AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪುರುಷೋತ್ತಮ ಎಕ್ಸ್​​ಪ್ರೆಸ್​ ರೈಲಿನಲ್ಲಿ ಬೆಡ್​​ಶೀಟ್​​ಗಳನ್ನು ಕದ್ದು ಸಿಕ್ಕಿಬಿದ್ದ ಕುಟುಂಬ

Video: ಪುರುಷೋತ್ತಮ ಎಕ್ಸ್​​ಪ್ರೆಸ್​ ರೈಲಿನಲ್ಲಿ ಬೆಡ್​​ಶೀಟ್​​ಗಳನ್ನು ಕದ್ದು ಸಿಕ್ಕಿಬಿದ್ದ ಕುಟುಂಬ

ನಯನಾ ರಾಜೀವ್
|

Updated on: Sep 21, 2025 | 8:43 AM

Share

ಪುರುಷೋತ್ತಮ ಎಕ್ಸ್​​ಪ್ರೆಸ್​​ನ ಎಸಿ ಕೋಚ್​ನಲ್ಲಿ ಪ್ರಯಾಣಿಸಿರುವ ಕುಟುಂಬವೊಂದು ರೈಲ್ವೆ ಬೆಡ್​ಶೀಟ್​ಗಳನ್ನು ಕದ್ದು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಒಡಿಶಾದ ಪುರಿ ಮತ್ತು ನವದೆಹಲಿ ನಡುವೆ ಚಲಿಸುವ ಸೂಪರ್‌ಫಾಸ್ಟ್ ರೈಲು ಪುರುಷೋತ್ತಮ ಎಕ್ಸ್‌ಪ್ರೆಸ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳ ಮೂಲಕ ಹಾದುಹೋಗುವ ಅತ್ಯಂತ ಬೇಡಿಕೆಯ ರೈಲಾಗಿದೆ. ಬಾಪಿ ಸಾಹೂ ಎಂಬ ಬಳಕೆದಾರ ಎಕ್ಸ್​​ನಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಒಬ್ಬ ಮಹಿಳೆ ಸೇರಿದಂತೆ ಮೂವರು ಕುಟುಂಬ ಸದಸ್ಯರನ್ನು ಇಬ್ಬರು ಪ್ರಯಾಣ ಟಿಕೆಟ್ ಪರೀಕ್ಷಕರು (ಟಿಟಿಇ) ಮತ್ತು ಇತರ ರೈಲ್ವೆ ಸಿಬ್ಬಂದಿ ಸುತ್ತುವರೆದಿರುವುದನ್ನು ಕಾಣಬಹುದು

ಒಡಿಶಾ, ಸೆಪ್ಟೆಂಬರ್ 21: ಪುರುಷೋತ್ತಮ ಎಕ್ಸ್​​ಪ್ರೆಸ್​​ನ ಎಸಿ ಕೋಚ್​ನಲ್ಲಿ ಪ್ರಯಾಣಿಸಿರುವ ಕುಟುಂಬವೊಂದು ರೈಲ್ವೆ ಬೆಡ್​ಶೀಟ್​ಗಳನ್ನು ಕದ್ದು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಒಡಿಶಾದ ಪುರಿ ಮತ್ತು ನವದೆಹಲಿ ನಡುವೆ ಚಲಿಸುವ ಸೂಪರ್‌ಫಾಸ್ಟ್ ರೈಲು ಪುರುಷೋತ್ತಮ ಎಕ್ಸ್‌ಪ್ರೆಸ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳ ಮೂಲಕ ಹಾದುಹೋಗುವ ಅತ್ಯಂತ ಬೇಡಿಕೆಯ ರೈಲಾಗಿದೆ.

ಬಾಪಿ ಸಾಹೂ ಎಂಬ ಬಳಕೆದಾರ ಎಕ್ಸ್​​ನಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಒಬ್ಬ ಮಹಿಳೆ ಸೇರಿದಂತೆ ಮೂವರು ಕುಟುಂಬ ಸದಸ್ಯರನ್ನು ಇಬ್ಬರು ಪ್ರಯಾಣ ಟಿಕೆಟ್ ಪರೀಕ್ಷಕರು (ಟಿಟಿಇ) ಮತ್ತು ಇತರ ರೈಲ್ವೆ ಸಿಬ್ಬಂದಿ ಸುತ್ತುವರೆದಿರುವುದನ್ನು ಕಾಣಬಹುದು. ಆ ಮಹಿಳೆ ತಮ್ಮ ಬ್ಯಾಗ್​​ನಿಂದ ಬೆಡ್​ಶೀಟ್​​ಗಳನ್ನು ಹೊರ ತೆಗೆದಿದ್ದು, ಆಕೆ ಜತೆಗಿದ್ದ ಯುವಕರು ಈ ಬಗ್ಗೆ ಯಾವುದೇ ಸ್ಪಷ್ಟ ಉತ್ತರವನ್ನು ನೀಡಲಿಲ್ಲ. ಈ ವಿಡಿಯೋ ವೈರಲ್ ಆಗಿದ್ದರೂ, ಘಟನೆ ಯಾವಾಗ ಮತ್ತು ಎಲ್ಲಿ ನಡೆಯಿತು ಎಂಬುದರ ಕುರಿತು ವಿವರಗಳು ದೃಢಪಟ್ಟಿಲ್ಲ.

ಆರೋಪಿ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದರ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಭಾರತೀಯ ರೈಲ್ವೆ ಕಾಯ್ದೆ, 1966 ರ ಸೆಕ್ಷನ್ 3 ರ ಪ್ರಕಾರ, ರೈಲ್ವೆ ಸಂಬಂಧಪಟ್ಟ ವಸ್ತುಗಳನ್ನು ಕದಿಯುವುದು ಅಥವಾ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಒಂದು ವರ್ಷದವರೆಗೆ ಜೈಲು ಶಿಕ್ಷೆ, 1,000 ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ