ಫ್ ರಾಷ್ಟ್ರದ ಮೇಲ್ಮನವಿಗೆ ನ್ಯಾಯಾಲಯವು ಮರಣದಂಡನೆಯನ್ನು ಕಡಿಮೆಗೊಳಿಸಿತು ಮತ್ತು ಅವರಿಗೆ ಮೂರರಿಂದ 25 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ, ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು ಮತ್ತು ಕತಾರ್‌ನಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮದ ಬಗ್ಗೆ ಚರ್ಚಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭಾರತೀಯರ ಬಿಡುಗಡೆಗೆ ಕತಾರ್ ಅಧಿಕಾರಿಗಳೊಂದಿಗಿನ ಮಾತುಕತೆ ನಡೆಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:29 pm, Mon, 12 February 24