ಕೇರಳ: ಇದು ಅಫ್ಘಾನಿಸ್ತಾನವಾ ಅಥವಾ ಭಾರತವಾ, ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪರದೆಯ ಹಿಂದೆ ಹುಡುಗರು ಮುಂದೆ
ಕೇರಳವು ನಾವು ಶೇ. 100 ಸಾಕ್ಷರರೆಂದು ಹೇಳಿಕೊಂಡರೂ, ಧಾರ್ಮಿಕ ನಂಬಿಕೆಗಳು ಮತ್ತು ಮೂಲಭೂತವಾದದ ನಿರಂತರತೆಯು ಶೈಕ್ಷಣಿಕ ಮತ್ತು ಕ್ಯಾಂಪಸ್ ಕಾರ್ಯಕ್ರಮಗಳಲ್ಲಿಯೂ ಸಹ ಮುಸ್ಲಿಂ ಮಹಿಳೆಯರ ಭಾಗವಹಿಸುವಿಕೆಯನ್ನು ನಿರ್ಬಂಧಿಸುತ್ತಿದೆ. ಕಾಸರಗೋಡು ಕಾಲೇಜಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸಿ ಪರದೆಯ ಹಿಂದೆ ಕೂರಿಸಿದ ಮತ್ತು ಪುರುಷ ವಿದ್ಯಾರ್ಥಿಗಳನ್ನು ಮುಂಭಾಗದಲ್ಲಿ ಕೂರಿಸಿದ ಇತ್ತೀಚಿನ ಘಟನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ತಿರುವನಂತಪುರಂ, ಸೆಪ್ಟೆಂಬರ್ 21: ಕೇರಳ(Kerala)ದಲ್ಲಿ ಶೇ.100ರಷ್ಟು ಮಂದಿ ಸಾಕ್ಷರರಿದ್ದಾರೆ ಎಂದು ಸದಾ ಜನ ಹೇಳಿಕೊಳ್ಳುತ್ತಾರೆ. ಆದರೆ ಇದೇ ಸಾಕ್ಷರತೆನಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಲ್ಲಿನ ಮುಸ್ಲಿಂ(Muslim) ಹೆಣ್ಣುಮಕ್ಕಳು ಅಸಮಾನತೆ ಎದುರಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳುವ ಫೋಟೊವೊಂದು ವೈರಲ್ ಆಗಿದೆ. ಅದರಲ್ಲಿ ಅಫ್ಘಾನಿಸ್ತಾನದ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸುವಂತೆಯೇ ಇಲ್ಲಿ ಕೂಡ ನಡುವೆ ಪರದೆ ಎಳೆದು ಕೂರಿಸಲಾಗಿದೆ. ಒಮ್ಮೆ ಫೋಟೊ ನೋಡಿದರೆ ಇದು ಅಫ್ಘಾನಿಸ್ತಾನವಾ ಅಥವಾ ಭಾರತವಾ ಎನ್ನುವ ಅನುಮಾನ ಕಾಡದೆ ಇರದು.
ಕಾಸರಗೋಡಿನ ಕಾಲೇಜಿನ ಕ್ಯಾಂಪಸ್ನಲ್ಲಿ ಯಾವುದೇ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಪರದೆಯ ಹಿಂದೆ, ಗಂಡುಮಕ್ಕಳು ಪರದೆಯ ಮುಂಭಾಗ ಕುಳಿತುಕೊಂಡಿರುವುದನ್ನು ಕಾಣಬಹುದು.
ಕಾಸರಗೋಡು ಕಾಲೇಜಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸಿ ಪರದೆಯ ಹಿಂದೆ ಕೂರಿಸಿದ್ದಾರೆ ಮತ್ತು ವಿದ್ಯಾರ್ಥಿಗಳನ್ನು ಮುಂಭಾಗದಲ್ಲಿ ಕೂರಿಸಿದ ಘಟನೆಯೊಂದು ಇತ್ತೀಚೆಗೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಚರ್ಚೆಯ ಒಂದು ಫೋಟೋ ಎಲ್ಲೆಡೆ ವೈರಲ್ ಆಗಿದೆ.ಇಸ್ಲಾಮಿಕ್ ಮೂಲಭೂತವಾದಿ ದೃಷ್ಟಿಕೋನಗಳನ್ನು ಹೊಂದಿರುವ ಪ್ರಮುಖ ವ್ಯಕ್ತಿ ಡಾ. ಅಬ್ದುಲ್ಲಾ ಬಾಸಿಲ್ ಸಿಪಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದನ್ನು ಕಾಣಬಹುದು. ಈ ಚಿತ್ರವು ಕಾರ್ಯಕ್ರಮದ ಸಮಯದಲ್ಲಿ ಗಂಡುಮಕ್ಕಳು ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆ ಎಳೆಯಲ್ಪಟ್ಟಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಾಸಿಲ್, ಹಿಜಾಬ್ ವಿರುದ್ಧ ವಾದಿಸಿದ ವಿದ್ಯಾರ್ಥಿನಿಯನ್ನು ಬೈದು ಮೌನಗೊಳಿಸಿದ್ದರು. ಆಕೆ ಮಹಿಳೆಯರು ಮೇಕಪ್ ಮತ್ತು ಫ್ಯಾಶನ್ ಬಟ್ಟೆಗಳನ್ನು ಧರಿಸುವುದು ಪುರುಷರನ್ನು ಆಕರ್ಷಿಸಲು ಅಲ್ಲ, ಬದಲಾಗಿ ತಮ್ಮ ಸ್ವಂತ ಆತ್ಮವಿಶ್ವಾಸವನ್ನು ಹೆಚ್ಚಿಸಲು ಎಂದು ವಿದ್ಯಾರ್ಥಿನಿ ಹೇಳಿದ್ದರು. ಬಾಸಿಲ್, ಅನೇಕರು ಅಸಂಬದ್ಧ ವಾದವೆಂದು ಕರೆದರು.
ಮತ್ತಷ್ಟು ಓದಿ: ಮಗ ಮುಸ್ಲಿಂ, ತಾಯಿ ಹಿಂದೂ, ಆಕೆಯ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ನೆರವೇರಿಸಿದ ಪುತ್ರ
ಡಾ. ಅಬ್ದುಲ್ಲಾ ಬಾಸಿಲ್ ಮತ್ತು ಉಮಾಸ್ಕಿಂಗ್ ಅನೋಮಲೀಸ್‌ನಂತಹ ಸಂಸ್ಥೆಗಳು ಕಾಲೇಜು ವಿದ್ಯಾರ್ಥಿಗಳ ಮೇಲೆ ತಮ್ಮ ಇಸ್ಲಾಮಿಕ್ ಮೂಲಭೂತವಾದಿ ದೃಷ್ಟಿಕೋನಗಳಿಂದ ಪ್ರಭಾವ ಬೀರಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಮತ್ತು ಆತ್ಮ ವಿಶ್ವಾಸವು ಹಿಜಾಬ್ ಧರಿಸುವಂತಹ ಇಸ್ಲಾಮಿಕ್ ಆಚರಣೆಗಳ ಸಂಪ್ರದಾಯವಾದಿ ವ್ಯಾಖ್ಯಾನವನ್ನು ಅನುಸರಿಸುವುದರಲ್ಲಿದೆ ಎಂದು ಅವರು ವಾದಿಸುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




