ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (Joe Biden) ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಹಿಂದೆ ತಳ್ಳಿ ಹೆಚ್ಚಿನ ಅನುಮೋದನೆ ರೇಟಿಂಗ್ಗಳೊಂದಿಗೆ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಡೇಟಾ ಇಂಟೆಲಿಜೆನ್ಸ್ ಕಂಪನಿ ಮಾರ್ನಿಂಗ್ ಕನ್ಸಲ್ಟ್‌ನ (Morning Consult) ಇತ್ತೀಚಿನ ಅನುಮೋದನೆ ರೇಟಿಂಗ್‌ಗಳಲ್ಲಿ ನರೇಂದ್ರ ಮೋದಿ ಅವರು ಹೆಚ್ಚಿನ ಅನುಮೋದನೆ ರೇಟಿಂಗ್ ಅನ್ನು ಹೊಂದಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 71 ಪ್ರತಿಶತದಷ್ಟು ಜನರು ಅನುಮೋದನೆಗೆ ಮತ ಹಾಕಿದರೆ 21 ಪ್ರತಿಶತದಷ್ಟು ಜನರು ಅಸಮ್ಮತಿ ಸೂಚಿಸಿದ್ದಾರೆ. ಮಾರ್ನಿಂಗ್ ಕನ್ಸಲ್ಟ್, ಪ್ರತಿ ನಾಯಕನನ್ನು ಪತ್ತೆಹಚ್ಚಲು ಪ್ರಾರಂಭಿಸಿದ ಸಮಯದಿಂದ, ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯ ಅಂದರೆ ಮೇ 2020ರಲ್ಲಿ ಮೋದಿ ಅವರ ಅನುಮೋದನೆ ರೇಟಿಂಗ್ ಗರಿಷ್ಠ ಮಟ್ಟದಲ್ಲಿತ್ತು, ಆದರೆ ಕಳೆದ ವರ್ಷ ಎರಡನೇ ಕೊವಿಡ್ ಅಲೆಯ ಸಮಯದಲ್ಲಿ ಅದು ಕನಿಷ್ಠ ಮಟ್ಟಕ್ಕೆ ಇಳಿಯಿತು. ಕಂಪನಿಯು ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಮತ್ತು ಅಮೆರಿಕದ ಸರ್ಕಾರಿ ನಾಯಕರ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುತ್ತಿದೆ. ಲಾಕ್‌ಡೌನ್‌ನಲ್ಲಿ ಪಾರ್ಟಿ ಮಾಡಿದ ಆರೋಪಗಳನ್ನು ಎದುರಿಸುತ್ತಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು 69 ಪ್ರತಿಶತದಷ್ಟು ಪ್ರತಿಕ್ರಿಯಿಸಿದವರು ನಿರಾಕರಿಸಿದ್ದರಿಂದ -43 ಅನುಮೋದನೆ ರೇಟಿಂಗ್ ಅನ್ನು ಪಡೆದಿದ್ದಾರೆ.
ಹೆಚ್ಚು ನಕಾರಾತ್ಮಕ ಅನುಮೋದನೆ ರೇಟಿಂಗ್ ಹೊಂದಿರುವ ಇತರ ನಾಯಕರು ಬಿಡೆನ್, ಟ್ರುಡೊ, ಬ್ರೆಜಿಲ್‌ನ ಜೈರ್ ಬೋಲ್ಸನಾರೊ, ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್, ದಕ್ಷಿಣ ಕೊರಿಯಾದ ಮೂನ್ ಜೇ-ಇನ್, ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ ಮತ್ತು ಸ್ಪೇನ್‌ನ ಪೆಡ್ರೊ ಸಾಚೆಜ್. ರೇಟಿಂಗ್‌ಗಳು ವಯಸ್ಕ ನಿವಾಸಿಗಳ ಏಳು-ದಿನದ ಸರಾಸರಿಯನ್ನು ಆಧರಿಸಿವೆ, ಮಾದರಿ ಪ್ರಮಾಣಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ.
ವಿಶ್ವ ನಾಯಕರ ಜಾಗತಿಕ ಅನುಮೋದನೆ ರೇಟಿಂಗ್‌ಗಳ ಪಟ್ಟಿ:
ನರೇಂದ್ರ ಮೋದಿ: ಶೇ 71
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್: ಶೇ 66
ಮಾರಿಯೋ ಡ್ರಾಘಿ: ಶೇ 60
ಫ್ಯೂಮಿಯೊ ಕಿಶಿಡಾ: ಶೇ 48
ಓಲಾಫ್ ಸ್ಕೋಲ್ಜ್: ಶೇ 44
ಜೋ ಬಿಡೆನ್: ಶೇ 43
ಜಸ್ಟಿನ್ ಟ್ರುಡೊ: ಶೇ 43
ಸ್ಕಾಟ್ ಮಾರಿಸನ್: ಶೇ 41
ಪೆಡ್ರೊ ಸ್ಯಾಂಚೆಜ್: ಶೇ 40
ಮೂನ್ ಜೇ-ಇನ್: ಶೇ 38
ಜೈರ್ ಬೋಲ್ಸನಾರೊ: ಶೇ 37
ಎಮ್ಯಾನುಯೆಲ್ ಮ್ಯಾಕ್ರನ್: ಶೇ 34
ಬೋರಿಸ್ ಜಾನ್ಸನ್: ಶೇ 26
ವಿಶ್ವ ನಾಯಕರ ಜಾಗತಿಕ ಅಸಮ್ಮತಿ ರೇಟಿಂಗ್‌ಗಳ ಪಟ್ಟಿ
ಬೋರಿಸ್ ಜಾನ್ಸನ್: ಶೇ 69
ಎಮ್ಯಾನುಯೆಲ್ ಮ್ಯಾಕ್ರನ್: ಶೇ 59
ಜೈರ್ ಬೋಲ್ಸನಾರೊ: ಶೇ 56
ಮೂನ್ ಜೇ-ಇನ್: ಶೇ 54
ಪೆಡ್ರೊ ಸ್ಯಾಂಚೆಜ್: ಶೇ 53
ಸ್ಕಾಟ್ ಮಾರಿಸನ್: ಶೇ 52
ಜಸ್ಟಿನ್ ಟ್ರುಡೊ: ಶೇ 51
ಜೋ ಬಿಡೆನ್: ಶೇ 49
ಓಲಾಫ್ ಸ್ಕೋಲ್ಜ್: ಶೇ 40
ಫ್ಯೂಮಿಯೊ ಕಿಶಿಡಾ: ಶೇ 36
ಮಾರಿಯೋ ಡ್ರಾಘಿ: ಶೇ 33
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್: ಶೇ 26
ನರೇಂದ್ರ ಮೋದಿ: ಶೇ 21