MCD Election 2022 Results ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತದ ಗೆಲುವು; ಮಹಿಳೆಗೆ ಮೇಯರ್ ಸ್ಥಾನ:ಎಎಪಿ

ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 126ರಷ್ಟು ಬಹುಮತವನ್ನು ಗಳಿಸಿ ಗೆಲುವು ಸಾಧಿಸುವ ಮೂಲಕ  ನಾಗರಿಕ ಸಂಸ್ಥೆಯ ಮೇಲೆ ಬಿಜೆಪಿಯ 15 ವರ್ಷಗಳ ಹಿಡಿತವನ್ನು ಕೊನೆಗೊಳಿಸಿತು. ಮಹಿಳಾ ಮೇಯರ್ ನಾಗರಿಕ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಎಎಪಿ ಘೋಷಿಸಿದೆ.

MCD Election 2022 Results ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತದ ಗೆಲುವು; ಮಹಿಳೆಗೆ ಮೇಯರ್ ಸ್ಥಾನ:ಎಎಪಿ
ದೆಹಲಿಯಲ್ಲಿ ಎಎಪಿ ಸಂಭ್ರಮಾಚರಣೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 07, 2022 | 2:54 PM

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (Municipal Corporation of Delhi) ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಹುಮತದ 126 ಸೀಟುಗಳನ್ನು ಗಳಿಸುವ ಮೂಲಕ ಆಮ್ ಆದ್ಮಿ ಪಕ್ಷ(AAP) ವಿಜಯಶಾಲಿಯಾಗಿ ಹೊರಹೊಮ್ಮಿದೆ. ಎಂಸಿಡಿ (MCD) 250 ವಾರ್ಡ್‌ಗಳನ್ನು ಹೊಂದಿದ್ದು ಸರಳ ಬಹುಮತದ ಮಾರ್ಕ್ ಅಥವಾ ಮ್ಯಾಜಿಕ್ ನಂಬರ್ 126 ಆಗಿದೆ. ಬೆಳಿಗ್ಗೆ 11:30 ಕ್ಕೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಎಎಪಿ 56 ಗೆಲುವುಗಳು ಮತ್ತು 77 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಮ್ಯಾಜಿಕ್ ಸಂಖ್ಯೆ 126 ಅನ್ನು ದಾಟಿದೆ. ಎಂಸಿಡಿ ಚುನಾವಣೆಯಲ್ಲಿ ಎಎಪಿ ಗೆಲುವಿಗಾಗಿ ಮನೀಶ್ ಸಿಸೋಡಿಯಾ ದೆಹಲಿಯ ಜನರಿಗೆ ಧನ್ಯವಾದ ಹೇಳಿದ್ದಾರೆ. ದೆಹಲಿ ಎಂಸಿಡಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ನಂಬಿದ್ದಕ್ಕಾಗಿ ದೆಹಲಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ನಕಾರಾತ್ಮಕ ಪಕ್ಷವನ್ನು ಸೋಲಿಸುವ ಮೂಲಕ, ದೆಹಲಿಯ ಜನರು ಪ್ರಾಮಾಣಿಕ ಮತ್ತು ಕೆಲಸ ಮಾಡುವ ಅರವಿಂದ ಕೇಜ್ರಿವಾಲ್ ಅವರನ್ನು ಗೆಲ್ಲಿಸಿದ್ದಾರೆ. ನಮಗೆ ಇದು ಕೇವಲ ಗೆಲುವಲ್ಲ, ದೊಡ್ಡ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣೆ ಗೆುಲುವಿನ ಬಗ್ಗೆ ಟ್ವೀಟ್ ಮಾಡಿದ ರಾಘವ್ ಚಡ್ಡಾ, ಧನ್ಯವಾದಗಳು, ದೆಹಲಿ.ಎಂಸಿಡಿ ಚುನಾವಣೆಯಲ್ಲಿ ಎಎಪಿಯ ಗೆಲುವು ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವ ಮತ್ತು ದೃಷ್ಟಿಯಲ್ಲಿ ನಿಮ್ಮ ನಂಬಿಕೆಯ ಪ್ರತಿಬಿಂಬವಾಗಿದೆ.ತಮ್ಮ ನಿರಾಸಕ್ತಿ, ಸುಳ್ಳು ಮತ್ತು ಕೆಸರೆರಚಾಟದ ರಾಜಕೀಯದಿಂದ ದೆಹಲಿಯನ್ನು ನಾಶಮಾಡಲು ಯತ್ನಿಸಿದವರ ವಿರುದ್ಧ ಇದು ನಿಮ್ಮ ವಿಜಯವಾಗಿದೆ.ಸ್ವಚ್ಛವಾದ, ಹಸಿರಿನಿಂದ ಕೂಡಿದ ದೆಹಲಿ ಇಲ್ಲಿದೆ ಎಂದಿದ್ದಾರೆ.

ಎಂಸಿಡಿ ಚುನಾವಣೆಯಲ್ಲಿ ಎಎಪಿ ಗೆಲುವಿನ ನಂತರ ಸಿಎಂ ಮತ್ತು ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ತಮ್ಮ ನಿವಾಸದಿಂದ ಹೊರಟು ಪಕ್ಷದ ಕಚೇರಿಗೆ ತಲುಪಲಿದ್ದಾರೆ. ಅಲ್ಲಿ  ಅವರು ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿಯ 15 ವರ್ಷದ ಅಧಿಕಾರ ಅಂತ್ಯ

ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 126ರಷ್ಟು ಬಹುಮತವನ್ನು ಗಳಿಸಿ ಗೆಲುವು ಸಾಧಿಸುವ ಮೂಲಕ  ನಾಗರಿಕ ಸಂಸ್ಥೆಯ ಮೇಲೆ ಬಿಜೆಪಿಯ 15 ವರ್ಷಗಳ ಹಿಡಿತವನ್ನು ಕೊನೆಗೊಳಿಸಿತು. ಮಹಿಳಾ ಮೇಯರ್ ನಾಗರಿಕ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಎಎಪಿ ಘೋಷಿಸಿದೆ.

ಪೂರ್ವ ದೆಹಲಿಗೆ ಧನ್ಯವಾದಗಳು: ಗೌತಮ್ ಗಂಭೀರ್

ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್  ಪೂರ್ವ ದೆಹಲಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ, ಅಲ್ಲಿ ಬಿಜೆಪಿ ಬಹುಪಾಲು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. “ನಾವು ಗಾಜಿಪುರದ ಕಸದ ರಾಶಿಯನ್ನು ನಾವು ಕೊನೆಗೊಳಿಸುತ್ತೇವೆ! ಜೈ ಹಿಂದ್” ಎಂದು ಹಿಂದಿಯಲ್ಲಿ ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Wed, 7 December 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು