ಕೋವಿಷೀಲ್ಡ್ ಲಸಿಕೆ ಅನುಮೋದನೆಗೆ ಯಾವುದೇ ಮನವಿ ಸ್ವೀಕರಿಸಿಲ್ಲವೆಂದ ಈಯು ವೈದ್ಯಕೀಯ ಏಜೆನ್ಸಿ

ಜುಲೈ ಒಂದರಿಂದ ಜಾರಿಗೆ ಬರಲಿರುವ ಈಯು ಡಿಜಿಟಲ್ ಕೋವಿಡ್​ ಸರ್ಟಿಫಿಕೇಟ್ ಹೊಂದಿರುವುದು ಪ್ರಯಾಣಿಸುವುದಕ್ಕೆ ಪೂರ್ವಾನ್ವಯ-ಷರತ್ತೇನೂ ಅಲ್ಲ. ಈಯು ನೀಡಿರುವ ಹೇಳಿಕೆ ಪ್ರಕಾರ ಅದು ಈ ಕೊವಿಡ್ ಪಿಡುಗಿನ ಅವಧಿಯಲ್ಲಿ ಯೂರೋಪಿಯನ್ ರಾಷ್ಟ್ರಗಳಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ಅನುವು ಮಾಡಿಕೊಡುವ ಒಂದು ಸಾಧನ

ಕೋವಿಷೀಲ್ಡ್ ಲಸಿಕೆ ಅನುಮೋದನೆಗೆ ಯಾವುದೇ ಮನವಿ ಸ್ವೀಕರಿಸಿಲ್ಲವೆಂದ ಈಯು ವೈದ್ಯಕೀಯ ಏಜೆನ್ಸಿ
ಪ್ರಾತಿನಿಧಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 29, 2021 | 5:53 PM

ನವದೆಹಲಿ: ಕೋವಿಷೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಭಾರತೀಯರು, ಯುರೋಪ್​ ಪ್ರವಾಸ ತೆರಳಲು ತೊಂದರೆ ಎದುರಿಸುತ್ತಿರುವ ಸಂದರ್ಭದಲ್ಲೇ ಯುರೋಪಿಯನ್ ಯೂನಿಯನ್ (ಈಯು) ಜೊತೆಗಿನ ಕೋವಿಡ್-19 ವ್ಯಾಕ್ಸಿನೇಶನ್ ಪಾಸ್​​ಪೋರ್ಟ್​ಗಾಗಿ ಯುರೋಪಿಯನ್ ವೈದ್ಯಕೀಯ ಏಜೆನ್ಸಿಯ (ಈ ಎಮ್​ಎ) ಅನುಮತಿಗೋಸ್ಕರ ಮನವಿ ಸಲ್ಲಿಸಿಲ್ಲ ಎಂದು ಈಯು ಮಂಗಳವಾರದಂದು ಹೇಳಿದೆ. ಆಸ್ಟ್ರಾಜೆನಿಕ-ಆಕ್ಸ್​ಫರ್ಡ್​ ಯೂನಿವರ್ಸಿಟಿ ಲಸಿಕೆಯ ಭಾರತೀಯ ಆವೃತ್ತಿಯಾಗಿರುವ ಕೋವಿಷೀಲ್ಡ್ ಲಸಿಕೆಗೆ ಯೂರೋಪಿಯನ್ ಯೂನಿಯನ್ ಇನ್ನೂ ಮಾನ್ಯತೆ ನೀಡಿಲ್ಲ. ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಹಲವಾರು ದೇಶದ ನಾಗರಿಕರಿಗೆ ಅಗತ್ಯವಿಲ್ಲದ ಪ್ರವಾಸದ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಈಯು ಹೇಳಿದೆ.

‘ಕೊವಿಷೀಲ್ಟ್​ಗೆ ಈಎಮ್​ಎ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ. ಅನುಮೋದನೆಗಾಗಿ ತಾನು ಇದುವರೆಗೆ ಯಾವುದೇ ಮನವಿ ಸ್ವೀಕರಿಸಿಲ್ಲ ಎಂದು ಯುರೋಪಿಯನ್ ವೈದ್ಯಕೀಯ ಏಜೆನ್ಸಿ ಸೋಮವಾರ ಹೇಳಿದೆ. ಒಂದು ವೇಳೆ ಅದು ಮನವಿಯನ್ನು ಸ್ವೀಕರಿಸಿದರೆ, ನಿಯಮಗಳ ಅನ್ವಯ ಅದನ್ನು ಪರೀಕ್ಷಿಸಲಾಗುವುದು,’ ಎಂದು ಈಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೂಲಗಳ ಪ್ರಕಾರ ಭಾರತದಲ್ಲಿ ಕೋವಿಷೀಲ್ಡ್ ಲಸಿಕೆ ತಯಾರಿಸುವ ಸೀರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಭಾರತ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ ಈಯು ವ್ಯಾಕ್ಸಿನೇಷನ್ ಪಾಸ್​ಪೋರ್ಟ್​ನಲ್ಲಿ ಕೋವಿಷೀಲ್ಡ್​ ಲಸಿಕೆಯನ್ನು ಸೇರಿಸುವ ವಿಷಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದೆ.

‘ಭಾರತ ಅಪರಿಮಿತ ಜನಸಂಖ್ಯೆವುಳ್ಳ ದೇಶವಾಗಿದೆ. ಆದರೆ, ಈಯು ಕೋವಿಷೀಲ್ಡ್ ಲಸಿಕೆಯನ್ನು ಈಯು ಕೋವಿಡ್​-19 ವ್ಯಾಕ್ಸಿನೆಶನ್ ಪಾಸ್​ಪೋರ್ಟ್​ನಲ್ಲಿ ಸೇರಿಸಿಕೊಳ್ಳದಿದ್ದರೆ, ಆ ಲಸಿಕೆ ಹಾಕಿಸಿಕೊಂಡ ಜನ ಯೂರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಅವಕಾಶವಿಲ್ಲದಂತಾಗುತ್ತದೆ. ಇದು ವಿದ್ಯಾರ್ಥಿಗಳಿಗೆ, ವ್ಯಾಪಾರ-ವಹಿವಾಟುಗಳಿಗಾಗಿ ಪ್ರಯಾಣಿಸುವವರರಿಗೆ ತುಂಬಾ ಅನಾನುಕೂಲವಾಗಿ ನಮ್ಮ ಮತ್ತು ಜಾಗತಿಕ ಅರ್ಥಿಕ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆ,’ ಎಂದು ಸೀರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯ ಸಿಈಒ ಅದಾರ್ ಪೂನಾವಾಲಾ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈಶಂಕರ್​ ಅವರಿಗೆ ಪತ್ರವನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಸದರಿ ಸಮಸ್ಯೆಯು ಆದಷ್ಟು ಬೇಗ ಕೊನೆಗೊಳ್ಳಲಿ ಎಂಬ ನಿರೀಕ್ಷೆಯೊಂದಿಗೆ ಅದನ್ನು ನಿಯಂತ್ರಕರು ಮತ್ತು ರಾಜತಂತ್ರಜ್ಞರನ್ನೊಳಗೊಂಡ ಉನ್ನತ ಹಂತದವರೆಗೆ ತೆಗೆದುಕೊಂಡು ಹೋಗುವುದಾಗಿ ಅದಾರ್  ಪೂನಾವಾಲಾ ಸೋಮವಾರದಂದು ಟ್ವೀಟ್​ ಮಾಡಿದ್ದರು.

ಫೈಜರ್/ಬಯೋಎನ್​ಟೆಕ್​ನ ಕೊಮಿರ್​ನೇಟಿ, ಮೊಡೆರ್ನಾ, ಆಸ್ಟ್ರಜೆನಿಕಾ-ಆಕ್ಸ್​ಫರ್ಡ್​ ಸಂಸ್ಥೆಯ ವ್ಯಾಕ್ಸ್​ಜರ್ವ್ರಿಯಾ ಜಾನ್ಸನ್ ಕಂಪನಿಯ ಜಾನ್ಸೆನ್- ಈ ನಾಲ್ಕರಲ್ಲಿ ಯಾವುದಾದರೂ ಒಂದು ಲಸಿಕೆ ಹಾಕಿಸಿಕೊಂಡಿರುವ ಜನರಿಗೆ ಮಾತ್ರ ಪಿಡುಗಿನಿಂದ ವಿಶ್ವವೇ ತತ್ತರಿಸಿರುವ ಈ ಅವಧಿಯಲ್ಲಿ ಈಯು ದೇಶಗಳಿಗೆ ತೆರಳಲು ಪಾಸ್​ಪೋರ್ಟ್ ಮತ್ತು ನಿರ್ಬಂಧರಹಿತ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ.

ಆದರೆ, ಯರೋಪಿಯನ್ ಯೂನಿಯನ್​ನ ಸದಸ್ಯ ರಾಷ್ಟ್ರಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಕೊವಿಷೀಲ್ಡ್​ದಂಥ ಲಸಿಕೆ ಪಡೆದವರಿಗೆ ತಮ್ಮಲ್ಲಿಗೆ ನಿರ್ಬಂಧರಹಿತ ಪ್ರಯಾಣ ಬೆಳಸುವ ಅನುಮತಿ ನೀಡಲು ಸ್ವತಂತ್ರವಾಗಿವೆ.

ಜುಲೈ ಒಂದರಿಂದ ಜಾರಿಗೆ ಬರಲಿರುವ ಈಯು ಡಿಜಿಟಲ್ ಕೋವಿಡ್​ ಸರ್ಟಿಫಿಕೇಟ್ ಹೊಂದಿರುವುದು ಪ್ರಯಾಣಿಸುವುದಕ್ಕೆ ಪೂರ್ವಾನ್ವಯ-ಷರತ್ತೇನೂ ಅಲ್ಲ. ಈಯು ನೀಡಿರುವ ಹೇಳಿಕೆ ಪ್ರಕಾರ ಅದು ಈ ಕೊವಿಡ್ ಪಿಡುಗಿನ ಅವಧಿಯಲ್ಲಿ ಯೂರೋಪಿಯನ್ ರಾಷ್ಟ್ರಗಳಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ಅನುವು ಮಾಡಿಕೊಡುವ ಒಂದು ಸಾಧನವಾಗಿದೆ.

‘ಅದನ್ನು ಹೊಂದಿರುವ ವ್ಯಕ್ತಿಯು ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾನೆ, ನೆಗೆಟಿವ್ ಟೆಸ್ಟ್ ರಿಸಲ್ಟ್ ಪಡೆದುಕೊಂಡಿದ್ದಾನೆ ಅಥವಾ ಕೋವಿಡ್-19 ವ್ಯಾಧಿಯಿಂದ ಚೇತರಿಸಿಕೊಂಡಿದ್ದಾನೆ ಎನ್ನುವುದನ್ನು ಪ್ರಮಾಣೀಕರಿಸುತ್ತದೆ,’ ಎಂದು ಈಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Covishield SIIನ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ನೋ ಎಂಟ್ರಿ..