Pariksha Pe Charcha 2021: ಏಪ್ರಿಲ್​ 7ರಂದು, ಸಂಜೆ 7ಕ್ಕೆ ಪರೀಕ್ಷಾ ಪೆ ಚರ್ಚಾ; ಈ ಬಾರಿ ಪ್ರಧಾನಿ ಮೋದಿಯವರೊಂದಿಗಿನ ಸಂವಾದದಲ್ಲಿ ಪಾಲಕರಿಗೂ ಅವಕಾಶ

|

Updated on: Apr 05, 2021 | 12:59 PM

ಪರೀಕ್ಷಾ ಪೆ ಚರ್ಚಾ ವರ್ಚ್ಯುವಲ್ ಆಗಿ ನಡೆಯಲಿದ್ದು, ಪಾಲ್ಗೊಳ್ಳುವವರು ನೋಂದಣಿ ಮಾಡಿಕೊಳ್ಳಲು ಕೊನೇ ದಿನಾಂಕ ಮಾರ್ಚ್​ 14 ಆಗಿತ್ತು. ಸದ್ಯ ರಿಜಿಸ್ಟ್ರೇಶನ್​ ಕ್ಲೋಸ್ ಆಗಿದೆ. ಮಾಹಿತಿಯ ಪ್ರಕಾರ ಇದುವರೆಗೆ 10.39 ಲಕ್ಷ ವಿದ್ಯಾರ್ಥಿಗಳು ಪಿಪಿಸಿ 2021ಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.

Pariksha Pe Charcha 2021: ಏಪ್ರಿಲ್​ 7ರಂದು, ಸಂಜೆ 7ಕ್ಕೆ ಪರೀಕ್ಷಾ ಪೆ ಚರ್ಚಾ; ಈ ಬಾರಿ ಪ್ರಧಾನಿ ಮೋದಿಯವರೊಂದಿಗಿನ ಸಂವಾದದಲ್ಲಿ ಪಾಲಕರಿಗೂ ಅವಕಾಶ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಮನ್​ ಕೀ ಬಾತ್​, ಪರೀಕ್ಷಾ ಪೆ ಚರ್ಚಾದಂಥ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತ ಬಂದಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೆ ಚರ್ಚಾ ನಡೆಸಿ, ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಳ ಬಗ್ಗೆ ಇರುವ ಭಯ ಹೋಗಲಾಡಿಸಿ, ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದರು. ಅದಾದ ಬಳಿಕ ಪ್ರತಿವರ್ಷವೂ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಹಾಗೇ ಈ ವರ್ಷದ ಪರೀಕ್ಷಾ ಪೆ ಚರ್ಚಾದ ದಿನಾಂಕವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಈ ಬಾರಿಯ ಪರೀಕ್ಷಾ ಪೆ ಚರ್ಚೆಯನ್ನು ಏಪ್ರಿಲ್​ 7ರಂದು ಸಂಜೆ ಏಳುಗಂಟೆಯಿಂದ, ಹೊಸ ಸ್ವರೂಪದಲ್ಲಿ ನಡೆಸಲಾಗುವುದು ಎಂದು ನರೇಂದ್ರ ಮೋದಿಯವರು ತಿಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷಾ ವಾರಿಯರ್ಸ್​ ಎಂದು ಕರೆದಿರುವ ಪ್ರಧಾನಿ ಮೋದಿ, ಈ ಸಲದ ಪರೀಕ್ಷಾ ಪೆ ಚರ್ಚೆಯಲ್ಲಿ ನಮ್ಮ ಪರೀಕ್ಷಾ ವಾರಿಯರ್ಸ್​, ಅವರ ಪಾಲಕರು, ಶಿಕ್ಷಕರ ಜತೆ ಹೊಸ ಸ್ವರೂಪದಲ್ಲಿ ಸಂವಾದ ನಡೆಸಲಾಗುವುದು. ಈ ಚರ್ಚೆ ಹೊಸ ಸ್ವರೂಪದಲ್ಲಿ, ಮಹತ್ವ ಪೂರ್ಣವಾಗಿ ಇರಲಿದೆ ಎಂದು ಹೇಳಿದ್ದಾರೆ.

ಈ ಪರೀಕ್ಷಾ ಪೆ ಚರ್ಚಾದಲ್ಲಿ 9-12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ನಾಲ್ಕು ವರ್ಷಗಳಿಂದ ಕೇವಲ ವಿದ್ಯಾರ್ಥಿಗಳೊಂದಿಗೆ ಮಾತ್ರ ಸಂವಾದ ನಡೆಸುತ್ತಿದ್ದ ನರೇಂದ್ರ ಮೋದಿ, ಈ ಸಲ ಅವರ ಪಾಲಕರೊಂದಿಗೆ ಕೂಡ ಚರ್ಚೆ ನಡೆಸುತ್ತಿರುವುದು ವಿಶೇಷ. ಹಾಗೇ, ಪರೀಕ್ಷಾ ಪೆ ಚರ್ಚಾ ವರ್ಚ್ಯುವಲ್ ಆಗಿ ನಡೆಯಲಿದ್ದು, ಪಾಲ್ಗೊಳ್ಳುವವರು ನೋಂದಣಿ ಮಾಡಿಕೊಳ್ಳಲು ಕೊನೇ ದಿನಾಂಕ ಮಾರ್ಚ್​ 14 ಆಗಿತ್ತು. ಸದ್ಯ ರಿಜಿಸ್ಟ್ರೇಶನ್​ ಕ್ಲೋಸ್ ಆಗಿದೆ. ಮಾಹಿತಿಯ ಪ್ರಕಾರ ಇದುವರೆಗೆ 10.39 ಲಕ್ಷ ವಿದ್ಯಾರ್ಥಿಗಳು ಪಿಪಿಸಿ 2021ಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಹಾಗೇ, 2.62 ಲಕ್ಷ ಶಿಕ್ಷಕರು, 93,000 ಪೋಷಕರು ಕೂಡ ರಿಜಿಸ್ಟರ್​ ಮಾಡಿಕೊಂಡಿದ್ದಾರೆ.

ಇನ್ನು ಪರೀಕ್ಷಾ ಪೆ ಚರ್ಚಾ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ. ದೇಶದ ಯುವಜನತೆಗೆ ಏನು ಬೇಕು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನರೇಂದ್ರ ಮೋದಿಯವರು ಪರೀಕ್ಷಾ ಪೆ ಚರ್ಚಾ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ ಭಯವನ್ನು ಹೋಗಲಾಡಿಸಿ, ಆತ್ಮ ವಿಶ್ವಾಸ ಹುಟ್ಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಎದುರಿಸೋದು ಹೇಗೆ? ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ಇದನ್ನೂ ಓದಿ: ಕೊರೊನಾ ವಿರುದ್ಧ ಸೂಕ್ತ ನಡವಳಿಕೆಯ ಬಗ್ಗೆ ಏಪ್ರಿಲ್ 6ರಿಂದ 21ರವರೆಗೆ ಜಾಗೃತಿ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ

Shankar Ashwath: ಸುದೀಪ್​ ಎದುರಲ್ಲೇ ಹೆಂಡತಿ ಬಳಿ ಕ್ಷಮೆ ಕೇಳಿದ ಶಂಕರ್​ ಅಶ್ವತ್ಥ್​! ಅಂಥ ತಪ್ಪು ಏನಾಯ್ತು?