ಗೋವಾದ ಮೊಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರಿಕ್ಕರ್ ಹೆಸರು; ಏನಿದರ ವಿಶೇಷತೆ?
ಈ ವಿಮಾನ ನಿಲ್ದಾಣಕ್ಕೆ ಮಾರ್ಚ್ 2019 ರಲ್ಲಿ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೆಸರನ್ನಿಡಲಾಗಿದೆ. ಮೋಪಾದಲ್ಲಿನ ಅತ್ಯಾಧುನಿಕ ವಿಮಾನ ನಿಲ್ದಾಣವು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ
ಪಣಜಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಭಾನುವಾರ) ಉತ್ತರ ಗೋವಾದ ಮೊಪಾದಲ್ಲಿ (Mopa) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದರು.ಈ ವಿಮಾನ ನಿಲ್ದಾಣಕ್ಕೆ ಮಾರ್ಚ್ 2019 ರಲ್ಲಿ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ (Manohar Parrikar) ಹೆಸರನ್ನಿಡಲಾಗಿದೆ. ಮೋಪಾದಲ್ಲಿನ ಅತ್ಯಾಧುನಿಕ ವಿಮಾನ ನಿಲ್ದಾಣವು ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಗೋವಾದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ. ಮನೋಹರ್ ಪರಿಕ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇಂದು ದೇಶದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಬದಲಾದ ಸರ್ಕಾರದ ಚಿಂತನೆ ಮತ್ತು ವಿಧಾನಕ್ಕೆ ಪುರಾವೆಯಾಗಿದೆ. ದೇಶದ ಚಿಕ್ಕ ನಗರಗಳಿಗೆ ವಿಮಾನ ಪ್ರಯಾಣವನ್ನು ಕೈಗೊಳ್ಳಲು ನಾವು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
Hon’ble PM Shri @narendramodi inaugurates greenfield international airport in Mopa, Goa. #YevkarModiJihttps://t.co/42anP2pmVs
— Kiren Rijiju (@KirenRijiju) December 11, 2022
ವಿಮಾನ ನಿಲ್ದಾಣದ ಬಗ್ಗೆ
- ಉತ್ತರ ಗೋವಾದ ಮೋಪಾದಲ್ಲಿ ₹ 2,870 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣವು ದಬೋಲಿಮ್‌ನಲ್ಲಿರುವ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ಜೊತೆಗೆ ರಾಜ್ಯದ ಎರಡನೇ ವಿಮಾನ ನಿಲ್ದಾಣವಾಗಿದೆ.
- ವಿಮಾನ ನಿಲ್ದಾಣವು ಮೊದಲ ಹಂತದಲ್ಲಿ ವರ್ಷಕ್ಕೆ 44 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸಂಪೂರ್ಣ ಯೋಜನೆ ಪೂರ್ಣಗೊಂಡ ನಂತರ ಇದು ವರ್ಷಕ್ಕೆ ಒಂದು ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಲಿದೆ.
- ದಾಬೋಲಿಮ್ ವಿಮಾನ ನಿಲ್ದಾಣ ವರ್ಷಕ್ಕೆ 85 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಹೊಸ ವಿಮಾನ ನಿಲ್ದಾಣದಂತೆ ಇದು ಸರಕು ಸಾಗಣೆಯ ಸೌಲಭ್ಯವನ್ನು ಹೊಂದಿಲ್ಲ.
- ಉತ್ತರ ಗೋವಾ ಈಗಾಗಲೇ ಜನಪ್ರಿಯ ಪ್ರವಾಸಿ ತಾಣವಾಗಿರುವ ಕಾರಣ ಮೊಪಾದಲ್ಲಿನ ಹೊಸ ವಿಮಾನ ನಿಲ್ದಾಣವು ಸ್ಥಳೀಯ ಆರ್ಥಿಕತೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.
- ಈ ಹಿಂದೆ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ವಿಮಾನ ನಿಲ್ದಾಣಕ್ಕೆ ತಮ್ಮ ತಂದೆಯ ಹೆಸರನ್ನು ಇಟ್ಟರೆ ಅದು “ಸಂತೋಷದ ಕ್ಷಣ” ಎಂದು ಹೇಳಿದ್ದರು.
- ಪ್ರಧಾನಿ ಮೋದಿ ಅವರು ನವೆಂಬರ್ 2016 ರಲ್ಲಿ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮಾಡಿದರು.
- ಈ ಬಗ್ಗೆ ಸರಣಿ ಟ್ವೀಟ್ ಮಾಡಿದ GMR ಗೋವಾ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್, ಈ ಸೌಲಭ್ಯವು ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.
- ವಿಮಾನಯಾನ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಪೊಲೀಸ್ ಠಾಣೆ ನಿರ್ಮಾಣಕ್ಕೆ 3-ಡಿ ಏಕಶಿಲೆಯ ಪ್ರಿಕಾಸ್ಟ್ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ.
- ಉತ್ತಮ ಸಂಪರ್ಕಕ್ಕಾಗಿ 5G ಹೊಂದಾಣಿಕೆಯ ಐಟಿ ಮೂಲಸೌಕರ್ಯವನ್ನು ರಚಿಸಲಾಗಿದೆ ಎಂದು ಅದು ಹೇಳಿದೆ. ವೇಗವಾಗಿ ಚೆಕ್-ಇನ್ ಮಾಡಲು ಸ್ವಯಂ-ಬ್ಯಾಗೇಜ್ ಡ್ರಾಪ್ ಆಯ್ಕೆ ಇಲ್ಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ