Kantara: ‘ಕಾಂತಾರ’ ಚಿತ್ರ ಯಶಸ್ವಿ ಹಿನ್ನೆಲೆ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ಕೋಲ ಸಲ್ಲಿಸಿದ ಚಿತ್ರತಂಡ
ಕಾಂತಾರ ಯಶಸ್ವಿಯಾಗಿದಕ್ಕೆ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಚಿತ್ರತಂಡ ಹರಕೆ ಕೋಲ ಸಲ್ಲಿಸಿದೆ. ಈ ವೇಳೇ ಕಾಂತಾರಾ-2 ಚಿತ್ರಕ್ಕೆ ಅನುಮತಿ ಕೇಳಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ವಿಶ್ವಮಟ್ಟದಲ್ಲಿ ಸದ್ದು ಮಾಡಿದ ಚಿತ್ರ ‘ಕಾಂತಾರ’ (Kantara). ‘ಕಾಂತಾರ’ ಯಶಸ್ವಿಯಾದ ಬಳಿಕ ‘ಕಾಂತಾರ 2’ ಚಿತ್ರವನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದರ ಬಗ್ಗೆ ರಿಷಬ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸದ್ಯ ‘ಕಾಂತಾರ’ ಯಶಸ್ವಿಯಾಗಿದಕ್ಕೆ ಅಣ್ಣಪ್ಪ ಪಂಜುರ್ಲಿ (Annappa Panjurli) ದೈವಕ್ಕೆ ಚಿತ್ರತಂಡ ಹರಕೆ ಕೋಲ ಸಲ್ಲಿಸಿದೆ. ಈ ವೇಳೇ ‘ಕಾಂತಾರ-2’ ಚಿತ್ರಕ್ಕೆ ಅನುಮತಿ ಕೇಳಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತದೆ. ಆದರೆ ಈ ವಿಚಾರವನ್ನು ಚಿತ್ರತಂಡ ಅಧಿಕೃತಗೊಳಿಸಿಲ್ಲ. ನಿರ್ಮಾಪಕ ವಿಜಯ್ ಕಿರಗಂದೂರು, ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ ಸೇರಿದಂತೆ ‘ಕಾಂತಾರ’ ಕಲಾವಿದರು ಕೋಲದಲ್ಲಿ ಭಾಗಿಯಾಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.