ದೆಹಲಿ ಮದ್ಯ ಹಗರಣ ಪ್ರಕರಣ; ಕೆಸಿಆರ್ ಪುತ್ರಿ ಕವಿತಾರನ್ನು 6 ಗಂಟೆಗಿಂತಲೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಸಿಬಿಐ

Delhi liquor row case 'ಹಗರಣ'ದಲ್ಲಿ ಆಪಾದಿತ ಕಿಕ್‌ಬ್ಯಾಕ್‌ಗಳ ಕುರಿತು ದೆಹಲಿ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಅವರ ಹೆಸರು ಕೇಳಿ ಬಂದಾಗ ತಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಕವಿತಾ ಹೇಳಿದ್ದರು.

ದೆಹಲಿ ಮದ್ಯ ಹಗರಣ ಪ್ರಕರಣ; ಕೆಸಿಆರ್ ಪುತ್ರಿ ಕವಿತಾರನ್ನು 6 ಗಂಟೆಗಿಂತಲೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಸಿಬಿಐ
ಕಲ್ವಕುಂಟ್ಲಾ ಕವಿತಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 11, 2022 | 6:50 PM

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ (Delhi liquor row case) ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ತೆಲಂಗಾಣ ರಾಷ್ಟ್ರ ಸಮಿತಿ (Telangana Rashtra Samithi) ಎಂಎಲ್‌ಸಿ ಆಗಿರುವ ಕಲ್ವಕುಂಟ್ಲಾ ಕವಿತಾ (Kalvakuntla Kavitha) ಅವರನ್ನು ಕೇಂದ್ರ ತನಿಖಾ ದಳ (CBI) ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ. ದೆಹಲಿಯಿಂದ ಆಗಮಿಸಿದ ಮಹಿಳೆಯರೂ ಸೇರಿದಂತೆ ಅಧಿಕಾರಿಗಳ ತಂಡ ಬೆಳಗ್ಗೆ 11 ಗಂಟೆ ಸುಮಾರಿಗೆ ಬಂಜಾರಾ ಹಿಲ್ಸ್‌ನಲ್ಲಿರುವ ಕವಿತಾ ಅವರ ನಿವಾಸಕ್ಕೆ ಬಂದಿತ್ತು. ಹಿಂದಿನ ಸಂವಹನದ ಪ್ರಕಾರ ಆಕೆಯನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಲು ಸಿಬಿಐ ಸಿಆರ್ ಪಿಸಿ ಸೆಕ್ಷನ್ 160 ಅಡಿಯಲ್ಲಿ ಕವಿತಾ ಅವರಿಗೆ ನೋಟಿಸ್ ನೀಡಿತ್ತು. ವರದಿಯ ಪ್ರಕಾರ, ಆಕೆಯ ವಕೀಲರ ಸಮ್ಮುಖದಲ್ಲಿ ಆಕೆಯ ನಿವಾಸದ ಕೆಳ ಮಹಡಿಯ ಕಚೇರಿಯಲ್ಲಿ ಈ ವಿಚಾರಣೆ ಯೋಜಿಸಲಾಗಿತ್ತು. ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಆರೋಪಿಯ ನವೆಂಬರ್ 30 ರ ರಿಮಾಂಡ್ ವರದಿಯಲ್ಲಿ ಕವಿತಾ ಅವರ ಹೆಸರು ಕಾಣಿಸಿಕೊಂಡಾಗಿನಿಂದ ರಾಜಕೀಯ ವಲಯಗಳಲ್ಲಿ ಉನ್ನತ ಮಟ್ಟದ ಚರ್ಚೆಗಳು ನಡೆದಿವೆ. ‘ಹಗರಣ’ದಲ್ಲಿ ಆಪಾದಿತ ಕಿಕ್‌ಬ್ಯಾಕ್‌ಗಳ ಕುರಿತು ದೆಹಲಿ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಅವರ ಹೆಸರು ಕೇಳಿ ಬಂದಾಗ ತಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಕವಿತಾ ಹೇಳಿದ್ದರು. ಸಿಬಿಐ ನವೆಂಬರ್ 25 ರಂದು ಏಳು ಆರೋಪಿಗಳ ವಿರುದ್ಧ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ.

ಇದುವರೆಗೆ ನಡೆಸಲಾದ ತನಿಖೆಯ ಪ್ರಕಾರ, ವಿಜಯ್ ನಾಯರ್, ಎಎಪಿ ನಾಯಕರ ಪರವಾಗಿ ಸೌತ್ ಗ್ರೂಪ್ (ಶರತ್ ರೆಡ್ಡಿ, ಎಂಎಸ್ ಕೆ ಕವಿತಾ, ಮಾಗುಂಟ ಶ್ರೀನಿವಾಸುಲು ರೆಡ್ಡಿ ನಿಯಂತ್ರಿಸುವ ಗುಂಪಿನಿಂದ) ಅಮಿತ್ ಅರೋರಾ ಸೇರಿದಂತೆ ವಿವಿಧ ವ್ಯಕ್ತಿಗಳಿಂದ ಕನಿಷ್ಠ 100 ಕೋಟಿ ರೂ.ಗಳಷ್ಟು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಇಡಿ ಆರೋಪಿಗಳಲ್ಲಿ ಒಬ್ಬನಾದ ಅಮಿತ್ ಅರೋರಾಗೆ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ
Image
ಕೃಷಿ ಸಾಲ ನೀಡಲು ಲಂಚಕ್ಕೆ ಬೇಡಿಕೆ: ರೈತ ಕೊಟ್ಟ ದೂರಿನಿಂದ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿಗೆ 2 ವರ್ಷ ಜೈಲು, 15 ಸಾವಿರ ದಂಡ
Image
ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಪ್ರಭಾವಿ ವ್ಯಕ್ತಿಗಳ ಮನೆಗಳ ಮೇಲೆ ಐಟಿ ಆಧಿಕಾರಿಗಳ ದಾಳಿ
Image
Liquor scam Case: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಮನ್ಸ್​ ಕುರಿತು ಸಿಬಿಐಗೆ ಪತ್ರ ಬರೆದ ಕವಿತಾ

ಆದರೆ ಇಲ್ಲಿನ ಆಡಳಿತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕವಿತಾ ಅವರ ಬೆಂಬಲಕ್ಕೆ ನಿಂತು ಆವರು ಯಾವುದೇ ಕಾರಣಕ್ಕೂ ಕುಗ್ಗದಂತೆ ನೋಡಿಕೊಂಡರು. ಕವಿತಾ ಅವರು ತಮ್ಮ ತಂದೆ ಮತ್ತು ಸಿಎಂ ಕೆಸಿಆರ್ ಅವರನ್ನು ಅನೇಕ ಸಂದರ್ಭಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಭೇಟಿ ಮಾಡಿದ್ದಾರೆ.

ಭಾನುವಾರ, ಆಕೆಯ ವಿಚಾರಣೆಗೆ ಮುನ್ನ ಆಕೆಯ ನಿವಾಸಕ್ಕೆ ಹೋಗುವ ಇಡೀ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ಆಕೆಗೆ ಬೆಂಬಲ ವ್ಯಕ್ತಪಡಿಸಿ ಗುಲಾಬಿ ಬಣ್ಣದ ಫ್ಲೆಕ್ಸಿಗಳಲ್ಲಿ ಅಲಂಕರಿಸಲಾಗಿತ್ತು. ತಂದೆ-ಮಗಳ ಫೋಟೊ ಇರುವ ಫ್ಲೆಕ್ಸ್ ಗಳಲ್ಲಿ “ಹೋರಾಟಗಾರನ ಮಗಳು ಎಂದಿಗೂ ಹೆದರುವುದಿಲ್ಲ”, “ನಾವು ಕವಿತಕ್ಕನ ಜೊತೆಗಿದ್ದೇವೆ” ಎಂಬ ಬರೆಲಾಗಿತ್ತು.

ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಕವಿತಾ ನಿವಾಸದ ಮುಂದೆ ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಭಾರೀ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಯಾವುದೇ ಅಹಿತಕರ ಪರಿಸ್ಥಿತಿಯನ್ನು ತಪ್ಪಿಸಲು ಆಕೆಯ ನಿವಾಸದ ಸಮೀಪದಲ್ಲಿ ಕಾರ್ಯಕರ್ತರು ಇರದಂತೆ ಸೂಚಿಸಲಾಗಿತ್ತು ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ