ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಕಾಶಿ ವಿಶ್ವನಾಥ ಕಾರಿಡಾರ್ (Kashi Vishwanath corridor) ಉದ್ಘಾಟನೆ ಮಾಡಿದ್ದಾರೆ. ಎರಡು ದಿನಗಳ ಭೇಟಿಗಾಗಿ ಸೋಮವಾರ ಬೆಳಗ್ಗೆ ವಾರಣಾಸಿಗೆ ಆಗಮಿಸಿದ ಮೋದಿಯವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ(Yogi Adityanath) ಅವರನ್ನು ಬರಮಾಡಿಕೊಂಡರು. ಲಲಿತಾ ಘಾಟ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯು ಕಾಶಿ ವಿಶ್ವನಾಥ ದೇವಾಲಯವನ್ನು ವಾರಣಾಸಿಯ ಗಂಗಾ ನದಿಯ ದಡಕ್ಕೆ ಸಂಪರ್ಕಿಸುತ್ತದೆ. ಯೋಜನೆಯ ಹಂತ -1 ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರಗಳು, ವೇದಿಕ್ ಕೇಂದ್ರಗಳು ಸೇರಿದಂತೆ ಯಾತ್ರಾರ್ಥಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.ವಾರಣಾಸಿ (Varanasi)ಮೋದಿಯವರ ಲೋಕಸಭಾ ಕ್ಷೇತ್ರವೂ ಹೌದು. ಟೆಂಪಲ್ ಸಿಟಿಯ ರೂ 339-ಕೋಟಿ ಯೋಜನೆಗೆ ಮಾರ್ಚ್ 8, 2019 ರಂದು ಮೋದಿ ಅವರು ಅಡಿಪಾಯ ಹಾಕಿದರು. ಕೊವಿಡ್ ಸಾಂಕ್ರಾಮಿಕದ ನಡುವೆಯೂ ಯೋಜಿಸಿದಂತೆ ಮೂರು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿದೆ. ಗಂಗಾನದಿಯಲ್ಲಿ ಸ್ನಾನ ಮಾಡಲು ಮತ್ತು ದೇವಾಲಯದಲ್ಲಿ ಪವಿತ್ರ ನದಿಯ ನೀರನ್ನು ಅರ್ಪಿಸಲು ದಟ್ಟಣೆಯ ಬೀದಿಗಳಲ್ಲಿ ಸುತ್ತಾಡಬೇಕಾದ ಯಾತ್ರಾರ್ಥಿಗಳಿಗೆ ಸುಲಭವಾಗಿ ಪ್ರವೇಶಿಸಬಹುದಾದ ಮಾರ್ಗವನ್ನು ರಚಿಸಲು ಕಾರಿಡಾರ್ ಯೋಜನೆಯನ್ನು ಕಲ್ಪಿಸಲಾಗಿದೆ.
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಹರ್ ಮಹಾದೇವ್’ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು.
100 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ವಾರಣಾಸಿಗೆ ಬಂದಾಗ ಕಿರಿದಾದ ರಸ್ತೆಗಳು ಮತ್ತು ಹೊಲಸುಗಳನ್ನು ನೋಡಿ ನೋವು ವ್ಯಕ್ತಪಡಿಸಿದ್ದರು. ಗಾಂಧೀಜಿಯವರ ಹೆಸರಿನಲ್ಲಿ ಅನೇಕರು ಅಧಿಕಾರಕ್ಕೆ ಬಂದರು, ಆದರೆ ಅವರ ಭವ್ಯವಾದ ಕಾಶಿಯ ಕನಸು ಇದೇ ಮೊದಲ ಬಾರಿಗೆ ನನಸಾಗಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ವಾರಣಾಸಿಯ ಕಾಶಿ ವಿಶ್ವನಾಥ ದೇಗುಲಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
#WATCH Prime Minister Narendra Modi offers prayers at Kashi Vishwanath temple in Varanasi pic.twitter.com/4pLpNubg2z
— ANI UP (@ANINewsUP) December 13, 2021
Prime Minister Narendra Modi arrives at the Kashi Vishwanath Temple in Varanasi pic.twitter.com/WGCMHgx9gc
— ANI UP (@ANINewsUP) December 13, 2021
#WATCH The Kashi Vishwanath Corridor provides an accessible pathway connecting Shri Kashi Vishwanath Temple to the banks of the River Ganga in Varanasi
(Source: DD) pic.twitter.com/2h35RV91HH
— ANI UP (@ANINewsUP) December 13, 2021
ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಮೋದಿ
PM Narendra Modi takes holy dip in River Ganga at Varanasi pic.twitter.com/yGK9YRTCrO
— ANI UP (@ANINewsUP) December 13, 2021
ಖಿರ್ಕಿಯಾ ಘಾಟ್‌ನಿಂದ ಡಬಲ್ ಡೆಕ್ಕರ್ ದೋಣಿಯಲ್ಲಿ ಪಯಣ
ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಖಿರ್ಕಿಯಾ ಘಾಟ್ ತಲುಪಿ, ಅಲ್ಲಿಂದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಖಿರ್ಕಿಯಾ ಘಾಟ್‌ನಿಂದ ಲಲಿತಾ ಘಾಟ್‌ಗೆ ಡಬಲ್ ಡೆಕ್ಕರ್ ದೋಣಿಯಲ್ಲಿ ಪ್ರಯಾಣಿಸಿದರು.
ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಜನರತ್ತ ಕೈಬೀಸಿದ ಮೋದಿ
ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿಗೆ ತಲುಪಿದಾಗ ಅಲ್ಲಿನ ಜನರು ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಿದರು, ಹೂವಿನ ದಳಗಳನ್ನು ಸುರಿಸಿ, ‘ಮೋದಿ, ಮೋದಿ’ ಮತ್ತು ‘ಹರ್ ಹರ್ ಮಹಾದೇವ್’ ಎಂದು ಘೋಷಣೆಗಳನ್ನು ಕೂಗಿದರು.
#WATCH | People greet Prime Minister Narendra Modi in his parliamentary constituency Varanasi, Uttar Pradesh
(Source: DD) pic.twitter.com/mQkmpdSZ5Z
— ANI UP (@ANINewsUP) December 13, 2021
ಉತ್ತರ ಪ್ರದೇಶದ ವಾರಣಾಸಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಲಭೈರವ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅವರ ಜೊತೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಕೂಡ ಇದ್ದರು.
#WATCH Prime Minister Narendra Modi offers prayers at Kaal Bhairav temple in Varanasi
Later, he will offer prayers at Kashi Vishwanath temple inaugurate phase 1 of Kashi Vishwanath Corridor
(Source: DD) pic.twitter.com/ZmO1AG08uC
— ANI UP (@ANINewsUP) December 13, 2021
ಮೋದಿಯವರ ಕನಸಿನ ಯೋಜನೆ ಎಂದು ಕರೆಯಲ್ಪಡುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು 5,000 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮೂರು ಕಡೆ ಕಟ್ಟಡಗಳಿಂದ ಆವೃತವಾಗಿದ್ದ ದೇವಾಲಯದ ಸಂಕೀರ್ಣ ಇದಾಗಿದೆ “ದೇವಸ್ಥಾನವನ್ನು ಡಿಸೆಂಬರ್ 13 ರಂದು ಶುಭ ಮುಹೂರ್ತದಲ್ಲಿ ಉದ್ಘಾಟಿಸಲಾಗುವುದು” ಎಂದು ಕಾಶಿ ವಿಶ್ವನಾಥ ದೇವಾಲಯದ ಅರ್ಚಕ ನಾಗೇಂದ್ರ ಪಾಂಡೆ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಾರ್ಚ್ 2019 ರಲ್ಲಿ ಪಿಎಂ ಮೋದಿ ಅವರು ಕಾರಿಡಾರ್‌ಗೆ ಅಡಿಪಾಯ ಹಾಕಿದಾಗಿನಿಂದ, ಯೋಜನೆಗೆ ಜಾಗವನ್ನು ರಚಿಸಲು 300 ಕ್ಕೂ ಹೆಚ್ಚು ಕಟ್ಟಡಗಳನ್ನು ಖರೀದಿಸಿ ಕೆಡವಲಾಗಿದೆ. ಅಸ್ತಿತ್ವದಲ್ಲಿರುವ ಪಾರಂಪರಿಕ ರಚನೆಗಳನ್ನು ಸಂರಕ್ಷಿಸುವುದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ದೇವಾಲಯ ಸಂಕೀರ್ಣದಲ್ಲಿ ಹೊಸ ಸೌಲಭ್ಯಗಳನ್ನು ಒದಗಿಸುವುದು, ದೇವಾಲಯದ ಸುತ್ತಲಿನ ಜನರ ಸಂಚಾರ ಮತ್ತು ಸಂಚಾರವನ್ನು ಸುಗಮಗೊಳಿಸುವುದು ಮತ್ತು ದೇವಾಲಯವನ್ನು ನೇರ ಗೋಚರತೆಯೊಂದಿಗೆ ಘಾಟ್‌ಗಳೊಂದಿಗೆ ಸಂಪರ್ಕಿಸುವ ಆಲೋಚನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂರಾರು ಸಣ್ಣ ದೇವಾಲಯಗಳನ್ನು ಕಾರಿಡಾರ್‌ನ ಭಾಗವಾಗಿ ಮಾಡಲಾಗಿದೆ.
ಟೆಂಪಲ್ ಚೌಕ್, ವಾರಣಾಸಿ ಸಿಟಿ ಗ್ಯಾಲರಿ, ಮ್ಯೂಸಿಯಂ, ವಿವಿಧೋದ್ದೇಶ ಸಭಾಂಗಣಗಳು, ಸಭಾಂಗಣ, ಭಕ್ತರ ಅನುಕೂಲ ಕೇಂದ್ರ, ಸಾರ್ವಜನಿಕ ಅನುಕೂಲತೆ, ಮೋಕ್ಷ ಗೃಹ, ಗೋಡೋಲಿಯಾ ಗೇಟ್, ಭೋಗಶಾಲಾ, ಪುರೋಹಿತರು ಮತ್ತು ಸೇವಾದಾರರಿಗೆ ಆಶ್ರಯ, ಆಧ್ಯಾತ್ಮಿಕ ಪುಸ್ತಕ ಸ್ಥಳ ಮತ್ತು ಇತರ ಕೆಲಸಗಳನ್ನು ಒಳಗೊಂಡಿದೆ ಎಂದು ಪಟೇಲ್ ಹೇಳಿದರು. ಯೋಜನೆಯ 5.50 ಲಕ್ಷ ಚದರ ಅಡಿ ಪ್ರದೇಶದಲ್ಲಿ ಸುಮಾರು 70 ಪ್ರತಿಶತವನ್ನು ಹಸಿರು ಹೊದಿಕೆಗೆ ಮುಕ್ತವಾಗಿ ಇಡಲಾಗುವುದು ಎಂದು ದೆಹಲಿಯ ಪ್ರಸ್ತಾವಿತ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಹಿಂದೆ ಇರುವ ವಾಸ್ತುಶಿಲ್ಪಿ ಹೇಳಿದ್ದಾರೆ.
ಕಾರಿಡಾರ್‌ನ ಭಾಗದಲ್ಲಿ 10,000 ಜನರು ಧ್ಯಾನ ಮಾಡಬಹುದಾದ 7,000 ಚದರ ಮೀಟರ್ ವೇದಿಕೆ, ಏಳು ಭವ್ಯ ಪ್ರವೇಶ ದ್ವಾರಗಳು, ಕೆಫೆಟೇರಿಯಾ, ಫುಡ್ ಕೋರ್ಟ್, ವೈದಿಕ ಮತ್ತು ಆಧ್ಯಾತ್ಮಿಕ ಗ್ರಂಥಾಲಯ, ವರ್ಚುವಲ್ ಗ್ಯಾಲರಿ, ಪ್ರವಾಸಿ ಕೇಂದ್ರ, ಭದ್ರತಾ ಸಭಾಂಗಣ, ಬಹುಪಯೋಗಿ ಸಭಾಂಗಣವಿದೆ. ಕಾರಿಡಾರ್ ಉದ್ದಕ್ಕೂ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.
ಇದನ್ನೂ ಓದಿ: Kashi Vishwanath Corridor: ವಿಶ್ವ ಖ್ಯಾತ ಪ್ರವಾಸಿ ತಾಣ ಕಾಶಿ ಈಗ ಮತ್ತಷ್ಟು ಹೈಟೆಕ್; ಏನಿದರ ವಿನ್ಯಾಸ – ವಿಶೇಷತೆ?
Published On - 1:57 pm, Mon, 13 December 21