Watch ನಾಗ್ಪುರದಲ್ಲಿ ಕಲಾವಿದರ ಬಳಿ ತೆರಳಿ ಅವರ ಜತೆ ಢೋಲ್ ಬಾರಿಸಿದ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 11, 2022 | 4:57 PM

ನಾಗ್ಪುರ ಮೆಟ್ರೋ ಮೊದಲ ಹಂತದ ಕಾಮಗಾರಿಗೂ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ನಾಗ್ಪುರದ ಜನರನ್ನು ಅಭಿನಂದಿಸಿದ ಮೋದಿ ನಾಗ್ಪುರ ಮೆಟ್ರೋದ ಹಂತ 1 ರ ಉದ್ಘಾಟನೆಗೆ ನಾನು ನಾಗ್ಪುರದ ಜನರನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಫೋಟೊ ಟ್ವೀಟ್ ಮಾಡಿದ್ದಾರೆ

Watch ನಾಗ್ಪುರದಲ್ಲಿ ಕಲಾವಿದರ ಬಳಿ ತೆರಳಿ ಅವರ ಜತೆ ಢೋಲ್ ಬಾರಿಸಿದ ಮೋದಿ
ಢೋಲ್ ಬಾರಿಸಿದ ಮೋದಿ
Follow us on

ನಾಗ್ಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ನಾಗ್ಪುರದಲ್ಲಿ (Nagpur) ಢೋಲ್ ಬಾರಿಸಿ ಸ್ವಾಗತಿಸಲಾಯಿತು. ಈ ಸ್ವಾಗತದಿಂದ ಉತ್ಸುಕರಾದ ಮೋದಿ ಕಲಾವಿದರ ಗುಂಪನ್ನು ಸೇರಿ ಅಲ್ಲಿ ಢೋಲ್ (dhol) ಬಾರಿಸಿದ್ದು ವಿಶೇಷವಾಗಿತ್ತು. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಪ್ರಧಾನಿ ಮೋದಿ ಒಬ್ಬ ಕಲಾವಿದನ ಪಕ್ಕದಲ್ಲಿ ಢೋಲ್ ಬಾರಿಸುತ್ತಿರುವುದನ್ನು ಕಾಣಬಹುದು. “ಮಹಾರಾಷ್ಟ್ರದ ನಾಗ್ಪುರದಲ್ಲಿ ಸಾಂಪ್ರದಾಯಿಕ ಸ್ವಾಗತ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಮಾಡಲಾಗಿದೆ. ನಾಗ್ಪುರ ಮತ್ತು ಬಿಲಾಸ್‌ಪುರ ನಡುವೆ ಇಂದು (ಭಾನುವಾರ) ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡಿದ ಪ್ರಧಾನಿ ನಾಗ್ಪುರ ಮತ್ತು ಬಿಲಾಸ್‌ಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಚಾಲನೆ ನೀಡಿದ್ದೇನೆ. ಈ ರೈಲಿನಿಂದ ಸಂಪರ್ಕವು ಗಮನಾರ್ಹವಾಗಿ ವರ್ಧಿಸುತ್ತದೆ ಎಂದಿದ್ದಾರೆ. ನಾಗ್ಪುರ ಮೆಟ್ರೋ ಮೊದಲ ಹಂತದ ಕಾಮಗಾರಿಗೂ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ನಾಗ್ಪುರದ ಜನರನ್ನು ಅಭಿನಂದಿಸಿದ ಮೋದಿ ನಾಗ್ಪುರ ಮೆಟ್ರೋದ ಹಂತ 1 ರ ಉದ್ಘಾಟನೆಗೆ ನಾನು ನಾಗ್ಪುರದ ಜನರನ್ನು ಅಭಿನಂದಿಸಲು ಬಯಸುತ್ತೇನೆ. ಎರಡು ಮೆಟ್ರೋ ರೈಲುಗಳನ್ನು ಚಾಲನೆ ನೀಡಿತ್ತು ಮೆಟ್ರೋದಲ್ಲಿ ಸವಾರಿ ಮಾಡಿರುವೆ. ಮೆಟ್ರೋ ಆರಾಮದಾಯಕ ಮತ್ತು ಅನುಕೂಲಕರವಾಗಿದೆ ಎಂದಿದ್ದಾರೆ.


ಪ್ರಧಾನಿ ಮೋದಿ ಅವರು ನಾಗ್ಪುರ ಮೆಟ್ರೋದಲ್ಲಿ ಆಸಕ್ತಿದಾಯಕ ಸಂವಾದಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.


ನಾಗ್ಪುರ ಮೆಟ್ರೋ ಹಂತ-II ಗೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದರು ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ. ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸಿದ್ದು ಇದರ ಅಡಿಯಲ್ಲಿ ಸುಮಾರು 4,000 ಸಿಬ್ಬಂದಿಯನ್ನು ನಿಯೋಜಿಸಲಾಗುವುದು .ಅವರಿಗೆ ತ್ವರಿತ ಪ್ರತಿಕ್ರಿಯೆ ತಂಡಗಳು, ಗಲಭೆ ನಿಯಂತ್ರಣ ಪೊಲೀಸರು ಮತ್ತು ಗೃಹ ರಕ್ಷಕ ದಳಗಳು ಬೆಂಬಲ ನೀಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ