ಗೋವಾ ಕಾಂಗ್ರೆಸ್ ಪಕ್ಷಾಂತರಿಗಳ ಅನರ್ಹತೆ ಅರ್ಜಿ: ನ್ಯಾಯಾಲಯ ನಿರ್ಧರಿಸಲಿದೆ ಎಂದ ಸುಪ್ರೀಂಕೋರ್ಟ್

ಚೋಡಂಕರ್ ಅವರು ಆಗಸ್ಟ್ 2019 ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೂನ್ 2020 ರಲ್ಲಿ ಈ ವಿಷಯದಲ್ಲಿ ನೋಟಿಸ್‌ಗಳನ್ನು ನೀಡುವ ಮೊದಲು ಅದು ಬಾಕಿ ಉಳಿದಿತ್ತು. ಅರ್ಜಿಯು ಅಂದಿನ ಗೋವಾ ಸ್ಪೀಕರ್ ರಾಜೇಶ್ ಪಟ್ನೇಕರ್ ಅನರ್ಹತೆಯ ಬಗ್ಗೆ ನಿರ್ಧರಿಸಲು ನಿರ್ದೇಶನಗಳನ್ನು ಕೇಳಿದೆ

ಗೋವಾ ಕಾಂಗ್ರೆಸ್ ಪಕ್ಷಾಂತರಿಗಳ ಅನರ್ಹತೆ ಅರ್ಜಿ: ನ್ಯಾಯಾಲಯ ನಿರ್ಧರಿಸಲಿದೆ ಎಂದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 07, 2022 | 1:03 PM

2019 ರಲ್ಲಿ ಬಿಜೆಪಿಗೆ(BJP) ಪಕ್ಷಾಂತರಗೊಂಡ 10 ಶಾಸಕರ ಅನರ್ಹತೆಯನ್ನು ನಿರ್ಧರಿಸಲು ಗೋವಾ(Goa) ವಿಧಾನಸಭಾ ಸ್ಪೀಕರ್ ಮಾಡಿರುವ ವಿಳಂಬವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಒಂದು ವರ್ಷಕ್ಕೆ ಮುಂದೂಡಿದ್ದು, ಇದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಹೇಳಿದೆ. ಅವರಲ್ಲಿ ಮೂವರು ಈ ವರ್ಷ ವಿಧಾನಸಭೆಗೆ ಮರು ಆಯ್ಕೆಯಾಗಿದ್ದಾರೆ ಎಂದು ಪಕ್ಷಾಂತರಿಗಳ ಪರ ವಾದಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಮಂಗಳವಾರ ಗೋವಾ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೋಡಂಕರ್ ಅವರ ವಕೀಲರು ಕಾನೂನಿನ ಪ್ರಮುಖ ಪ್ರಶ್ನೆಗಳಿಗೆ ಸಂಬಂಧಿಸಿದ ವಿಷಯದ ಬಗ್ಗೆ ವಾದಿಸಿದ ನಂತರ ಮುಂದಿನ ವರ್ಷ ಅರ್ಜಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿತು. ಅದನ್ನು ವಜಾಗೊಳಿಸಬಾರದು ಎಂದು ಮನವಿ ಮಾಡಲಾಗಿತ್ತು. ಕಾನೂನಿನ ಮೂಲಕ ನಾವು ಇದನ್ನು ನಿರ್ಧರಿಸುತ್ತೇವೆ. ಒಂದು ವರ್ಷಕ್ಕೆ ಮುಂದೂಡಲಾಗುವುದು ಎಂದು ಪೀಠ ಹೇಳಿದೆ. ಚೋಡಂಕರ್ ಅವರು ಆಗಸ್ಟ್ 2019 ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೂನ್ 2020 ರಲ್ಲಿ ಈ ವಿಷಯದಲ್ಲಿ ನೋಟಿಸ್‌ಗಳನ್ನು ನೀಡುವ ಮೊದಲು ಅದು ಬಾಕಿ ಉಳಿದಿತ್ತು. ಅರ್ಜಿಯು ಅಂದಿನ ಗೋವಾ ಸ್ಪೀಕರ್ ರಾಜೇಶ್ ಪಟ್ನೇಕರ್ ಅನರ್ಹತೆಯ ಬಗ್ಗೆ ನಿರ್ಧರಿಸಲು ನಿರ್ದೇಶನಗಳನ್ನು ಕೇಳಿದೆ. ಪಟ್ನೇಕರ್ ಅವರ ಕಡೆಯಿಂದ ಮಾಡಿದ ವಿಳಂಬವು ಅನರ್ಹತೆ ಅರ್ಜಿಗಳನ್ನು ನಿರುಪಯುಕ್ತವಾಗಿಸುತ್ತದೆ ಎಂದು ಅದು ಹೇಳಿದೆ.

ಜುಲೈ 2019ರಲ್ಲಿ, 40 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರಲ್ಲಿ ಮೂರನೇ ಎರಡರಷ್ಟು ಶಾಸಕರನ್ನು ಹೊಂದಿದ್ದೇವೆ. ಅನರ್ಹತೆಯ ಮಾಡದೆಯೇ ನಮ್ಮ ಬಿಜೆಪಿಯೊಂದಿಗೆ “ವಿಲೀನಗೊಳಿಸಬಹುದು” ಎಂದು 10 ಶಾಸಕರು ಪ್ರತಿಪಾದಿಸಿದರು. ತಮ್ಮ ಅರ್ಜಿಯಲ್ಲಿ, ಚೋಡಂಕರ್ ಅವರು ಕೇಶಮ್ ಮೇಘಚಂದ್ರ ಸಿಂಗ್ ವಿರುದ್ಧ ಮಣಿಪುರ ವಿಧಾನಸಭಾ ಸ್ಪೀಕರ್ ಪ್ರಕರಣದಲ್ಲಿ 2020ರ ತೀರ್ಪನ್ನು ಉಲ್ಲೇಖಿಸಿದ್ದಾರೆ, ಇದರಲ್ಲಿ ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಅನರ್ಹತೆಯ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸದೆ. ಸಂವಿಧಾನದ ಹತ್ತನೇ ಶೆಡ್ಯೂಲ್ ಇದು ಪಕ್ಷಾಂತರಗಳ ಬಗ್ಗೆ ಹೇಳಿದ್ದು ಸಮಂಜಸವಾದ ಕಾಲಮಿತಿ ಅಥವಾ ಮೂರು ತಿಂಗಳೊಳಗೆ ತೀರ್ಮಾನಿಸಬೇಕು ಎಂದು ಹೇಳುತ್ತದೆ.

“ಪ್ರತಿವಾದಿ [ಗೋವಾ ಸ್ಪೀಕರ್] ಉದ್ದೇಶಪೂರ್ವಕವಾಗಿ ಅನರ್ಹತೆ ಅರ್ಜಿಯನ್ನು ನಿರ್ಧರಿಸುವುದರಿಂದ ಮತ್ತು ಮಧ್ಯಂತರ ಪರಿಹಾರಗಳನ್ನು ಪ್ರಾರ್ಥಿಸದಂತೆ ನಿರ್ಬಂಧಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪ್ರತಿವಾದಿಯ ಕಡೆಯಿಂದ ಇಂತಹ ಉದ್ದೇಶಪೂರ್ವಕ ನಿಷ್ಕ್ರಿಯತೆ ಅಥವಾ ನಿರ್ಣಯವು ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ನೀಡಲಾದ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ