ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಸ್ಥಾನಕ್ಕೆ ಆದೇಶ್ ಗುಪ್ತಾ ರಾಜೀನಾಮೆ

ಎಎಪಿಗೆ ಜನರ ಜನಾದೇಶ ಸಿಕ್ಕಿದೆ, ಹಾಗಾಗಿ ಅವರು ಮೇಯರ್ ಆಗಬಹುದು. ನಾವು ಅವರಿಗೆ ಶುಭ ಹಾರೈಸುತ್ತೇವೆ ಎಂದು ಆದೇಶ್ ಗುಪ್ತಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಸ್ಥಾನಕ್ಕೆ ಆದೇಶ್ ಗುಪ್ತಾ ರಾಜೀನಾಮೆ
ಆದೇಶ್ ಗುಪ್ತಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 11, 2022 | 2:26 PM

ದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ಗೆ (MCD) ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಆಮ್ ಆದ್ಮಿ ಪಕ್ಷ ವಿರುದ್ದ ಪರಾಭವಗೊಂಡ ನಂತರ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ (Adesh Gupta) ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುಪ್ತಾ ಅವರ ಉತ್ತರಾಧಿಕಾರಿ ನೇಮಕವಾಗುವವರೆಗೆ ವೀರೇಂದ್ರ ಸಚ್‌ದೇವ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ. ಆದೇಶ್ ಗುಪ್ತಾ ಅವರನ್ನು ಜೂನ್ 2020 ರಲ್ಲಿ ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಶುಕ್ರವಾರ, ನಾಗರಿಕ ಚುನಾವಣೆಯಲ್ಲಿ ಸೋತರೂ ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ಸಿಗುತ್ತದೆ ಎಂದು ಬಿಜೆಪಿ ಹೇಳಿತ್ತು. ಆದರೆ ಎಂಸಿಡಿ ಮೇಯರ್ ಎಎಪಿಯದ್ದಾಗಿರುತ್ತದೆ, ಅಲ್ಲಿ ಬಿಜೆಪಿ “ಬಲವಾದ ವಿರೋಧ” ಪಾತ್ರವನ್ನು ವಹಿಸುತ್ತದೆ ಎಂದು ಆದೇಶ್ ಗುಪ್ತಾ ಹೇಳಿದ್ದಾರೆ.ಈಗ ದೆಹಲಿಗೆ ಮೇಯರ್ ಆಯ್ಕೆಯಾಗಿದೆ. ಇದು ನಿಕಟ ಸ್ಪರ್ಧೆಯಲ್ಲಿ ಹೆಚ್ಚಿನ ಮತಗಳಿಸುತ್ತಾರೆ, ನಾಮನಿರ್ದೇಶಿತ ಕೌನ್ಸಿಲರ್‌ಗಳು ಯಾವ ರೀತಿಯಲ್ಲಿ ಮತ ಚಲಾಯಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ ಚಂಡೀಗಢದಲ್ಲಿ ಬಿಜೆಪಿ ಮೇಯರ್ ಇದ್ದಾರೆ ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಬುಧವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಟ್ವೀಟ್ ಮಾಡಿದ್ದರು.

ಮಂಜಿಂದರ್ ಸಿಂಗ್ ಸಿರ್ಸಾ ಮತ್ತು ತಜೀಂದರ್ ಪಾಲ್ ಬಗ್ಗಾ ಸೇರಿದಂತೆ ಇತರ ಪಕ್ಷದ ನಾಯಕರು ಕೂಡಾ ಇದೇ ರೀತಿ ಹೇಳಿದ್ದು ಬಿಜೆಪಿಗೆ ಮೇಯರ್ ಸ್ಥಾನ ಸಿಗಬಹುದು ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಚಂಡೀಗಢದ ಉದಾಹರಣೆಯಿಂದ ಇದು ಮತ್ತಷ್ಟು ಬಲಗೊಂಡಿತು. ಇಲ್ಲಿ ಈ ವರ್ಷದ ಆರಂಭದಲ್ಲಿ ಎಎಪಿ ಪುರಸಭೆ ಚುನಾವಣೆಯಲ್ಲಿ 35 ವಾರ್ಡ್‌ಗಳಲ್ಲಿ 14 ಅನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಆದರೆ ಬಿಜೆಪಿ ಮೇಯರ್ ಸ್ಥಾನವನ್ನು ಪಡೆದುಕೊಂಡಿತು.

ಆದಾಗ್ಯೂ ಗುಪ್ತಾ ಅವರು ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಎಂಸಿಡಿಯಲ್ಲಿ ಬಿಜೆಪಿ ಪ್ರಬಲ ಪ್ರತಿಪಕ್ಷದ ಪಾತ್ರವನ್ನು ವಹಿಸುತ್ತದೆ ಎಂದು ಅವರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಎಎಪಿಗೆ ಜನರ ಜನಾದೇಶ ಸಿಕ್ಕಿದೆ, ಹಾಗಾಗಿ ಅವರು ಮೇಯರ್ ಆಗಬಹುದು. ನಾವು ಅವರಿಗೆ ಶುಭ ಹಾರೈಸುತ್ತೇವೆ ಎಂದು ಗುಪ್ತಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ
Image
ಲಾರಿ ಚಾಲಕನ ಮಗ ಸುಖವಿಂದರ್ ಸಿಂಗ್ ಸುಖು ಇದೀಗ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ
Image
ಆಡಳಿತದಲ್ಲಿ ಗುಜರಾತ್ ಮಾಡೆಲ್, ಟಿಕೆಟ್ ಹಂಚಿಕೆಯಲ್ಲಿ ಗೆಲುವು ಮತ್ತು ಪಕ್ಷ ನಿಷ್ಠೆಯೇ ಮಾನದಂಡ : ಪ್ರಲ್ಹಾದ್ ಜೋಶಿ ಸ್ಪಷ್ಟೋಕ್ತಿ
Image
‘ಪಾಠ ಕಲಿಸಿದ್ದೆವು’ ಹೇಳಿಕೆ; ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಅಮಿತ್ ಶಾಗೆ ಕ್ಲೀನ್​​ಚಿಟ್

ಆಮ್ ಆದ್ಮಿ ಪಕ್ಷ ಬುಧವಾರ ಎಂಸಿಡಿ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಿತ್ತು. ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ 200 ವಾರ್ಡ್ ಗಳಲ್ಲಿ 134 ಸೀಟುಗಳನ್ನು ಗೆದ್ದುಕೊಂಡಿದ್ದು ಬಿಜೆಪಿ 104 ಸೀಟುಗೆದ್ದುಕೊಂಡಿದೆ. ಕಳೆದ 15 ವರ್ಷಗಳಿಂದ ಬಿಜೆಪಿ ಎಂಸಿಡಿಯಲ್ಲಿ ಆಡಳಿತ ನಡೆಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ