ಕುವೈತ್ನಿಂದ ಮತ್ತೆ ಆಕ್ಸಿಜನ್ ನೆರವು; ಎರಡು ಹಡಗುಗಗಳಲ್ಲಿ ಬಂದಿಳಿದ ವೈದ್ಯಕೀಯ ಪರಿಕರಗಳು
ಕೊರೊನಾ ಸೋಂಕಿತರ ಸಂಖ್ಯೆ, ಬೆಡ್ ಹಾಗೂ ಆಮ್ಲಜನಕ ಸಮಸ್ಯೆ ತಲೆದೋರುತ್ತಿರುವಂತೆ ವಿದೇಶಗಳಿಂದ ಬಹುಪ್ರಮಾಣದ ನೆರವು ಲಭ್ಯವಾಗಿದೆ. ಮಂಗಳೂರಿಗೆ ಕುವೈತ್ನಿಂದ ಇಂದು (ಮೇ 11) ಮತ್ತೆ ಆಮ್ಲಜನಕ ಸೌಲಭ್ಯ ಒದಗಿದೆ.
ಮಂಗಳೂರು: ಕುವೈತ್ನಿಂದ ನಗರದ ನವಮಂಗಳೂರು ಬಂದರಿಗೆ ಮತ್ತೆ 2 ಶಿಪ್ನಲ್ಲಿ ಮೆಡಿಕಲ್ ಆಕ್ಸಿಜನ್ ಬಂದಿದೆ. ಐಎನ್ಎಸ್ ತಬಾರ್ ಹಾಗೂ ಐಎನ್ಎಸ್ ಕೊಚ್ಚಿ ಹಡಗುಗಳಲ್ಲಿ ವೈದ್ಯಕೀಯ ಆಮ್ಲಜನಕ ಆಗಮಿಸಿದೆ. 20 ಮೆಟ್ರಿಕ್ ಟನ್ ಆಕ್ಸಿಜನ್ ಹಾಗೂ 70 ಆಕ್ಸಿಜನ್ ಸಿಲಿಂಡರ್ನ ಪ್ಯಾಲೆಟ್ಸ್ ಆಗಮಿಸಿದೆ. ಎರಡು ಹೈ ಫ್ಲೋ ಆಕ್ಸಿಜನ್ ಕಂಟೇನರ್ಗಳು ಕೂಡ ಕುವೈತ್ನಿಂದ ಬಂದಿವೆ.
ಕೊರೊನಾ ಸೋಂಕಿತರ ಸಂಖ್ಯೆ, ಬೆಡ್ ಹಾಗೂ ಆಮ್ಲಜನಕ ಸಮಸ್ಯೆ ತಲೆದೋರುತ್ತಿರುವಂತೆ ವಿದೇಶಗಳಿಂದ ಬಹುಪ್ರಮಾಣದ ನೆರವು ಲಭ್ಯವಾಗಿದೆ. ಮಂಗಳೂರಿಗೆ ಕುವೈತ್ನಿಂದ ಇಂದು (ಮೇ 11) ಮತ್ತೆ ಆಮ್ಲಜನಕ ಸೌಲಭ್ಯ ಒದಗಿದೆ.
ನವ ಮಂಗಳೂರು ಬಂದರಿಗೆ ನಿನ್ನೆ ಕುವೈತ್ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಬಂದು ತಲುಪಿತ್ತು. ಐಎನ್ಎಸ್ ಕೋಲ್ಕತ್ತಾ ಯುದ್ಧ ನೌಕೆ ಮೂಲಕ ವೈದ್ಯಕೀಯ ಆಮ್ಲಜನಕ ಬಂದಿಳಿದಿತ್ತು. ಜೊತೆಗೆ 5 ಟನ್ ಆಕ್ಸಿಜನ್ ಸಿಲಿಂಡರ್ ಹಾಗೂ 4 ಹೈ ಫ್ಲೋ ಆಕ್ಸಿಜನ್ ಕಂಟೇನರ್ಗಳು ಸಹ ಆಗಮಿಸಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಕುವೈತ್ನಿಂದ ಬಂದ ವೈದ್ಯಕೀಯ ನೆರವನ್ನು ಸ್ವಾಗತಿಸಿದ್ದರು.
ಇದಕ್ಕೂ ಮುನ್ನ ಬಹ್ರೇನ್‌ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಇಲ್ಲಿನ ನವ ಮಂಗಳೂರು ಬಂದರ್‌ಗೆ ಬಂದಿತ್ತು. ನೌಕಾಪಡೆಯ ಐಎನ್ಎಸ್ ತಲ್ವಾರ್‌ನಲ್ಲಿ ಆಕ್ಸಿಜನ್ ಬಂದಿತ್ತು. ಬಹ್ರೇನ್‌ನ ಮನಾಮಾ ಬಂದರಿನಿಂದ ಬಂದಿದ್ದ ಐಎನ್ಎಸ್ ತಲ್ವಾರ್, ಆಕ್ಸಿಜನ್ ಹೊತ್ತು ತಂದಿತ್ತು. 2 ಕ್ರಯೋಜೆನಿಕ್ ಐಸೋಕಂಟೇನರ್ಗಳಲ್ಲಿ ಆಕ್ಸಿಜನ್ ರವಾನೆ ಮಾಡಲಾಗಿತ್ತು. ಕೇವಲ ಆಕ್ಸಿಜನ್ ಮಾತ್ರವಲ್ಲದೆ, ಕೊವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳನ್ನು ಕೂಡ ಹಡಗು ತಂದಿತ್ತು.
ಕರ್ನಾಟಕ ಕೊವಿಡ್ ವರದಿ ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 39,510 ಜನರಿಗೆ ಕೊವಿಡ್ ಸೋಂಕು ತಗುಲಿದೆ. 480 ಜನರು ನಿಧನರಾಗಿದ್ದಾರೆ. ಈ ಮೂಲಕ ಸತತ ಎರಡನೇ ದಿನ ರಾಜ್ಯದಲ್ಲಿ 40 ಸಾವಿರಕ್ಕಿಂತ ಕೊಂಚ ಕಡಿಮೆ ಸೋಂಕಿತರು ಪತ್ತೆಯಾದಂತಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಅವಧಿಯಲ್ಲಿ 15,879 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದ್ದು, 259 ಜನರು ಅಸುನೀಗಿದ್ದಾರೆ. ರಾಜಧಾನಿಯಲ್ಲಿ ಸೋಂಕಿತರು ಮತ್ತು ಮೃತಪಟ್ಟವರ ಸಂಖ್ಯೆಯಲ್ಲಿ ನಿನ್ನೆಗಿಂತ ಬೆರಳೆಣಿಕೆಯಷ್ಟು ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 22,584 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ್ದಾರೆ. ಇಂದು ಪತ್ತೆಯಾದ ಸೊಂಕಿತರನ್ನೂ ಸೇರಿ ರಾಜ್ಯದಲ್ಲಿ ಈವರೆಗಿನ ಕೊರೊನಾ ಸೋಂಕಿತರ ಸಂಖ್ಯೆ 20,13,193ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 14,05,869 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 480 ಜನರ ಸಾವನ್ನಪ್ಪಿದ್ದು ಇದುವರೆಗೆ ಕೊರೊನಾದಿಂದ 19,852 ಜನರ ಸಾವನ್ನಪ್ಪಿದ್ದಾರೆ. 5,87,452 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ಒಂದರಲ್ಲೇ 362696 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ರಾಜ್ಯಕ್ಕೆ ಹಂಚಲಾಗಿರುವ ಆಕ್ಸಿಜನ್ ಸಾಲುತ್ತಿದೆಯೇ? ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಮನೆಯಲ್ಲೇ ಆಕ್ಸಿಜನ್ ತಯಾರಿಸಿ ಅಪಾಯ ಎದುರಿಸಬೇಡಿ: ತಜ್ಞರು
Published On - 9:01 pm, Tue, 11 May 21