Sign In

By signing in or creating an account, you agree with Associated Broadcasting Company's Terms & Conditions and Privacy Policy.

Shankar Ashwath: ಸುದೀಪ್​ ಎದುರಲ್ಲೇ ಹೆಂಡತಿ ಬಳಿ ಕ್ಷಮೆ ಕೇಳಿದ ಶಂಕರ್​ ಅಶ್ವತ್ಥ್​! ಅಂಥ ತಪ್ಪು ಏನಾಯ್ತು?

Bigg Boss Kannada Elimination: ಬಿಗ್​ ಬಾಸ್ ಕನ್ನಡ ಸೀಸನ್​ 8ರ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್​ ಅವರು ಈ ರಿಯಾಲಿಟಿ ಶೋನಿಂದ ಹೊರಬಿದ್ದಿದ್ದಾರೆ. ಎಲಿಮಿನೇಟ್​ ಆಗುತ್ತಿದ್ದಂತೆಯೇ ಪತ್ನಿ ಬಳಿ ಅವರು ಕ್ಷಮೆ ಕೇಳಿದ್ದಾರೆ.

Shankar Ashwath: ಸುದೀಪ್​ ಎದುರಲ್ಲೇ ಹೆಂಡತಿ ಬಳಿ ಕ್ಷಮೆ ಕೇಳಿದ ಶಂಕರ್​ ಅಶ್ವತ್ಥ್​! ಅಂಥ ತಪ್ಪು ಏನಾಯ್ತು?
ಶಂಕರ್ ಅಶ್ವತ್ಥ್​ - ಬಿಗ್​ ಬಾಸ್​ ಕನ್ನಡ ಸೀಸನ್ 8​
Follow us
ಮದನ್​ ಕುಮಾರ್​
| Updated By: Digi Tech Desk

Updated on: Apr 05, 2021 | 12:29 PM

ಹಲವು ಸಿನಿಮಾಗಳಲ್ಲಿ ನಟಿಸಿರುವ ಶಂಕರ್​ ಅಶ್ವತ್ಥ್​ ಅವರಿಗೆ ಬಿಗ್​ ಬಾಸ್​ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಂತಾಗಿದೆ. ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಹಿರಿಯ ಸ್ಪರ್ಧಿ ಎಂಬ ಕಾರಣಕ್ಕೆ ಅವರು ಹೈಲೈಟ್​ ಆಗಿದ್ದರು. ಯುವಕರಿಗೆ ಸರಿಸಾಟಿಯಾಗಿ ಪೈಪೋಟಿ ನೀಡುತ್ತಿದ್ದ ಅವರಿಗೆ ಕೆಲವೊಮ್ಮೆ ಹಿನ್ನಡೆ ಆಗುತ್ತಿತ್ತು. ಒಟ್ಟು ಐದು ವಾರಗಳ ಕಾಲ ಅವರು ದೊಡ್ಮನೆಯಲ್ಲಿ ಹಣಾಹಣಿ ನಡೆಸಿದರು. ಐದನೇ ವಾರದ ಎಲಿಮಿನೇಷನ್​ನಲ್ಲಿ ಅವರಿಗೆ ಅದೃಷ್ಟ ಕೈ ಕೊಟ್ಟಿತು.

ಈ ಐದು ವಾರಗಳಲ್ಲಿ ಶಂಕರ್​ ಅಶ್ವತ್ಥ್​ ಅವರು ಎರಡು ಬಾರಿ ಕಳಪೆ ಹಣೆಪಟ್ಟಿ ಪಡೆದುಕೊಂಡರು. ಹಾಗಾಗಿ ಅವರು ಎರಡು ಸಲ ಜೈಲಿಗೆ ಹೋಗಬೇಕಾಯಿತು. ಯಾರ ಜೊತೆಗೂ ಹೆಚ್ಚು ಬೆರೆಯುವುದಿಲ್ಲ ಎಂಬ ಆರೋಪ ಕೂಡ ಕೇಳಿಬಂತು. ಒಂದು ಟಾಸ್ಕ್​ನಲ್ಲಿ ಆಕ್ರಮಣಕಾರಿಯಾಗಿ ಸ್ವಿಮ್ಮಿಂಗ್ ಪೂಲ್​ಗೆ ಜಿಗಿದು, ವೈಷ್ಣವಿಯವರನ್ನು ಬೀಳಿಸಿದರು ಎಂಬ ಕಾರಣಕ್ಕಾಗಿಯೂ ಶಂಕರ್​ ಅಶ್ವತ್ಥ್​ ಅವರ ಮೇಲೆ ಮನೆಯ ಇತರೆ ಸ್ಪರ್ಧಿಗಳು ಬೇಸರ ಮಾಡಿಕೊಂಡರು. ಈ ಎಲ್ಲ ವಿಚಾರಗಳು ವೀಕೆಂಡ್​ನಲ್ಲಿ ಸುದೀಪ್ ಎದುರು ಚರ್ಚೆ ಆಯಿತು.

ಎಲಿಮಿನೇಟ್​ ಆಗಿ ಹೊರಬಂದ ಶಂಕರ್​ ಅಶ್ವತ್ಥ್​ ಅವರು ಬಿಗ್​ ಬಾಸ್​ ವೇದಿಕೆಯಲ್ಲಿ ಸುದೀಪ್​ ಜೊತೆ ಕೆಲವು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಅವರ ಶಂಕರ್​ ಅಶ್ವತ್ಥ್​ ಅವರ ಪತ್ನಿ ಮತ್ತು ಮಗ ಕೂಡ ಇದ್ದರು. ಇವರ ಆಟ ಹೇಗನಿಸಿತು ಎಂದು ಸುದೀಪ್​ ಪ್ರಶ್ನಿಸಿದರು. ಮನೆಯಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುವ ಶಂಕರ್​ ಅವರು ಬಿಗ್​ ಬಾಸ್​ನಲ್ಲಿ ತಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ ಎಂದು ಶಂಕರ್​ ಪತ್ನಿ ಹೇಳಿದರು. ಆ ಮಾತಿಗೆ ಪ್ರತಿಕ್ರಿಯಿಸಿದ ಶಂಕರ್​. ‘ನನ್ನನ್ನು ಕ್ಷಮಿಸು’ ಎಂದರು. ಈ ವೇಳೆ ಅವರು ಸಖತ್​ ಎಮೋಷನಲ್​ ಆಗಿದ್ದರು.

‘ನಿಮ್ಮನ್ನು ಕ್ಷಮಿಸುವಂತಹ ತಪ್ಪನ್ನು ನೀವೇನೂ ಮಾಡಿಲ್ಲ. ನಿಮ್ಮ ಸಾಮರ್ಥ್ಯವನ್ನು ನೀವು ತೋರಿಲಿಲ್ಲ. ನಮ್ಮ ಮನೆಯಲ್ಲಿ ಇದ್ದ ಹಾಗೆ ನೀವು ಬಿಗ್​ ಬಾಸ್​ನಲ್ಲಿ ಇರಲಿಲ್ಲ’ ಎಂದು ಶಂಕರ್​ ಪತ್ನಿ ಬೇಸರ ವ್ಯಕ್ತಪಡಿಸಿದರು. ‘ನನ್ನ ಮಗನಿಗಾದರೆ ನಾನು ಬಯ್ಯಬಹುದು, ಬುದ್ಧಿ ಹೇಳಬಹುದು. ಎಲ್ಲರೂ ಬುದ್ಧಿ ಕೇಳುತ್ತಾರಾ? ಇತಿ ಮಿತಿ ಇಟ್ಟುಕೊಂಡು ನಾನು ಮಾಡಿದ್ದೀನಿ’ ಎಂದು ಶಂಕರ್ ಅಶ್ವತ್ಥ್​ ಅವರು ಸಮಜಾಯಿಷಿ ನೀಡಿದರು.

‘ನನ್ನ ಮನಸ್ಸು ಬಿಗ್​ ಬಾಸ್​ ಮೇಲಿದೆ. ಆದರೆ ದೇಹ ಸಹಕರಿಸುತ್ತಿಲ್ಲ. ನಾನು ಅಸಮರ್ಥ. ನನಗೆ ಎಷ್ಟು ಆಗುತ್ತದೆಯೋ ಅದನ್ನೂ ಮೀರಿ ಮಾಡಿದ್ದೇನೆ. ನನಗೆ ಬೆನ್ನುಹುರಿ ಪೆಟ್ಟಾಗಿ ಆಪರೇಷನ್​ ಆಗಿದೆ. ಏನಾದರೂ ಹೆಚ್ಚು ಕಡಿಮೆ ಆಗಿಬಿಟ್ಟರೆ 92 ವರ್ಷದ ತಾಯಿ, ಕತ್ತೆ ದುಡಿದಂತೆ ದುಡಿಯುವ ಹೆಂಡತಿ ಇದ್ದಾಳೆ. ಇವರಿಗೆಲ್ಲ ಎಲ್ಲಿ ಹೊರೆ ಆಗುತ್ತೇನೋ ಅಂತ ಭಯ ಆಯಿತು’ ಎಂದು ಶಂಕರ್​ ಅವರು ತಮ್ಮ ಹಿನ್ನಡೆಗೆ ಕಾರಣ ನೀಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಶಂಕರ್​ ಅಶ್ವತ್ಥ್ ಬೇಸರ!

ನಿನ್ನೆ-ಮೊನ್ನೆ ಬಂದ ಬಚ್ಚಾ ಎಂದಿದ್ದ ಶಂಕರ್​ ಅಶ್ವತ್ಥ್​ ವಿರುದ್ಧ ಮನೆ ಮಂದಿಯೆಲ್ಲಾ ಒಟ್ಟಾಗಿ ತಿರುಗಿ ಬಿದ್ರು!

(Bigg Boss Kannada 8 Elimination: Shankar Ashwath apologizes his wife in front of Kiccha Sudeep on BBK8 stage)

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ