Video: ಕಾನ್ಪುರದಲ್ಲಿ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ; ಟಿಕೆಟ್ ಪಡೆದು ಸಿಎಂ ಯೋಗಿ ಜತೆ ರೈಲಿನಲ್ಲಿ 10 ನಿಮಿಷ ಪ್ರಯಾಣ
ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರುವುದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಐಐಟಿ ಕಾನ್ಪುರ ಯೂನಿವರ್ಸಿಟಿಯ 54ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡರು. ಅಲ್ಲಿ ಮಾತನಾಡಿ, ಇಂದು ಕಾನ್ಪುರದ ಜನರಿಗೆ ಎರಡು ಸಂತೋಷ ಒಟ್ಟಿಗೇ ಸಿಗುತ್ತಿದೆ ಎಂದು ಹೇಳಿದರು.
ಬರುವ ವರ್ಷ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ (Uttar Pradesh Assembly Election 2022) ಇಂದು ಪ್ರಧಾನಿ ಮೋದಿ (PM Narendra Modi) ಮತ್ತೊಮ್ಮೆ ಭೇಟಿ ನೀಡಿದ್ದಾರೆ. ಅವರಿಂದ ಕಾನ್ಪುರದಲ್ಲಿ ಮೆಟ್ರೋ ರೈಲು (Kanpur Metro Rail Project) ಯೋಜನೆಯಡಿ ಪೂರ್ಣಗೊಂಡ ವಿಭಾಗವನ್ನು ಉದ್ಘಾಟಿಸಿದ್ದಾರೆ. ಇದು 11 ಸಾವಿರ ಕೋಟಿ ರೂಪಾಯಿ ವೆಚ್ಚದ 32 ಕಿಮೀ ಉದ್ದದ ಮೆಟ್ರೋ ಮಾರ್ಗ ಯೋಜನೆ. ಸದ್ಯ 9 ಕಿಮೀ ಮಾರ್ಗ ಕಾಮಗಾರಿ ಸಂಪೂರ್ಣಗೊಂಡಿದ್ದು, ಅದನ್ನಿಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಅದಾದ ನಂತರ ಐಐಟಿ ಕಾನ್ಪುರ ಮೆಟ್ರೋ ಸ್ಟೇಶನ್ನಿಂದ ಗೀತಾ ನಗರದವರೆಗೆ ಮೆಟ್ರೋ ರೈಲಿನಲ್ಲಿ 10 ನಿಮಿಷಗಳ ಕಾಲ ಪ್ರಯಾಣ ಮಾಡಿದ್ದಾರೆ. ಈ ಪ್ರಯಾಣಕ್ಕಾಗಿ ಅವರು ಟಿಕೆಟ್ ಕೂಡ ಖರೀದಿ ಮಾಡಿದ್ದಾರೆ. ಈ ವೇಳೆ ಪ್ರಧಾನಿಯೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಇದ್ದರು.
PM @narendramodi buys a ticket and takes a metro ride#विकास_की_मेट्रो pic.twitter.com/uAbivXJpXK
— DD News (@DDNewslive) December 28, 2021
ಒಂದನೆಯದಾಗಿ ಕಾನ್ಪುರದಲ್ಲಿ ಮೆಟ್ರೋ ರೈಲು ವೈವಸ್ಥೆ ಆಯಿತು. ಇನ್ನೊಂದೆಡೆ ಈ ಕಾನ್ಪುರದ ಐಐಟಿ ವಿಶ್ವವಿದ್ಯಾಲಯ, ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರುವುದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಐಐಟಿ ಕಾನ್ಪುರ ಯೂನಿವರ್ಸಿಟಿಯ 54ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡರು. ಅಲ್ಲಿ ಮಾತನಾಡಿ, ಇಂದು ಕಾನ್ಪುರದ ಜನರಿಗೆ ಎರಡು ಸಂತೋಷ ಒಟ್ಟಿಗೇ ಸಿಗುತ್ತಿದೆ.ತಂತ್ರಜ್ಞಾನ ಪ್ರಪಂಚಕ್ಕೆ ಹಲವು ಉಡುಗೊರೆಗಳನ್ನು ಕೊಡುತ್ತಿದೆ ಎಂದು ಹೇಳಿದರು. ಅಂದರೆ ಇಲ್ಲಿ ಕಲಿತ ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು. ಈ ಹೊತ್ತಲ್ಲಿ ದೇಶ ಟೆಕ್ನಾಲಜಿಯಲ್ಲಿ ಅಭಿವೃದ್ಧಿಹೊಂದುತ್ತಿದೆ. 50 ಸಾವಿರಕ್ಕೂ ಅಧಿಕ ಸ್ಟಾರ್ಟ್ಅಪ್ಗಳನ್ನು ಹೊಂದಿದೆ. ಅದರಲ್ಲಿ ಸುಮಾರು 10 ಸಾವಿರ ಸ್ಟಾರ್ಟ್ ಅಪ್ಗಳು ಕಳೆದ ಆರು ತಿಂಗಳಲ್ಲಿ ಶುರುವಾಗಿವೆ ಎಂದು ಮೋದಿಯವರು ಹೇಳಿದರು. ಹಾಗೇ, ಕಾನ್ಪುರ ಐಐಟಿಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಸನ್ಮಾನಿಸಿದರು.
PM @narendramodi felicitated students with degrees at the 54th convocation of IIT Kanpur#विकास_की_मेट्रो pic.twitter.com/V2SMWALCgc
— DD News (@DDNewslive) December 28, 2021