ಭಾರತದಲ್ಲಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆಯಿಂದ 15 ಮಿಲಿಯನ್ ಡಾಲರ್ ಆರ್ಥಿಕ ನೆರವು..
ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಒಟ್ಟು ಮೂರು ಎನ್ಜಿಒಗಳಿಗೆ ಹಣ ಹಂಚಿಕೆ ಮಾಡಿದ್ದು, ಅದರಲ್ಲಿ ಒಂದು ಆರ್ಎಸ್ಎಸ್ನ ಅಂಗಸಂಸ್ಥೆಯಾದ ಸೇವಾ ಇಂಟರ್ನ್ಯಾಶನಲ್ಗೆ 2,500,000 ಡಾಲರ್ ನೀಡಿದ್ದಾಗಿ ಮೂಲಗಳು ತಿಳಿಸಿವೆ.
ಚೆನ್ನೈ: ಭಾರತದಲ್ಲಿ ಅಬ್ಬರಿಸುತ್ತಿರುವ ಕೊರೊನಾ ವಿರುದ್ಧ ಹೋರಾಟಕ್ಕೆ, ಸೋಷಿಯಲ್ ಮೀಡಿಯಾ ದೈತ್ಯ ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ಅವರು ವೈಯಕ್ತಿಕವಾಗಿ 15 ಮಿಲಿಯನ್ ಡಾಲರ್ ಅಂದರೆ ಸುಮಾರು 110 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಡಾರ್ಸೆ, ಕೊವಿಡ್ 19 ಪರಿಹಾರ ಕಾರ್ಯ ನಡೆಸುತ್ತಿರುವ ಕೇರ್, ಏಡ್ ಇಂಡಿಯಾ ಮತ್ತು ಸೇವಾ ಇಂಟರ್ನ್ಯಾಷನಲ್ ಎನ್ಜಿಒಗಳಿಗೆ 15 ಮಿಲಿಯನ್ ಡಾಲರ್ಗಳನ್ನು ಹಂಚಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಜ್ಯಾಕ್ ಡೋರ್ಸೆ ಅವರು, ಅಸೋಸಿಯೇಶನ್ ಆಫ್ ಇಂಡಿಯಾ (AID India)ಕ್ಕೆ 2,500,000 ಡಾಲರ್, ಕೇರ್ ಎನ್ಜಿಒಕ್ಕೆ 10,000,000 ಡಾಲರ್ ಮತ್ತು ಆರ್ಎಸ್ಎಸ್ನ ಅಂಗಸಂಸ್ಥೆಯಾದ ಸೇವಾ ಇಂಟರ್ನ್ಯಾಶನಲ್ಗೆ 2,500,000 ಡಾಲರ್ ನೀಡಿದ್ದಾಗಿ ಮೂಲಗಳು ತಿಳಿಸಿವೆ.
ಜ್ಯಾಕ್ ಡಾರ್ಸೆ ಅವರು ಕಳೆದ ವರ್ಷ ಏಪ್ರಿಲ್ನಿಂದಲೂ ಜಾಗತಿಕವಾಗಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಆರ್ಥಿಕ ನೆರವು ಘೋಷಿಸುತ್ತಲೇ ಇದ್ದಾರೆ. ಎನ್ಜಿಒ ಮೂಲಕ ಹಣವನ್ನು ದೇಣಿಗೆ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 200 ಸಂಸ್ಥೆಗಳಿಗೆ ಹಣ ನೀಡಿದ್ದಾರೆ. ಇದೀಗ ಭಾರತದ ಮೂರು ಎನ್ಜಿಒಗಳಿಗೆ ದೇಣಿಗೆ ನೀಡಿದ್ದಾರೆ. ಭಾರತದಲ್ಲಿ ಸದ್ಯ ಬೆಡ್, ಆಕ್ಸಿಜನ್ ಸೇರಿ ಹಲವು ವೈದ್ಯಕೀಯ ಉಪಕರಣಗಳ ಕೊರತೆ ಉಂಟಾಗಿದೆ. ಬೇರೆ ಅನೇಕ ದೇಶಗಳು ಭಾರತದ ನೆರವಿಗೆ ನಿಂತಿವೆ. ಆಕ್ಸಿಜನ್, ಮಾಸ್ಕ್, ರೆಮ್ಡೆಸಿವಿರ್ ಇಂಜಕ್ಷೆನ್ ಸೇರಿ ಅಗತ್ಯ ವಸ್ತುಗಳನ್ನು ತಮ್ಮ ದೇಶಗಳಿಂದ ಕಳಿಸುತ್ತಿವೆ.
Published On - 8:20 pm, Tue, 11 May 21