AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮುವಿನಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ; ಅಜಿತ್​ ದೋವಲ್​, ಅಮಿತ್​ ಶಾ ಜತೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

ಭಾನುವಾರ ತಡರಾತ್ರಿ ಜಮ್ಮು ಏರ್​ಫೋರ್ಸ್​ ಸ್ಟೇಶನ್​​ನಲ್ಲಿ ಅವಳಿ ಸ್ಫೋಟ ಉಂಟಾಗಿತ್ತು. ಅದಾದ ಮೇಲೆ ಒಂದರ ಬೆನ್ನಿಗೆ ಒಂದರಂತೆ ಮೂರು ಡ್ರೋನ್​ಗಳು ಹಾರಾಟ ನಡೆಸಿದ್ದವು.

ಜಮ್ಮುವಿನಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ; ಅಜಿತ್​ ದೋವಲ್​, ಅಮಿತ್​ ಶಾ ಜತೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: Lakshmi Hegde

Updated on: Jun 29, 2021 | 5:40 PM

ದೆಹಲಿ: ಜಮ್ಮು ಏರ್​ಫೋರ್ಸ್​ ಸ್ಟೇಶನ್​ನಲ್ಲಿ ಅವಳಿ ಸ್ಫೋಟ, ಮೂರುದಿನಗಳಿಂದಲೂ ಹಾರಾಡುತ್ತಿರುವ ಡ್ರೋನ್​​ಗಳು..ಹೀಗೆ ಜಮ್ಮುವಿನಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಂದು ಸಂಜೆ 4 ಗಂಟೆಯಿಂದ ಸಭೆ ನಡೆದಿದ್ದು, ಡ್ರೋನ್​ ಮೂಲಕ ಐಇಡಿ ದಾಳಿ ಮಾಡಿದ್ದು, ಜಮ್ಮುವಿನಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿನ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿವೆ. ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ಪಟ್ಟು ಹಿಡಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಸಲು ಸಜ್ಜಾಗಿದೆ. ಅದರ ಸಂಬಂಧ ಚರ್ಚಿಸಲು ಜೂ.24ರಂದು ಪ್ರಧಾನಿ ಮೋದಿ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದರು. ಈ ಸಭೆ ಗುರುವಾರ ನಡೆದಿತ್ತು. ಭಾನುವಾರ ಮಧ್ಯರಾತ್ರಿಯಿಂದ ಉಗ್ರರ ಹಾವಳಿ ಹೆಚ್ಚಾಗಿದೆ. ಅಂದರೆ ಭಾರತ ಜಮ್ಮು-ಕಾಶ್ಮೀರದಲ್ಲಿ ತುಸುವೇ ಹೆಜ್ಜೆ ಮುಂದಿಟ್ಟರೂ, ಮತ್ತೆ ಶಾಂತಿಕದಡಲು ದುಷ್ಕರ್ಮಿಗಳು ಮುಂದಾಗುತ್ತಾರೆ.

ಭಾನುವಾರ ತಡರಾತ್ರಿ ಜಮ್ಮು ಏರ್​ಫೋರ್ಸ್​ ಸ್ಟೇಶನ್​​ನಲ್ಲಿ ಅವಳಿ ಸ್ಫೋಟ ಉಂಟಾಗಿತ್ತು. ಅದಾದ ಮೇಲೆ ಒಂದರ ಬೆನ್ನಿಗೆ ಒಂದರಂತೆ ಮೂರು ಡ್ರೋನ್​ಗಳು ಹಾರಾಟ ನಡೆಸಿದ್ದವು. ಜಮ್ಮುವಿನ ಮಾಜಿ ಪೊಲೀಸ್​ ಅಧಿಕಾರಿಯೊಬ್ಬರನ್ನು ಮನೆಗೇ ನುಗ್ಗಿ ಉಗ್ರರು ಹತ್ಯೆಗೈದಿದ್ದಾರೆ. ಕೊವಿಡ್​ 19 ಸಾಂಕ್ರಾಮಿಕ ಶುರುವಾದ ನಂತರ ತುಸು ಕಡಿಮೆಯಾಗಿದ್ದ ಉಗ್ರರ ಹೀನಕೃತ್ಯಗಳು, ಒಳನುಸುಳುವಿಕೆ ಇದೀಗ ಮತ್ತೆ ಶುರುವಾಗಿದೆ. ಹಾಗಾಗಿ ಮೋದಿಯವರು ಭದ್ರತೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಉನ್ನತ ಸಭೆ ಕರೆದಿದ್ದಾರೆ.

ಇದನ್ನೂ ಓದಿ:   ಬಿಜೆಪಿ ನಾಯಕರಿಂದ ಕಾರಿನ ಮೇಲೆ ದಾಳಿ, ನಿರ್ಮಾಣ ಹಂತದಲ್ಲಿರುವ ಶಾಲೆ ಮೇಲೆ ಧ್ವಂಸ: ಮನೀಶ್ ಸಿಸೋಡಿಯಾ ಆರೋಪ

(Prime Minister Narendra Modi Meets Amit Shah, Rajnath Singh and Ajit Doval to discuss about Jammu)

ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ