AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮನೆಯ ಶೌಚಾಲಯದ ಕಮೋಡ್ ಒಳಗೆ ಕಾಣಿಸಿಕೊಂಡ ನಾಗರಹಾವು

Video: ಮನೆಯ ಶೌಚಾಲಯದ ಕಮೋಡ್ ಒಳಗೆ ಕಾಣಿಸಿಕೊಂಡ ನಾಗರಹಾವು

ನಯನಾ ರಾಜೀವ್
|

Updated on: Sep 21, 2025 | 8:23 AM

Share

ಅಜ್ಮೀರ್​ನ ಮನೆಯೊಂದರ ಶೌಚಾಲಯದೊಳಗೆ ನಾಗರಹಾವೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಮನೆಯ ಎರಡನೇ ಮಹಡಿಯ ಶೌಚಾಲಯದ ಕಮೋಡ್​​ನಲ್ಲಿ ಹಾವು ಪತ್ತೆಯಾಗಿದೆ. ಮನುಷ್ಯರನ್ನು ನೋಡಿ ದಾಳಿಗೆ ಮುಂದಾಗಿತ್ತು. ನಂತರ ಕೋಬ್ರಾ ಟೀಮ್ ರಾಜಸ್ಥಾನಕ್ಕ ಕರೆ ಮಾಡಲಾಯಿತು. ಬಳಿಕ ವನ್ಯಜೀವಿ ಸಂರಕ್ಷಣಾ ತಂಡ ಬಂದು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬಳಿಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.

ಅಜ್ಮೀರ್, ಸೆಪ್ಟೆಂಬರ್ 21: ಅಜ್ಮೀರ್​ನ ಮನೆಯೊಂದರ ಶೌಚಾಲಯದೊಳಗೆ ನಾಗರಹಾವೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಮನೆಯ ಎರಡನೇ ಮಹಡಿಯ ಶೌಚಾಲಯದ ಕಮೋಡ್​​ನಲ್ಲಿ ಹಾವು ಪತ್ತೆಯಾಗಿದೆ. ಮನುಷ್ಯರನ್ನು ನೋಡಿ ದಾಳಿಗೆ ಮುಂದಾಗಿತ್ತು. ನಂತರ ಕೋಬ್ರಾ ಟೀಮ್ ರಾಜಸ್ಥಾನಕ್ಕ ಕರೆ ಮಾಡಲಾಯಿತು. ಬಳಿಕ ವನ್ಯಜೀವಿ ಸಂರಕ್ಷಣಾ ತಂಡ ಬಂದು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬಳಿಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.

ಜನರು ಭಯಭೀತರಾಗಬಾರದು ಅಥವಾ ಸರೀಸೃಪಗಳಿಗೆ ಹಾನಿ ಮಾಡಬಾರದು, ಆದರೆ ತರಬೇತಿ ಪಡೆದ ರಕ್ಷಕರನ್ನು ತಕ್ಷಣ ಕರೆಯಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ ಬರುವುದು ಸಾಮಾನ್ಯ ಅವುಗಳು ಬೆಚ್ಚನೆಯ ಜಾಗವನ್ನು ಅರಸುತ್ತಿರುತ್ತವೆ ಎಂದು ಹೇಳಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ವಲ್ಪ ದಿನಗಳ ಹಿಂದೆ, ಕೋಟಾ ನಗರದ ನಯಾಪುರ ಪ್ರದೇಶದ ಜೆಕೆ ಲೋನ್ ಆಸ್ಪತ್ರೆಯ ಆವರಣದಲ್ಲಿರುವ ವೈದ್ಯರ ಹಾಸ್ಟೆಲ್​​ನಲ್ಲಿ ರಾತ್ರಿ ವೇಳೆ ವಿಷಪೂರಿತ ನಾಗರಹಾವೊಂದು ಕಾಣಿಸಿಕೊಂಡಿತ್ತು. ಕಮೋಡ್​​ನಲ್ಲಿದ್ದ ಹಾವನ್ನು ನೋಡಿ ಕಿರುಚಿದ್ದಾರೆ. ವಿಷಯ ತಿಳಿದ ವೈದ್ಯರು ಭಯಭೀತರಾಗಿ ತಮ್ಮ ರೂಂನಿಂದ ಹೊರಗೆ ಓಡಿದ್ದರು. ಈ ವೇಳೆ ಅಲ್ಲಿದ್ದವರು ಹಾವಿಗೆ ಜೆಟ್​​ನಿಂದ ನೀರು ಹಾರಿಸಿದ್ದಾರೆ. ಆಗ ನಾಗರಹಾವು ಶೌಚಾಲಯದ ಪೈಪ್ ಮೂಲಕ ಕಮೋಡ್‌ಗೆ ಪ್ರವೇಶಿಸಿ ನಂತರ ಹಾಸ್ಟೆಲ್ ಕೋಣೆಗೆ ನುಸುಳಿತು. ಈ ಶಾಕಿಂಗ್ ವಿಡಿಯೋ ವೈರಲ್ ಆಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ