MCD Election Result ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್​ ಜಯಭೇರಿ; ದೆಹಲಿ ಜನರಿಗೆ ಧನ್ಯವಾದ ಹೇಳಿದ ಕೇಜ್ರಿವಾಲ್

ಇಷ್ಟು ದೊಡ್ಡ ಗೆಲುವಿಗೆ, ಬದಲಾವಣೆಗಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ.ನಿಮ್ಮ ಮಗ, ಅಣ್ಣ ತಮ್ಮನ್ನು ನಂಬಿ ಎಂಸಿಡಿ ನೀಡಿದ್ದಿರಿ. ಈವರೆಗೂ ನೀವು ನೀಡಿದ ಎಲ್ಲಾ ಜವಾಬ್ದಾರಿ ನಿಭಾಯಿಸಿದ್ದೇವೆ. ಶಾಲೆ, ಆಸ್ಪತ್ರೆಗಳನ್ನು ಹಗಲು ರಾತ್ರಿ ಶ್ರಮಪಟ್ಟು ಸರಿಪಡಿಸಿದ್ದೇವೆ. ವಿದ್ಯುತ್, ನೀರನ್ನು ಉಚಿತವಾಗಿ ‌ನೀಡಿದ್ದೇವೆ. ಈಗ ದೆಹಲಿಯನ್ನು ಸ್ಪಷ್ಟಗೊಳಿಸುವ ಜವಾಬ್ದಾರಿ ನೀಡಿದ್ದೀರಿ ಎಂದ ಕೇಜ್ರಿವಾಲ್

MCD Election Result ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್​ ಜಯಭೇರಿ; ದೆಹಲಿ ಜನರಿಗೆ ಧನ್ಯವಾದ ಹೇಳಿದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 07, 2022 | 6:07 PM

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ(Municipal Corporation of Delhiಆಮ್ ಆದ್ಮಿ ಪಕ್ಷ (AAP) 132 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ.ಅದೇ ವೇಳೆ 15 ವರ್ಷಗಳ ಕಾಲ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ 102, ಕಾಂಗ್ರೆಸ್ 9 ಸೀಟು ಗಳಿಸಿದೆ. 12 ಪಕ್ಷೇತರರು ಕೂಡಾ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ.ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್(Arvind Kejriwal), ದೆಹಲಿ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇಷ್ಟು ದೊಡ್ಡ ಗೆಲುವಿಗೆ, ಬದಲಾವಣೆಗಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ.ನಿಮ್ಮ ಮಗ, ಅಣ್ಣ ತಮ್ಮನ್ನು ನಂಬಿ ಎಂಸಿಡಿ ನೀಡಿದ್ದಿರಿ. ಈವರೆಗೂ ನೀವು ನೀಡಿದ ಎಲ್ಲಾ ಜವಾಬ್ದಾರಿ ನಿಭಾಯಿಸಿದ್ದೇವೆ. ಶಾಲೆ, ಆಸ್ಪತ್ರೆಗಳನ್ನು ಹಗಲು ರಾತ್ರಿ ಶ್ರಮಪಟ್ಟು ಸರಿಪಡಿಸಿದ್ದೇವೆ. ವಿದ್ಯುತ್, ನೀರನ್ನು ಉಚಿತವಾಗಿ ‌ನೀಡಿದ್ದೇವೆ. ಈಗ ದೆಹಲಿಯನ್ನು ಸ್ಪಷ್ಟಗೊಳಿಸುವ ಜವಾಬ್ದಾರಿ ನೀಡಿದ್ದೀರಿ.ನಾವು ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಹಗಲು ರಾತ್ರಿ ಕೆಲಸ ಮಾಡಿ ದೆಹಲಿ ಸ್ವಚ್ಛ ಮಾಡುತ್ತೇವೆ.ಕಾಂಗ್ರೆಸ್ ಬಿಜೆಪಿಯಿಂದ ಗೆಲುವು ಸಾಧಿಸಿದ ಸದಸ್ಯರಿಗೂ ಅಭಿನಂದನೆ. ಸೋತ ಅಭ್ಯರ್ಥಿಗಳಿಂದಲೂ ನಾವು ಸಲಹೆ ಪಡೆಯುತ್ತೇವೆ ಎಂದು ಹೇಳಿದ್ದಾರೆ.

ದೆಹಲಿ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿದ  ನಂತರ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಮತ್ತು ಕೇಂದ್ರದ ಸಹಕಾರದ ಅಗತ್ಯವಿದೆ ಎಂದಿದ್ದಾರೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಯಲ್ಲಿ ಭರ್ಜರಿ ಗೆಲುವಿಗಾಗಿ ದೆಹಲಿಗೆ ಧನ್ಯವಾದ ಹೇಳಿದ ಅವರು ಐ ಲವ್ಯೂ ಎಂದಿದ್ದಾರೆ.

ಎಎಪಿಯ ವಿಜಯವು ರಾಜಧಾನಿಯಲ್ಲಿ ಮೊದಲ ಬಾರಿಗೆ “ಡಬಲ್ ಎಂಜಿನ್” ಸರ್ಕಾರವನ್ನು ನೀಡುತ್ತದೆ.ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಮತ್ತು ನಾಗರಿಕ ಸಂಸ್ಥೆಯ ಮೇಲಿನ ತನ್ನ ನಿಯಂತ್ರಣದ ಮೂಲಕ ಬಿಜೆಪಿ ತನ್ನ ಯೋಜನೆಗಳನ್ನು ತಡೆಯುತ್ತಿದೆ ಎಂದು ಪಕ್ಷವು ಆರೋಪಿಸಿದೆ. ನಮಗೆ ಕೇಂದ್ರ ಸರ್ಕಾರದ ಸಹಾಯ ಬೇಕು. ನಮಗೆ ಪ್ರಧಾನಿ ಮತ್ತು ಕೇಂದ್ರದ ಆಶೀರ್ವಾದ (ಆಶೀರ್ವಾದ) ಬೇಕು” ಎಂದಿದ್ದಾರೆ ಕೇಜ್ರಿವಾಲ್.

ಜನರು ರಚನಾತ್ಮಕ ರಾಜಕೀಯವನ್ನು ಬಯಸುತ್ತಾರೆಯೇ ಹೊರತು ಋಣಾತ್ಮಕತೆಯಲ್ಲ ಎಂಬುದು ಈ ಸಮೀಕ್ಷೆಗಳ ದೊಡ್ಡ ಸಂದೇಶವಾಗಿದೆ ಎಂದು ಅವರು ಹೇಳಿದರು.

“ನಾನು ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಮನವಿ ಮಾಡುತ್ತೇನೆ ನಾವು ಇಲ್ಲಿಯವರೆಗೆ ರಾಜಕೀಯದಲ್ಲಿ ತೊಡಗಿದ್ದೇವೆ. ಈಗ ನಾವು ಒಟ್ಟಾಗಿ ಕೆಲಸ ಮಾಡಬೇಕು. ನಮಗೆ ಬಿಜೆಪಿ ಮತ್ತು ಕಾಂಗ್ರೆಸ್ ಸಹಕಾರ ಬೇಕು. ನಾವು ಒಟ್ಟಾಗಿ ದೆಹಲಿಯನ್ನು ಸರಿಪಡಿಸುತ್ತೇವೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ

ಎಎಪಿ 134 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು  ಪರಾಭವಗೊಳಿಸಿದೆ. 250 ಸ್ಥಾನಗಳಿರುವ ಎಂಸಿಡಿಯಲ್ಲಿ ಬಹುಮತಕ್ಕಿಂತ ಎಂಟು ಹೆಚ್ಚು ಸೀಟುಗಳನ್ನು ಆಮ್ ಆದ್ಮಿ ಪಕ್ಷ ಗಳಿಸಿದೆ. ಬಿಜೆಪಿ 104 ಸೀಟು ಗೆದ್ದಿದ್ದು  ಕಾಂಗ್ರೆಸ್ 9 ಸ್ಥಾನಗಳಿಸಿದೆ. ಯಾವುದೇ ಚುನಾವಣೆಯಲ್ಲಿ ಎಎಪಿ ಬಿಜೆಪಿಯನ್ನು ಸೋಲಿಸಿದ್ದು ಇದೇ ಮೊದಲು.

ಎಂದಿಗೂ ಅಹಂಕಾರಿಯಾಗಬೇಡಿ. ದುರಹಂಕಾರವು ಅನೇಕ ಶ್ರೇಷ್ಠರನ್ನು ಕೆಳಗಿಳಿಸಿದೆ. ಜನರು ನಿಮ್ಮ ದುರಹಂಕಾರವನ್ನು ಕ್ಷಮಿಸಬಹುದು ಆದರೆ ದೇವರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳುವ ಮೂಲಕ ಕೇಜ್ರಿವಾಲ್ ತಮ್ಮ ಭಾಷಣ ಮುಗಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Wed, 7 December 22

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ