ಯುಕೆಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಪ್ರಧಾನಿ ಮೋದಿ

|

Updated on: May 11, 2021 | 9:29 PM

ಈ ಹಿಂದೆ ಜನವರಿಯಲ್ಲಿ ಭಾರತದ ಗಣರಾಜ್ಯೋತ್ಸವಕ್ಕೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್​ ಅವರಿಗೆ ವಿಶೇಷ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಲಾಗಿತ್ತು.

ಯುಕೆಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ: ಭಾರತದಲ್ಲಿ ಕೊವಿಡ್​ 19 ಸೋಂಕು ಉಲ್ಬಣಗೊಂಡಿರುವ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಜಿ7 ಶೃಂಗಸಭೆಗೆ ವಿಶೇಷ ಅತಿಥಿಯಾಗಿ ಆಗಮಿಸುವಂತೆ ಯುಕೆಯ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಿದ್ದರು. ಎಲ್ಲವೂ ಸರಿಯಾಗಿದ್ದಿದ್ದರೆ ನರೇಂದ್ರ ಮೋದಿಯವರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಕೊವಿಡ್​ 19 ಹೆಚ್ಚುತ್ತಿರುವ ಕಾರಣ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆಯ ವಕ್ತಾರ ತಿಳಿಸಿದ್ದಾರೆ. ಈ ಶೃಂಗಸಭೆಯ ಕಾರ್ನ್​ವಾಲ್​​ನಲ್ಲಿ ಜೂನ್​ 11-13ರವರೆಗೆ ನಡೆಯಲಿದೆ.

ಕೊರೊನಾ ವೈರಸ್ ಕಾರಣದಿಂದ ರಾಷ್ಟ್ರೀಯ ನಾಯಕರ ಇನ್ನೊಂದು ದೇಶದ ಭೇಟಿ ರದ್ದಾಗುತ್ತಿದೆ. ಈ ಹಿಂದೆ ಜನವರಿಯಲ್ಲಿ ಭಾರತದ ಗಣರಾಜ್ಯೋತ್ಸವಕ್ಕೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್​ ಅವರಿಗೆ ವಿಶೇಷ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಲಾಗಿತ್ತು. ಆದರೆ ನಂತರ ಕೊರೊನಾ ಕಾರಣಕ್ಕೆ ಆ ಭೇಟಿ ಕೂಡ ರದ್ದಾಗಿತ್ತು.

ಇದನ್ನೂ ಓದಿ: ಕುವೈತ್​ನಿಂದ ಮತ್ತೆ ಆಕ್ಸಿಜನ್ ನೆರವು; ಎರಡು ಹಡಗುಗಗಳಲ್ಲಿ ಬಂದಿಳಿದ ವೈದ್ಯಕೀಯ ಪರಿಕರಗಳು

ಭಾರತದಲ್ಲಿ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಟ್ವಿಟರ್​ ಸಿಇಒ ಜ್ಯಾಕ್​ ಡಾರ್ಸೆಯಿಂದ 15 ಮಿಲಿಯನ್ ಡಾಲರ್ ಆರ್ಥಿಕ ನೆರವು..