MCD Election Results 2022: ದೆಹಲಿ MCD ಚುನಾವಣೆ ಮತ ಎಣಿಕೆ ಆರಂಭ, AAP ಮುನ್ನಡೆ
ಇಂದು ದೆಹಲಿ MCD ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ (MCD) ಚುನಾವಣೆ 2022ರ ಮತಗಳ ಎಣಿಕೆ ಪ್ರಾರಂಭವಾಗಿದೆ. ಇದೀಗ ಎಎಪಿ ಮುನ್ನಡೆಯನ್ನು ಸಾಧಿಸುತ್ತಿದೆ. ಎಂಸಿಡಿ ಚುನಾವಣಾ ಫಲಿತಾಂಶಗಳ ಆರಂಭಿಕ ಪ್ರವೃತ್ತಿಗಳು ಬೆಳಿಗ್ಗೆ 9 ಗಂಟೆಗೆ ಆರಂಬವಾಗಿದೆ.
ದೆಹಲಿ: ಇಂದು ದೆಹಲಿ MCD ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ (MCD) ಚುನಾವಣೆ 2022ರ ಮತಗಳ ಎಣಿಕೆ ಪ್ರಾರಂಭವಾಗಿದೆ. ಇದೀಗ ಎಎಪಿ ಮುನ್ನಡೆಯನ್ನು ಸಾಧಿಸುತ್ತಿದೆ. ಎಂಸಿಡಿ ಚುನಾವಣಾ ಫಲಿತಾಂಶಗಳ ಆರಂಭಿಕ ಪ್ರವೃತ್ತಿಗಳು ಬೆಳಿಗ್ಗೆ 9 ಗಂಟೆಗೆ ಆರಂಬವಾಗಿದೆ. ರಾಷ್ಟ್ರೀಯ ರಾಜಧಾನಿಯ 250-ವಾರ್ಡ್ ನಾಗರಿಕ ಸಂಸ್ಥೆಗೆ ಡಿಸೆಂಬರ್ 5 ರಂದು ಮತದಾನ ನಡೆಯಿತು, ಮೂರು MCD ಗಳನ್ನು ಒಂದಾಗಿ ವಿಲೀನಗೊಳಿಸಿದ ನಂತರ ಇದು ಮೊದಲನೆಯದ ಬಾರಿ ಮತದಾನವಾಗಿದೆ. ಸುಮಾರು 1,349 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಸಮೀಕ್ಷೆಗಳ ಪ್ರಕಾರ, ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಕ್ಲೀನ್ ಸ್ವೀಪ್ ಆಗಿದೆ, ಪ್ರಸ್ತುತ ಭಾರತೀಯ ಜನತಾ ಪಕ್ಷದ ದೆಹಲಿ ನಾಗರಿಕ ಸಂಸ್ಥೆಯ 15 ವರ್ಷಗಳ ಆಡಳಿತವನ್ನು ಸೋಲಿಸುವ ನಿರೀಕ್ಷೆಯಿದೆ. 2017ರಲ್ಲಿ 270 ವಾರ್ಡ್‌ಗಳಲ್ಲಿ ಬಿಜೆಪಿ 181ರಲ್ಲಿ ಗೆಲುವು ಸಾಧಿಸಿದರೆ, ಎಎಪಿ 48 ಮತ್ತು ಕಾಂಗ್ರೆಸ್ 27ರಲ್ಲಿ ಗೆಲುವು ಸಾಧಿಸಿತ್ತು. ರಾಜ್ಯ ಚುನಾವಣಾ ಆಯೋಗವು (SEC) ತನ್ನ ಅಧಿಕೃತ ವೆಬ್‌ಸೈಟ್ – sec.delhi.gov.in – ಮತ್ತು ಅಪ್ಲಿಕೇಶನ್‌ನಲ್ಲಿ ಬೆಳಿಗ್ಗೆ 8 ರಿಂದ ಟ್ರೆಂಡ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ.
ಇದನ್ನು ಓದಿ: ಗುಜರಾತ್, ಹಿಮಾಚಲದಲ್ಲಿ ಗೆಲುವಿನ ವಿಶ್ವಾದಲ್ಲಿರುವ ಬಿಜೆಪಿಗೆ ದಿಲ್ಲಿಯಲ್ಲಿ AAP ಶಾಕ್
2017ರ ಮುನ್ಸಿಪಲ್ ಚುನಾವಣೆಯಲ್ಲಿ 181 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 69 ರಿಂದ 91 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಒಂದೇ ಅಂಕೆ ಸ್ಥಾನಕ್ಕೆ ಸೀಮಿತವಾಗುವ ಸಾಧ್ಯತೆ ಇದೆ. ಎಎಪಿ 150 ರಿಂದ 175, ಬಿಜೆಪಿ 70 ರಿಂದ 92 ಮತ್ತು ಕಾಂಗ್ರೆಸ್ 4 ರಿಂದ 7 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ನ್ಯೂಸ್ ಎಕ್ಸ್-ಜನ್ ಕಿ ಬಾತ್ ಎಕ್ಸಿಟ್ ಪೋಲ್ ಹೇಳಿದೆ. ಕಾಂಗ್ರೆಸ್ 2002 ಮತ್ತು 2007 ರ ನಡುವೆ ನಾಗರಿಕ ಸಂಸ್ಥೆಯನ್ನು ಮುನ್ನಡೆಸಿತು.