PM Modi: ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು(ಸೆ.21) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿಯವರ ಭಾಷಣವು ಜಿಎಸ್ಟಿ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹೊಸ ಜಿಎಸ್​ಟಿ 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿವೆ ಎಂಬುದು ಗಮನಿಸಬೇಕಾದ ಸಂಗತಿ.

PM Modi: ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ನರೇಂದ್ರ ಮೋದಿ

Updated on: Sep 21, 2025 | 12:32 PM

ನವದೆಹಲಿ, ಸೆಪ್ಟೆಂಬರ್ 21: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು(ಸೆ.21) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿಯವರ ಭಾಷಣವು ಜಿಎಸ್ಟಿ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹೊಸ ಜಿಎಸ್​ಟಿ 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿವೆ ಎಂಬುದು ಗಮನಿಸಬೇಕಾದ ಸಂಗತಿ. ಸರ್ಕಾರವು ಶೇ. 12 ಮತ್ತು ಶೇ. 28 ರ ಜಿಎಸ್ಟಿ ಸ್ಲ್ಯಾಬ್‌ಗಳನ್ನು ತೆಗೆದುಹಾಕಿದೆ, ನಾಲ್ಕು ಸ್ಲ್ಯಾಬ್‌ಗಳಿಂದ ಎರಡು ಮುಖ್ಯ ಸ್ಲ್ಯಾಬ್‌ಗಳಿಗೆ ರಚನೆಯನ್ನು ಸರಳಗೊಳಿಸಿದೆ. ಪರಿಷ್ಕೃತ ವ್ಯವಸ್ಥೆಯಡಿಯಲ್ಲಿ, ಪ್ರಮಾಣಿತ ಜಿಎಸ್‌ಟಿ ದರಗಳು ಶೇ. 5 ಮತ್ತು ಶೇ. 18 ಆಗಿರುತ್ತವೆ.

H1 B ವೀಸಾ ಹೊಂದಿರುವವರ ಮೇಲೆ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮವೂ ಸಹ ಸಂಭವನೀಯತೆಗಳ ಪಟ್ಟಿಯಲ್ಲಿದೆ, ಈ ಕ್ರಮವು ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯ ಟೆಕ್ಕಿಗಳ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಭಾರತ ಹಾಗೂ ಅಮರಿಕದ ನಡುವಿನ ಸುಂಕ ವಿವಾದ ಹೆಚ್ಚಾಗಿದೆ.

ಅಮೆರಿಕವು ಭಾರತದ ಮೇಲೆ ಶೇ.50ರಷ್ಟು ಆಮದು ಶುಲ್ಕವನ್ನು ವಿಧಿಸಿದೆ. ಅಷ್ಟೇ ಅಲ್ಲದೆ ಎಚ್​​1ಬಿ ವೀಸಾದ ಶುಲ್ಕವನ್ನು 1 ಲಕ್ಷ ಡಾಲರ್​​ಗೆ ಹೆಚ್ಚಿದೆ. ಇದು ವಾರ್ಷಿಕ ಶುಲ್ಕವಲ್ಲ ಒಮ್ಮೆ ಪಾವತಿಸುವಂಥಾ ಶುಲ್ಕ, ಹಾಗೆಯೇ ಈಗಾಗಲೇ ವೀಸಾ ಪಡೆದು ಬೇರೆ ದೇಶಕ್ಕೆ ಹೋಗಿರುವವರಿಗೆ ಇನ್ಯಾವತ್ತೋ ಬಂದರೆ ಅವರಿಗೆ ಮತ್ತೆ ಶುಲ್ಕ ವಿಧಿಸುವುದಿಲ್ಲ. ಅವರು ಯಾವಾಗ ಬೇಕಾದರೂ ದೇಶಬಿಟ್ಟು ಹೋಗಬಹುದು, ದೇಶಕ್ಕೆ ಮರಳಬಹುದು ಎಂದು ಟ್ರಂಪ್ ಹೇಳಿದ್ದಾರೆ.

ಮತ್ತಷ್ಟು ಓದಿ: ಎಚ್​​-1 ಬಿ ವೀಸಾ ಶುಲ್ಕ ಹೆಚ್ಚಳ ಗೊಂದಲ, ಯಾರ್ಯಾರಿಗೆ ಅನ್ವಯ? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಟ್ರಂಪ್

ಟ್ರಂಪ್‌ ಅವರ ಈ ನಡೆಯು, ಉದ್ಯೋಗ ವೀಸಾ ಪಡೆದು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರು, ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮೇಲೆ ಭಾರಿ ಪರಿಣಾಮ ಬೀರಲಿದೆ. ನೂತನ ವೀಸಾ ಶುಲ್ಕವು ಭಾನುವಾರ ಇಂದಿನಿಂದ ಜಾರಿಗೆ ಬರುತ್ತದೆ. ಇದು ಒಂದು ವರ್ಷದ ನಂತರ ಮುಕ್ತಾಯಗೊಳ್ಳಲಿದೆ. ಆದರೆ ಸರ್ಕಾರವು ಅದನ್ನು ಮುಂದುವರಿಸಲು ನಿರ್ಧರಿಸಿದರೆ ಅದನ್ನು ವಿಸ್ತರಿಸಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:30 am, Sun, 21 September 25