ದೇಶದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ 51ಕ್ಕೆ ಏರಿಕೆ: ಕೇಂದ್ರ ಸರ್ಕಾರ
Delta Plus Cases: ಡೆಲ್ಟಾ ಪ್ಲಸ್ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಒಂದು ಪ್ರಬೇಧವಾಗಿದ್ದು, ಇದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಕರಣಗಳಲ್ಲಿ ಕೊರೊನಾವೈರಸ್ ಪ್ರಕರಣ ಹೆಚ್ಚಳಕ್ಕೆ ಕಾರಣವಾಯಿತು.
ದೆಹಲಿ: ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳ ಸಂಖ್ಯೆ 50 ಕ್ಕಿಂತ ಹೆಚ್ಚಾಗಿದೆ ಎಂದು ಸರ್ಕಾರ ಮಂಗಳವಾರ ಹೇಳಿದೆ. ವೇಗವಾಗಿ ಹರಡುವ ರೂಪಾಂತರವು ಭಾರತದಲ್ಲಿ ಕಂಡು ಬಂದಿದ್ದು ಇದು ಡೆಲ್ಟಾದ ರೂಪಾಂತರಿತ ಪ್ರಬೇಧವಾಗಿದೆ. ಭಾರತದಲ್ಲಿ ಒಟ್ಟು 51 ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ ಪ್ರಕರಣಗಳ ಬಗ್ಗೆ ಪಂಜಾಬ್ ಸರ್ಕಾರ ಅರಿವು ಮೂಡಿಸಿದೆ ಮತ್ತು ಕೊರೊನಾವೈರಸ್ ನಿರ್ಬಂಧಗಳನ್ನು ಜುಲೈ 10 ರವರೆಗೆ ವಿಸ್ತರಿಸಿದೆ. ಆದಾಗ್ಯೂ, ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಬಾರ್ ಮತ್ತು ಪಬ್‌ಗಳನ್ನು ತೆರೆಯುವಂತೆ ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಿದೆ. ಜುಲೈ 1 ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಹಾರಾಷ್ಟ್ರ ಸರ್ಕಾರವೂ ಮಕ್ಕಳನ್ನು ರಕ್ಷಿಸುವ ಬಗ್ಗೆ ನಿರ್ದಿಷ್ಟ ಗಮನವನ್ನು ಇಟ್ಟುಕೊಂಡು ಕೊರೊನಾವೈರಸ್ ಕಾಯಿಲೆಯ (ಕೊವಿಡ್ -19) ಮೂರನೇ ಅಲೆ ಎದುರಿಸಲು ಸಿದ್ಧತೆ ಆರಂಭಿಸಿದೆ. ದೇಶದಲ್ಲಿ ಅತಿ ಹೆಚ್ಚು ಡೆಲ್ಟಾ ಪ್ಲಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ.
ಡೆಲ್ಟಾ ಪ್ಲಸ್ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಒಂದು ಪ್ರಬೇಧವಾಗಿದ್ದು, ಇದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಕರಣಗಳಲ್ಲಿ ಕೊರೊನಾವೈರಸ್ ಪ್ರಕರಣ ಹೆಚ್ಚಳಕ್ಕೆ ಕಾರಣವಾಯಿತು. ಕೊವಿಡ್ -19 ಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ ಕೆಲವು ಲಸಿಕೆಗಳು ಮತ್ತು ಚಿಕಿತ್ಸೆಗಳಿಗೆ ಈ ರೂಪಾಂತರವು ಹೆಚ್ಚಿನ ಪ್ರತಿರೋಧವನ್ನು ತೋರಿಸುತ್ತದೆ. ಭಾರತ ಈಗಾಗಲೇ ಡೆಲ್ಟಾ ಪ್ಲಸ್ ಅನ್ನು ‘ಕಾಳಜಿಯ ರೂಪಾಂತರ’ ಎಂದು ಘೋಷಿಸಿದೆ.
ಆದಾಗ್ಯೂ, ಹೊಸ ರೂಪಾಂತರವು ಲಸಿಕೆ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂದು ಸ್ಥಾಪಿಸಲು ಇಲ್ಲಿಯವರೆಗೆ ಯಾವುದೇ ವೈಜ್ಞಾನಿಕ ಮಾಹಿತಿಯಿಲ್ಲ ಎಂದು ನೀತಿ ಆಯೋಗದ ಸದಸ್ಯ ಮತ್ತು ಕೊವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ.ವಿ.ಕೆ ಪೌಲ್ ಹೇಳಿದ್ದಾರೆ.
ಡೆಲ್ಟಾ ಪ್ಲಸ್ ರೂಪಾಂತರವು ಡೆಲ್ಟಾ ರೂಪಾಂತರದಲ್ಲಿ ಹೆಚ್ಚುವರಿ ರೂಪಾಂತರವನ್ನು ಪ್ರದರ್ಶಿಸುತ್ತದೆ ಮತ್ತು ಇದು ಹೊಸ ರೂಪಾಂತರವಾಗಿರುವುದರಿಂದ ವೈಜ್ಞಾನಿಕ ಜ್ಞಾನವು ಇನ್ನೂ ಆರಂಭಿಕ ಹಂತದಲ್ಲಿದೆ” ಎಂದು ಅವರು ಸೋಮವಾರ ಹೇಳಿದರು.
ಏತನ್ಮಧ್ಯೆ, ಕಳೆದ ಕೆಲವು ದಿನಗಳಲ್ಲಿ ಭಾರತದ ದೈನಂದಿನ ಹೊಸ ಪ್ರಕರಣಗಳು ಎರಡನೇ ತರಂಗದ ಉತ್ತುಂಗದಲ್ಲಿ ನಾಲ್ಕು ಲಕ್ಷದಿಂದ 50,000 ಕ್ಕೆ ಇಳಿದಿವೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ, 37000 ಹೊಸ ಪ್ರಕರಣ ಪತ್ತೆ
ಇದನ್ನೂ ಓದಿ: BJP MLA Renukacharya Makes Dosas : ಕೊವಿಡ್ ಸೋಂಕಿತರಿಗಾಗಿ ತಾವೇ ದೋಸೆ ಮಾಡಿ ಕೊಟ್ಟ ರೇಣುಕಾಚಾರ್ಯ ಮತ್ತು ಪತ್ನಿ