ಬಿಜೆಪಿ ನಾಯಕರಿಂದ ಕಾರಿನ ಮೇಲೆ ದಾಳಿ, ನಿರ್ಮಾಣ ಹಂತದಲ್ಲಿರುವ ಶಾಲೆ ಮೇಲೆ ಧ್ವಂಸ: ಮನೀಶ್ ಸಿಸೋಡಿಯಾ ಆರೋಪ

Manish Sisodia: ಇಂದು ರೋಹ್ತಾಸ್ ನಗರದಲ್ಲಿ ಶಾಲೆಯ ನಿರ್ಮಾಣದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಜೆಪಿ ನಾಯಕರು ಮತ್ತು ಗೂಂಡಾಗಳು ಕಟ್ಟಡವನ್ನು ಧ್ವಂಸ ಮಾಡಿದರು. ಅವರು ನನ್ನ ಸರ್ಕಾರಿ ಕಾರಿಗೆ ಡಿಕ್ಕಿ ಹೊಡೆದರು.ಶಾಲೆಯ ಗೇಟ್ ಮುರಿದರು ಮತ್ತು ಶಿಕ್ಷಕಿಯರು ಎಂಜಿನಿಯರ್‌ಗಳು ಮತ್ತು ನಿರ್ಮಾಣ ಕಾರ್ಮಿಕರೊಂದಿಗೆ ಕೆಟ್ಟದಾಗಿ ವರ್ತಿಸಿದರು.

ಬಿಜೆಪಿ ನಾಯಕರಿಂದ ಕಾರಿನ ಮೇಲೆ ದಾಳಿ, ನಿರ್ಮಾಣ ಹಂತದಲ್ಲಿರುವ ಶಾಲೆ ಮೇಲೆ ಧ್ವಂಸ: ಮನೀಶ್ ಸಿಸೋಡಿಯಾ ಆರೋಪ
ಮನೀಶ್ ಸಿಸೋಡಿಯಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 29, 2021 | 4:11 PM

ದೆಹಲಿ: ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್ ಅವರೊಂದಿಗೆ ಪರಿಶೀಲನೆ ನಡೆಸುತ್ತಿದ್ದಾಗ ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡವನ್ನು ಬಿಜೆಪಿ ನಾಯಕರು ಮತ್ತು ಕೆಲವು “ಗೂಂಡಾಗಳು” ಧ್ವಂಸ ಮಾಡಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ಆರೋಪಿಸಿದ್ದಾರೆ. “ಇಂದು ರೋಹ್ತಾಸ್ ನಗರದಲ್ಲಿ ಶಾಲೆಯ ನಿರ್ಮಾಣದ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಜೆಪಿ ನಾಯಕರು ಮತ್ತು ಗೂಂಡಾಗಳು ಕಟ್ಟಡವನ್ನು ಧ್ವಂಸ ಮಾಡಿದರು. ಅವರು ನನ್ನ ಸರ್ಕಾರಿ ಕಾರಿಗೆ ಡಿಕ್ಕಿ ಹೊಡೆದರು.ಶಾಲೆಯ ಗೇಟ್ ಮುರಿದರು ಮತ್ತು ಶಿಕ್ಷಕಿಯರು ಎಂಜಿನಿಯರ್‌ಗಳು ಮತ್ತು ನಿರ್ಮಾಣ ಕಾರ್ಮಿಕರೊಂದಿಗೆ ಕೆಟ್ಟದಾಗಿ ವರ್ತಿಸಿದರು. ಶಾಲೆಗಳ ನಿರ್ಮಾಣ ಮತ್ತು ಕಲಿಕೆಯನ್ನು ಬಿಜೆಪಿ ಕಾರ್ಯಕರ್ತರು ಯಾಕೆ ವಿರೋಧಿಸುತ್ತಿದ್ದಾರೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಆದರೆ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ಡಿಸಿಪಿ (ಶಹದಾರಾ) ಆರ್ ಸತ್ಯಸುಂದರಂ ಹೇಳಿದ್ದಾರೆ. “ಅವರು ಪ್ರತಿಭಟಿಸುತ್ತಿದ್ದರು ಮತ್ತು ಕಪ್ಪು ಧ್ವಜಗಳನ್ನು ತೋರಿಸುತ್ತಿದ್ದರು, ಆದರೆ ಯಾವುದೇ ಹಿಂಸಾಚಾರ ಇರಲಿಲ್ಲ. ನಾವು ಸರಿಯಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದೇವೆ ”ಎಂದು ಅವರು ಹೇಳಿರುವುದಾಗಿದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್, ಪ್ರತಿಭಟನಾಕಾರರು ಬಿಜೆಪಿ ಕಾರ್ಯಕರ್ತರಲ್ಲ, ಆದರೆ ಶಿಕ್ಷಕರನ್ನು ತಮ್ಮ ಉದ್ಯೋಗದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. “ಸಾವಿರಾರು ಶಿಕ್ಷಕರನ್ನು ಅವರ ವೃತ್ತಿಯಿಂದ ತೆಗೆದುಹಾಕಲಾಗಿದೆ, ಈಗ ಅವರು (ಎಎಪಿ) ಅವರು ಬಿಜೆಪಿ ಕಾರ್ಯಕರ್ತರು ಎಂದು ಹೇಳುತ್ತಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿ, ಶಿಕ್ಷಕರಿಗೆ ಉದ್ಯೋಗ ನಷ್ಟವಾಗಿರುವುದು ವಿಷಾದಕರ ಸಂಗತಿಯಾಗಿದೆ. ಈಗ ಅವರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದರು.

ಸಿಸೋಡಿಯಾ ಮತ್ತು ಜೈನ್ ಕಳೆದ ವಾರದಿಂದ ನಗರದಾದ್ಯಂತ ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡಗಳಿಗೆ ಭೇಟಿ ನೀಡಿ ಕಾರ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಮಂಗಳವಾರ ಇಬ್ಬರೂ ಈಶಾನ್ಯ ದೆಹಲಿಯ ಬಾಬರ್ಪುರ, ಕರವಾಲ್ ನಗರ, ರೋಹ್ತಾಸ್ ನಗರ ಮತ್ತು ಗೋಕಲ್ಪುರ ಪ್ರದೇಶಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಬೇಕಿತ್ತು.

ಇದನ್ನೂ ಓದಿ: ಪಂಜಾಬ್​​ನಲ್ಲಿ ಉಚಿತ ವಿದ್ಯುತ್ ಭರವಸೆ, ಎಎಪಿಯಿಂದಲೇ ಮ್ಯಾಜಿಕ್ ಸಾಧ್ಯ: ಅರವಿಂದ್ ಕೇಜ್ರಿವಾಲ್

(Deputy Chief Minister Manish Sisodia alleges that BJP leaders and some goons vandalised an under-construction school )