ಪ್ರಧಾನಿ ನರೇಂದ್ರ ಮೋದಿ ತೊಟ್ಟಿದ್ದ ಪೇಟ ಖರೀದಿಸಿದ ಮೈಸೂರಿನ ಅಭಿಮಾನಿ
ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದ 1200 ವಸ್ತುಗಳನ್ನು ಇ-ಹರಾಜಿಗೆ ಇಡಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ಮೈಸೂರಿನ ಶ್ರೀಕಂಠಕುಮಾರ್ 3,300 ರೂ.ಗೆ ಮೋದಿ ತೊಟ್ಟಿದ್ದ ಪೇಟವನ್ನು ಖರೀದಿಸಿದ್ದಾರೆ.
ಮೈಸೂರು: ಮೈಸೂರಿನ (Mysuru) ಶ್ರೀರಾಂಪುರದ ಶ್ರೀಕಂಠಕುಮಾರ್ ಎಂಬ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ (Narendra Modi) ತೊಟ್ಟಿದ್ದ ಪೇಟವನ್ನು ಹರಾಜಿನ ಮೂಲಕ ಖರೀದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕೊಟ್ಟ ಸ್ಮರಣಿಕೆಗಳನ್ನು ಅಕ್ಟೋಬರ್ 14ರಂದು ಇ- ಹರಾಜು ಹಾಕಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ಮೈಸೂರಿನ ಶ್ರೀಕಂಠಕುಮಾರ್ 3,300 ರೂ.ಗೆ ಮೋದಿ ತೊಟ್ಟಿದ್ದ ಪೇಟವನ್ನು ಖರೀದಿಸಿದ್ದಾರೆ.
ಮೋದಿಗೆ ಸಂಬಂಧಿಸಿದ 1200 ವಸ್ತುಗಳನ್ನು ಇ-ಹರಾಜಿಗೆ ಇಡಲಾಗಿತ್ತು. ಒಟ್ಟು 14 ಜನ ಈ ಪೇಟದ ಹರಾಜಿನಲ್ಲಿ ಭಾಗಿಯಾಗಿದ್ದರು. ಪೇಟ ಖರೀದಿಸಿದ ನಂತರ ಪ್ರಮಾಣಪತ್ರದ ಜೊತೆ ಶ್ರೀಕಂಠ ಕುಮಾರ್ ಅವರ ಮನೆ ವಿಳಾಸಕ್ಕೆ ಪೇಟವನ್ನು ಪ್ರಧಾನಿ ಕಾರ್ಯಾಲಯ ಕಳುಹಿಸಿಕೊಟ್ಟಿದೆ. ಖರೀದಿ ಮಾಡಿದ ಹಣವನ್ನು ಗಂಗಾ ನಮಾಮಿ ಯೋಜನೆಗೆ ಬಳಸುವ ಬಗ್ಗೆ ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಲಾಗಿದೆ.