ದೆಹಲಿ: ಜಮ್ಮು ಏರ್ಫೋರ್ಸ್ ಸ್ಟೇಶನ್ನಲ್ಲಿ ಅವಳಿ ಸ್ಫೋಟ, ಮೂರುದಿನಗಳಿಂದಲೂ ಹಾರಾಡುತ್ತಿರುವ ಡ್ರೋನ್ಗಳು..ಹೀಗೆ ಜಮ್ಮುವಿನಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಂದು ಸಂಜೆ 4 ಗಂಟೆಯಿಂದ ಸಭೆ ನಡೆದಿದ್ದು, ಡ್ರೋನ್ ಮೂಲಕ ಐಇಡಿ ದಾಳಿ ಮಾಡಿದ್ದು, ಜಮ್ಮುವಿನಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿನ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿವೆ. ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಪಟ್ಟು ಹಿಡಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಸಲು ಸಜ್ಜಾಗಿದೆ. ಅದರ ಸಂಬಂಧ ಚರ್ಚಿಸಲು ಜೂ.24ರಂದು ಪ್ರಧಾನಿ ಮೋದಿ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದರು. ಈ ಸಭೆ ಗುರುವಾರ ನಡೆದಿತ್ತು. ಭಾನುವಾರ ಮಧ್ಯರಾತ್ರಿಯಿಂದ ಉಗ್ರರ ಹಾವಳಿ ಹೆಚ್ಚಾಗಿದೆ. ಅಂದರೆ ಭಾರತ ಜಮ್ಮು-ಕಾಶ್ಮೀರದಲ್ಲಿ ತುಸುವೇ ಹೆಜ್ಜೆ ಮುಂದಿಟ್ಟರೂ, ಮತ್ತೆ ಶಾಂತಿಕದಡಲು ದುಷ್ಕರ್ಮಿಗಳು ಮುಂದಾಗುತ್ತಾರೆ.
ಭಾನುವಾರ ತಡರಾತ್ರಿ ಜಮ್ಮು ಏರ್ಫೋರ್ಸ್ ಸ್ಟೇಶನ್ನಲ್ಲಿ ಅವಳಿ ಸ್ಫೋಟ ಉಂಟಾಗಿತ್ತು. ಅದಾದ ಮೇಲೆ ಒಂದರ ಬೆನ್ನಿಗೆ ಒಂದರಂತೆ ಮೂರು ಡ್ರೋನ್ಗಳು ಹಾರಾಟ ನಡೆಸಿದ್ದವು. ಜಮ್ಮುವಿನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರನ್ನು ಮನೆಗೇ ನುಗ್ಗಿ ಉಗ್ರರು ಹತ್ಯೆಗೈದಿದ್ದಾರೆ. ಕೊವಿಡ್ 19 ಸಾಂಕ್ರಾಮಿಕ ಶುರುವಾದ ನಂತರ ತುಸು ಕಡಿಮೆಯಾಗಿದ್ದ ಉಗ್ರರ ಹೀನಕೃತ್ಯಗಳು, ಒಳನುಸುಳುವಿಕೆ ಇದೀಗ ಮತ್ತೆ ಶುರುವಾಗಿದೆ. ಹಾಗಾಗಿ ಮೋದಿಯವರು ಭದ್ರತೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಉನ್ನತ ಸಭೆ ಕರೆದಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರಿಂದ ಕಾರಿನ ಮೇಲೆ ದಾಳಿ, ನಿರ್ಮಾಣ ಹಂತದಲ್ಲಿರುವ ಶಾಲೆ ಮೇಲೆ ಧ್ವಂಸ: ಮನೀಶ್ ಸಿಸೋಡಿಯಾ ಆರೋಪ
(Prime Minister Narendra Modi Meets Amit Shah, Rajnath Singh and Ajit Doval to discuss about Jammu)